ಭದ್ರಾವತಿ: ನಗರಸಭೆ ವತಿಯಿಂದ ಬಹು ವರ್ಷಗಳ ಬೇಡಿಕೆಯಂತೆ ನಗರದ ಮಹಾತ್ಮಗಾಂಧಿ ರಸ್ತೆ (ಟಿ.ಕೆ ರಸ್ತೆ)ಯ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ಫುಟ್‌ಕೋರ್ಟ್ ನಿರ್ಮಿಸಲಾಗಿದ್ದು, ಜ.೨೬ರಂದು ಬೆಳಿಗ್ಗೆ ೮.೨೦ಕ್ಕೆ ಇದರ ಉದ್ಘಾಟನೆ ನಡೆಯಲಿದೆ.
ವಾರ್ಡ್ ನಂ. ೧೩, ೧೬ ಮತ್ತು ೧೭ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ನಗರಸಭೆ ಅನುದಾನದಲ್ಲಿ ಫುಟ್‌ಕೋರ್ಟ್ ನಿರ್ಮಿಸಲಾಗಿದ್ದು, ಪ್ರಸ್ತುತ ಬೇಡಿಕೆಯಂತೆ ಒಟ್ಟು ೨೬ ವ್ಯಾಪಾರಿಗಳಿಗೆ ಒಟ್ಟು ೧೬ ಮೀಟರ್ ಉದ್ದ ಹಾಗು ೮ ಮೀಟರ್ ಅಗಲ ವಿಸ್ತೀರ್ಣದಲ್ಲಿ ಫುಟ್‌ಕೋರ್ಟ್ ನಿರ್ಮಿಸಲಾಗಿದೆ. ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದು ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಮೊದಲ ಫುಟ್‌ಕೋರ್ಟ್ ಆಗಿದ್ದು, ಹಳೇನಗರದ ಬಸವೇಶ್ವರ ವೃತ್ತ ಹಾಗು ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ ಫುಟ್‌ಕೋರ್ಟ್‌ಗಳ ನಿರ್ಮಾಣಕ್ಕೆ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
No comments:
Post a Comment