ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭದ್ರಾವತಿ ಸುಲ್ತಾನ್ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ನೇತೃತ್ವದ ಅಂತರಾಷ್ಟ್ರೀಯ ಜಾನಪದ ಕಲಾವಿದ ಗಿರೀಶ್ ಕುಮಾರ್ ಮತ್ತು ಸಂಗಡಿಗರ ಡೊಳ್ಳು ಕುಣಿತ ತಂಡ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
ಭದ್ರಾವತಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಜಾನಪದ ಕಲಾವಿದ ಗಿರೀಶ್ ಕುಮಾರ್ ಮತ್ತು ಸಂಗಡಿಗರ ಡೊಳ್ಳು ಕುಣಿತ ತಂಡ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ನೇತೃತ್ವದಲ್ಲಿ ಹೊಸನಗರ ಮಾದಾಪುರ ಗ್ರಾಮದ ಶ್ರೀ ಶನಿಪರಮೇಶ್ವರ ಯುವಕ ಸಂಘದ ಜಾನಪದ ಕಲಾವಿದರಾದ ಗಿರೀಶ್ ಕುಮಾರ್, ಎಂ.ಎಸ್ ಸೋಮಶೇಖರ್, ಎಂ.ಎಸ್ ಮಂಜುನಾಥ್, ಎಂ.ಎಸ್ ದೇವರಾಜ್, ಎಂ.ಎಂ ಹುಚ್ಚರಾಯಪ್ಪ, ಎ.ವಿ ಚಂದ್ರಪ್ಪ, ಎಂ.ಡಿ ಲಕ್ಷ್ಮಣಪ್ಪ, ಎಂ.ಎಲ್ ಸುಧೀರ್ ಕುಮಾರ್, ಹರೀಶ್ ಕುಮಾರ್, ಎಂ.ಪಿ ತ್ಯಾಗರಾಜ್, ಎಂ.ಎಸ್ ಮಂಜುನಾಥ್, ಎಂ.ಬಿ ವಿನಯ್, ಎಂ.ಬಿ ಪ್ರಶಾಂತ್, ಎಂ.ಬಿ ದೇವರಾಜ್, ನಿಸ್ಸಾರ್ ಖಾನ್ ಕೆಂಚಾಯಿಕೊಪ್ಪ ಮತ್ತು ಎಂ.ಆರ್ ರೇವಣಪ್ಪ ಸೇರಿದಂತೆ ಒಟ್ಟು ೧೬ ಜನರ ತಂಡ ರಾಜ್ಯವನ್ನು ಪ್ರತಿನಿಧಿಸಿತ್ತು. ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ.
ಈ ತಂಡ ಡೊಳ್ಳು ಕುಣಿತ ಮಾತ್ರವಲ್ಲದೆ ಜಾನಪದ ಕಲಾ ಪ್ರಕಾರಗಳಾದ ಸುಗ್ಗಿ ಕುಣಿತ, ಕೋಲಾಟ, ಗೀಗಿ ಪದ, ಲಾವಣಿ, ಭಜನೆ ಮತ್ತು ಸಣ್ಣಾಟ ನಿರಂತರವಾಗಿ ಮಾಡಿಕೊಂಡು ಬಂದಿದ್ದು, ರಾಜ್ಯದ ಪ್ರಮುಖ ಜಾನಪದ ಕಲಾತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
No comments:
Post a Comment