ಭದ್ರಾವತಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ಮಧ್ವ ನವಮಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಜರಗಿದವು. ರಾಜಬೀದಿಯಲ್ಲಿ ಮಧ್ವಾಚಾರ್ಯರ ಕೃತಿಯೊಂದಿಗೆ ರಥದಲ್ಲಿ ಮೆರವಣಿಗೆ ನಡೆಸಲಾಯಿತು.
ಭದ್ರಾವತಿ : ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ಮಧ್ವ ನವಮಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಜರಗಿದವು.
ಬೆಳಗ್ಗೆ ೬ ಗಂಟೆಗೆ ನಿರ್ಮಾಲ್ಯ, ೭ ಗಂಟೆಗೆ ಅಭಿಷೇಕ, ನಂತರ ೧೦ ಗಂಟೆಗೆ ರಾಜಬೀದಿಯಲ್ಲಿ ಮಧ್ವಾಚಾರ್ಯರ ಕೃತಿಯೊಂದಿಗೆ ರಥದಲ್ಲಿ ಮೆರವಣಿಗೆ ನಡೆಸಲಾಯಿತು.
ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದವರೆಗೆ ರಥೋತ್ಸವ ಜರಗಿತು. ನಂತರ ಮಧ್ವಾಚಾರ್ಯರ ಕುರಿತು ವಿವಿಧ ಭಜನಾಮಂಡಳಿಗಳಿಂದ ಭಜನೆ ನಡೆಯಿತು. ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ನೆರವೇರಿತು.
ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರುಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ಖಜಾಂಚಿ ನಿರಂಜನಾಚಾರ್ಯ ಹಾಗೂ ಶುಭ ಗುರುರಾಜ್, ವಿದ್ಯಾನಂದ ನಾಯಕ್ ಹಾಗೂ ಸತ್ಯನಾರಾಯಣಚಾರ್, ಪ್ರಧಾನ ಅರ್ಚಕ ಮಾಧುರಾವ್, ಜಯತೀರ್ಥ, ಸುಧೀಂದ್ರ, ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್ ಹಾಗೂ ಶ್ರೀನಿವಾಸಚಾರ್ ಮತ್ತು ವಿವಿಧ ಭಜನಾ ಮಂಡಳಿಗಳ ಸದಸ್ಯರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
No comments:
Post a Comment