ಎನ್‌ಎಸ್‌ಯುಐ ವತಿಯಿಂದ ಭದ್ರಾವತಿ ಹಿರಿಯೂರು ಹಾಗು ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಿರಿಯೂರಿನ ಅಮಲಾಮಾತಾ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ಉಚಿತವಾಗಿ ವಿತರಿಸಲಾಯಿತು.
ಭದ್ರಾವತಿ : ಎನ್‌ಎಸ್‌ಯುಐ ವತಿಯಿಂದ ಹಿರಿಯೂರು ಹಾಗು ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಿರಿಯೂರಿನ ಅಮಲಾಮಾತಾ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ಉಚಿತವಾಗಿ ವಿತರಿಸಲಾಯಿತು.
ಅಮಲಾಮಾತಾ ಆಸ್ಪತ್ರೆಗೆ ಪ್ರತಿದಿನ ರೋಗಿಗಳು ಹಾಗು ಅವರ ಕುಟುಂಬಸ್ಥರು ಸೇರಿದಂತೆ ಸಾವಿರಾರು ಮಂದಿ ಆಗಮಿಸುತ್ತಿದ್ದು, ಅಲ್ಲದೆ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ಹಾಗು ಸಿಬ್ಬಂದಿ ವರ್ಗದವರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಬೆಂಕಿ ನಂದಿಸುವ ಉಪಕರಣ ಇಲ್ಲದಿರುವುದನ್ನು ಮನಗಂಡು ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ವಿತರಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಲಾಯಿತು.
ಅಮಲಾಮಾತಾ ಆಸ್ಪತ್ರೆಯ ವ್ಯವಸ್ಥಾಪಕಿ ಡಾ. ಮೇರಿ ಹಾಗೂ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ವೀರೇಶ್, ಎನ್‌ಎಸ್‌ಯುಐ ಗೌರವ ಅಧ್ಯಕ್ಷ ಮುರುಗೇಶ್, ಉಪಾಧ್ಯಕ್ಷ ಗಂಗಾಧರ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
No comments:
Post a Comment