ಭದ್ರಾವತಿ ತಾಲೂಕಿನ ಜೀವ ನದಿ ಭದ್ರಾ ಜಲಾಶಯ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಲಾಶಯ ಪುನಃ ಭರ್ತಿಯಾಗಿದೆ.
ಭದ್ರಾವತಿ: ತಾಲೂಕಿನ ಜೀವ ನದಿ ಭದ್ರಾ ಜಲಾಶಯ ವ್ಯಾಪ್ತಿಯ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಲಾಶಯ ಪುನಃ ಭರ್ತಿಯಾಗಿದೆ.
ಜಲಾಶಯದ ಗರಿಷ್ಠ ಮಟ್ಟ ೧೮೬ ಅಡಿಯಾಗಿದ್ದು, ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಒಳ ಹರಿವು ೭೮೬೯ ಕ್ಯೂಸೆಕ್ ಇದ್ದು, ಜಲಾಶಯದ ಸುರಕ್ಷತೆ ಹಿನ್ನಲೆಯಲ್ಲಿ ಇಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಭದ್ರಾ ಬಲದಂಡೆ ನಾಲೆ(ಆರ್.ಬಿ.ಸಿ)ಗೆ ೧,೪೦೦ ಕ್ಯೂಸೆಕ್ ಮತ್ತು ಭದ್ರಾ ಎಡದಂಡೆ ನಾಲೆ(ಎಲ್.ಬಿ.ಸಿ)ಗೆ ೧೮೦ ಕ್ಯೂಸೆಕ್ ಹಾಗು ಭದ್ರಾ ಮೇಲ್ದಂಡೆ ಯೋಜನೆ(ಯು.ಬಿ.ಪಿ)ಗೆ ೭೦೦ ಕ್ಯೂಸೆಕ್ ನೀರು ಮತ್ತು ನದಿಗೆ ೨೦೦೦ ಸಾವಿರ ಕ್ಯೂಸೆಕ್ ಹರಿದು ಬಿಡಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಶೃಂಗೇರಿ ಎನ್‌ಆರ್ ಪುರ ಪ್ರದೇಶಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ನೀರಿನ ಮಟ್ಟ ೧೮೫.೧೧ ಅಡಿ ಇತ್ತು. ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಜಲಾಶಯ ಭರ್ತಿಯಾಗುವವರೆಗೂ ಕಾದಿದ್ದು, ಈಗ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನಷ್ಟೇ ಹೊರ ಹರಿವು ಹರಿಸಲಾಗುತ್ತಿದೆ. ೪ ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತಿರುವ ನೀರು ಹಾಲಿನ ನೊರೆಯಂತೆ ರಭಸದಿಂದ ಚಿಮ್ಮುದಿದ್ದು, ಮನೋಹಕವಾಗಿ ಕಂಡು ಬರುತ್ತಿದೆ.
ಈ ವರ್ಷ ಅತ್ಯಧಿಕ ಮಳೆಯಾಗಿದ್ದು, ಜುಲೈ ತಿಂಗಳಿನಿಂದ ಆರಂಭವಾದ ಮಳೆ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್‌ನಲ್ಲಿಯೂ ಮುಂದುವರೆದಿದ್ದು, ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ ೧೫೬.೮ ಅಡಿ ಇತ್ತು. ಬರಗಾಲವೂ ತಲೆದೋರಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಕೆರೆಕಟ್ಟೆಗಳು, ನದಿಗಳು ತುಂಬಿ ಹರಿದಿವೆ. ಭದ್ರಾ ಜಲಾಶಯ ಪುನಃ ಸಂಪೂರ್ಣವಾಗಿ ಭರ್ತಿಯಾಗಿರುವುದು ಭದ್ರಾ ಅಚ್ಚುಕಟ್ಟುದಾರ ಪ್ರದೇಶದ ರೈತರ ಸಂತಸ ಇಮ್ಮುಡಿಯಾಗುವಂತೆ ಮಾಡಿದೆ.
No comments:
Post a Comment