ನೂತನ ಅಧ್ಯಕ್ಷರಾಗಿ ಬಿ.ಎ ಪ್ರಸನ್ನಕುಮಾರ್ ನೇಮಕ
ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿ ವಂದೇ ಮಾತರಂ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ರೋಟರಿ ಸಮುದಾಯ ದಳ ಉದ್ಘಾಟಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ವಂದೇ ಮಾತರಂ ಟ್ರಸ್ಟ್‌ನ ಬಿ.ಎ ಪ್ರಸನ್ನ ಕುಮಾರ್ ಅವರನ್ನು ನೇಮಕಗೊಳಿಸಲಾಗಿದೆ.
ಭದ್ರಾವತಿ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೋಟರಿ ಕ್ಲಬ್ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ನೂತನವಾಗಿ ರೋಟರಿ ಸಮುದಾಯ ದಳ ಅಸ್ತಿತ್ವಕ್ಕೆ ತಂದಿದೆ.
ತಾಲೂಕಿನ ಬಾರಂದೂರು ಗ್ರಾಮದಲ್ಲಿ ವಂದೇ ಮಾತರಂ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ರೋಟರಿ ಸಮುದಾಯ ದಳ ಉದ್ಘಾಟಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ವಂದೇ ಮಾತರಂ ಟ್ರಸ್ಟ್‌ನ ಬಿ.ಎ ಪ್ರಸನ್ನ ಕುಮಾರ್ ಅವರನ್ನು ನೇಮಕಗೊಳಿಸಲಾಗಿದೆ. ರೋಟರಿ ಕ್ಲಬ್ ಸಹಾಯಕ ಜಿಲ್ಲಾ ಗೌರ್‍ನರ್ ಎಸ್.ಆರ್ ನಾಗರಾಜ್ ನೂತನ ಅಧ್ಯಕ್ಷರ ನೇಮಕ ಘೋಷಿಸಿ ಅಭಿನಂದಿಸಿದರು.
ಈಗಾಗಲೇ ವಂದೇ ಮಾತರಂ ಟ್ರಸ್ಟ್ ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಪ್ರಸನ್ನಕುಮಾರ್‌ರವರು ಈ ಮೂಲಕ ಗುರುತಿಸಿಕೊಂಡು ಹೆಚ್ಚಿನ ಅನುಭವ ಹೊಂದಿದ್ದಾರೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರೋಟರಿ ಸಮುದಾಯ ದಳ ಯಶಸ್ವಿಯಾಗಿ ಸಂಘಟಿಸುವ ಮೂಲಕ ಮುನ್ನಡೆಸಿಕೊಂಡು ಹೋಗುವ ದೃಢ ವಿಶ್ವಾಸ ಹೊಂದಿದ್ದಾರೆ.
ರೋಟರಿ ಕ್ಲಬ್ ವತಿಯಿಂದ ಪ್ರಸ್ತುತ ೩ ಗ್ರಾಮಗಳಲ್ಲಿ ರೋಟರಿ ಸಮುದಾಯ ದಳ ಅಸ್ತಿತ್ವಕ್ಕೆ ತರುವ ಗುರಿ ಹೊಂದಿದ್ದು, ಪ್ರಪ್ರಥಮ ಬಾರಿಗೆ ಬಾರಂದೂರು ಗ್ರಾಮದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ರೋಟರಿ ಹಿರಿಯ ಸದಸ್ಯರಾದ ಡಾ. ಆರ್.ಸಿ ಬೆಂಗಳೂರ್, ವಂದೇ ಮಾತರಂ ಟ್ರಸ್ಟ್ ಕಾರ್ಯದರ್ಶಿ ಕಾರ್ತಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಿ೧೦-ಬಿಡಿವಿಟಿ
: 9482007466
No comments:
Post a Comment