ನ್ಯೂಟೌನ್ ಪೊಲೀಸರ ಕಾರ್ಯಾಚರಣೆ, ೧,೩೬,೫೦೦ ಮೌಲ್ಯದ ಸ್ವತ್ತು ವಶ
ಭದ್ರಾವತಿ ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ತಾಮ್ರದ ವೈಂಡಿಂಗ್ ವೈರ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಭದ್ರಾವತಿ: ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ತಾಮ್ರದ ವೈಂಡಿಂಗ್ ವೈರ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸ ಕೋಡಿಹಳ್ಳಿ ಗ್ರಾಮ ದೇವರನರಸೀಪುರದ ನಿವಾಸಿ ವೆಂಕಟೇಶ ಅಲಿಯಾಸ್ ಬುಡ್ಡಾ(೨೯) ಹಾಗೂ ಎಕ್ಸಿನಾ ಕಾಲೋನಿ ನಿವಾಸಿ ಮುನೀರ್ ಜಾನ್ ಅಲಿಯಾಸ್ ತಿಕಲ(೩೬) ಇಬ್ಬರನ್ನು ಬಂಧಿಸಿ ಕಳ್ಳತನ ಮಾಡಲಾಗಿದ್ದ ತಾಮ್ರದ ತಂತಿ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು ಆಟೋ ಸೇರಿದಂತೆ ಒಟ್ಟು ೧,೩೬,೫೦೦ ರು. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ನೇತೃತ್ವದಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ.ಪಿ ರಮೇಶ್, ಸಿಬ್ಬಂದಿಗಳಾದ ಮಂಜಪ್ಪ, ನವೀನ್ ಮತ್ತು ಪ್ರಸನ್ನರವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಸೆ. ೮ ರಂದು ರಾತ್ರಿ ಕಾರ್ಖಾನೆಯ ಸೆಂಟ್ರಲ್ ಎಲೆಕ್ಟ್ರಿಕಲ್ ವರ್ಕ್ ಶಾಪ್‌ನಲ್ಲಿ ರಿಪೇರಿ ಮಾಡಲು ತಂದಿದ್ದ, ವೆಲ್ಡಿಂಗ್ ಮಷಿನ್‌ನಲ್ಲಿದ್ದ ೩೫,೦೦೦ ತಾಮ್ರದ ವೈಂಡಿಂಗ್‌ಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಕಾರ್ಖಾನೆಯ ಭದ್ರತಾ ವಿಭಾಗದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
No comments:
Post a Comment