Friday, November 8, 2024

ಸಸಿಗಳನ್ನು ನೆಡುವ ಮೂಲಕ ವಿಶಿಷ್ಟವಾಗಿ ಕನ್ನಡರಾಜ್ಯೋತ್ಸವ ಆಚರಣೆ

 ಹಲವು ವಿಭಿನ್ನ ರೀತಿಯ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ, ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ ದಿವಂಗತ ಎಪಿಜೆ ಅಬ್ದುಲ್ ಕಲಾಂರವರ ಜನ್ಮದಿನ ಹಾಗು ದೇಶದ ಪ್ರತಿಷ್ಠಿತ ಉದ್ಯಮಿ ದಿವಂಗತ ರತನ್ ಟಾಟಾರವರ ಪುಣ್ಯಸ್ಮರಣೆ ಭದ್ರಾವತಿ ನಗರದ ಬಿ.ಎಚ್ ರಸ್ತೆಯಲ್ಲಿ ಪರಿಸರ ಪ್ರೇಮಿಗಳೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು. 
    ಭದ್ರಾವತಿ: ಹಲವು ವಿಭಿನ್ನ ರೀತಿಯ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ, ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ ದಿವಂಗತ ಎಪಿಜೆ ಅಬ್ದುಲ್ ಕಲಾಂರವರ ಜನ್ಮದಿನ ಹಾಗು ದೇಶದ ಪ್ರತಿಷ್ಠಿತ ಉದ್ಯಮಿ ದಿವಂಗತ ರತನ್ ಟಾಟಾರವರ ಪುಣ್ಯಸ್ಮರಣೆ ನಗರದ ಬಿ.ಎಚ್ ರಸ್ತೆಯಲ್ಲಿ ಪರಿಸರ ಪ್ರೇಮಿಗಳೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು. 
    ಸುಮಾರು ೮೦ ಗಿಡಗಳನ್ನು ನೆಡುವ ಮೂಲಕ ಯುವ ಸಮುದಾಯಕ್ಕೆ ಪರಿಸರದ ಜಾಗೃತಿಯೊಂದಿಗೆ ಮುಂದಿನ ಪೀಳಿಗೆಗೆ ನಮ್ಮೆಲ್ಲರ ಕೊಡುಗೆಯನ್ನು ತಿಳಿಸಿಕೊಡಲಾಯಿತು.  ಅಲ್ಲದೆ ದೇಶಕ್ಕೆ ಎಪಿಜೆ ಅಬ್ದುಲ್ ಕಲಾಂರವರ ಕೊಡುಗೆಗಳನ್ನು  ಹಾಗು ಉದ್ಯಮ ಕ್ಷೇತ್ರದಲ್ಲಿ ರತನ್ ಟಾಟಾರವರ ಸಾಧನೆಗಳನ್ನು ಸ್ಮರಿಸಲಾಯಿತು. ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.  
    ರೋಟರಿ ಕ್ಲಬ್ ಅಧ್ಯಕ್ಷ  ರಾಘವೇಂದ್ರ ಉಪಾಧ್ಯಾಯ, ಕ್ರೈಸ್ತ ಮುಖಂಡ ಸೆಲ್ವರಾಜ್, ಮುಸ್ಲಿಂ ಧರ್ಮಗುರು ಸೈಯದ್ ಮುಜಾಹಿದ್ ರಜ್ವಿ, ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ, ಪರಿಸರ ಪ್ರೇಮಿ ಹಾಲೇಶಪ್ಪ,  ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಶ್ರೀರಾಮ ಸೇನೆ ಮುಖಂಡ ಉಮೇಶ್, ಸಮಾಜ ಸೇವಕ ರಾಜು ನಾಯಕ್ ಕನ್ನಡಿಗ, ಸೂಡ ಸದಸ್ಯ ಎಚ್. ರವಿಕುಮಾರ್, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮುರುಗನ್, ಮೀನು ವ್ಯಾಪಾರಿ ಬಾಬು,  ದೈಹಿಕ ಶಿಕ್ಷಕ ಇಮ್ರಾನ್,  ತಿರುಮಲ ಚಾರಿಟಬಲ್ ಫೌಂಡೇಷನ್ ಸಂಸ್ಥಾಪಕ ಪ್ರಶಾಂತ್, ಪ್ರಮುಖರಾದ ಅಶೋಕ್, ಉಮಾಪತಿ, ತೀರ್ಥೇಶ್, ನರಸಿಂಹ, ನಾಗರಾಜ್ ದಾಸರಕಲ್ಲಹಳ್ಳಿ, ಜಮೀರ್, ಇಂದ್ರೇಶ್, ರತಿಲ್, ಕೌಶಿಕ್, ಪ್ರೀತು, ಹರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

No comments:

Post a Comment