ಭದ್ರಾವತಿ ತಾಲೂಕಿನ ತಳ್ಳಿಕಟ್ಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಧರ್ಮೇಗೌಡ(ಕುಮ್ರಿ ಚಂದ್ರಣ್ಣ) ಹಾಗು ಉಪಾಧ್ಯಕ್ಷರಾಗಿ ರವೀಂದ್ರನಾಯ್ಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭದ್ರಾವತಿ : ತಾಲೂಕಿನ ತಳ್ಳಿಕಟ್ಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಧರ್ಮೇಗೌಡ(ಕುಮ್ರಿ ಚಂದ್ರಣ್ಣ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ ೧೨ ನಿರ್ದೇಶಕರನ್ನು ಹೊಂದಿರುವ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಧರ್ಮೇಗೌಡ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ರವೀಂದ್ರನಾಯ್ಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಿ.೨೮ರಂದು ಸಹಕಾರ ಸಂಘಕ್ಕೆ ನೂತನ ನಿರ್ದೇಶಕರು ಆಯ್ಕೆಯಾಗಿದ್ದರು.
ನೂತನ ಅಧ್ಯಕ್ಷ ಧರ್ಮೇಗೌಡ ಹಾಗು ಉಪಾಧ್ಯಕ್ಷ ರವೀಂದ್ರನಾಯ್ಡು ಅವರನ್ನು ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಧರ್ಮಮೂರ್ತಿ ಸೇರಿದಂತೆ ಪಕ್ಷದ ಮುಖಂಡರು ಅಭಿನಂದಿಸಿದ್ದಾರೆ.
No comments:
Post a Comment