ಜಿ. ವೆಂಕಟೇಶ್
ಭದ್ರಾವತಿ: ತಾಲೂಕಿನ ಅತ್ತಿಗುಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ), ಮಾಜಿ ಸೈನಿಕ ಜಿ. ವೆಂಕಟೇಶ್(೫೨) ಭಾನುವಾರ ನಿಧನ ಹೊಂದಿದರು.
ಪತ್ನಿ, ಪುತ್ರಿ, ತಾಯಿ, ಸಹೋದರ ಹಾಗು ಸಹೋದರಿ ಇದ್ದಾರೆ. ಇವರ ಅಂತ್ಯಕ್ರಿಯೆ ತಾಲೂಕಿನ ಬಾರಂದೂರು ಗ್ರಾಮದ ಇವರ ತೋಟದಲ್ಲಿ ನೆರವೇರಿತು. ವೆಂಕಟೇಶ್‌ರವರು ಕಾರೇಹಳ್ಳಿ-ಬಾರಂದೂರು ಗ್ರಾಮದಲ್ಲಿ ವಾಸವಾಗಿದ್ದರು.
ವೆಂಕಟೇಶ್‌ರವರು ತಾಲೂಕು ಮಾಜಿ ಸೈನಿಕರ ಸಂಘದ ನಿರ್ದೇಶಕರಾಗಿದ್ದು, ತಾಲೂಕಿನ ವಿವಿಧೆಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ನಿಧನಕ್ಕೆ ತಾಲೂಕು ಮಾಜಿ ಸೈನಿಕರ ಸಂಘ ಸಂತಾಪ ಸೂಚಿಸಿದೆ.
No comments:
Post a Comment