ರಜಪೂತ್ ಸಮುದಾಯ, ಸೀಗೆಬಾಗಿ ಗ್ರಾಮಸ್ಥರಲ್ಲಿ ಸಂಭ್ರಮ
"ಬ್ರೀತ್ ಬಲ್ ಹೆಲ್ಮೆಟ್ ಪ್ರಾಜೆಕ್ಟ್ ವರದಿಯ, ರಿಪಬ್ಲಿಕ್ ಪ್ಲಾನೆರಿ ಸಮಿಟ್-೨೦೨೫ ಇನ್ಕ್ಲೂಸಿವ್ ನೇಷನ್ ಬಿಲ್ಲಿಂಗ್ ಕ್ಯಾಟಗರಿ"ಯಲ್ಲಿ ಪ್ರಥಮ ಸ್ಥಾನಪಡೆದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಒಳಗಾಗಿ ಪ್ರಶಸ್ತಿ ಸ್ವೀಕರಿಸಿರುವ ಬಳ್ಳಾರಿ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿ ದಾಮೋದರ್‌ಸಿಂಗ್ ಅವರನ್ನು ಭದ್ರಾವತಿ ನಗರದ ಸೀಗೆಬಾಗಿ ರಜಪೂತ್ ಸಂಘ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ : "ಬ್ರೀತ್ ಬಲ್ ಹೆಲ್ಮೆಟ್ ಪ್ರಾಜೆಕ್ಟ್ ವರದಿಯ, ರಿಪಬ್ಲಿಕ್ ಪ್ಲಾನೆರಿ ಸಮಿಟ್-೨೦೨೫ ಇನ್ಕ್ಲೂಸಿವ್ ನೇಷನ್ ಬಿಲ್ಲಿಂಗ್ ಕ್ಯಾಟಗರಿ"ಯಲ್ಲಿ ಪ್ರಥಮ ಸ್ಥಾನಪಡೆದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಒಳಗಾಗಿ ಪ್ರಶಸ್ತಿ ಸ್ವೀಕರಿಸಿರುವ ಬಳ್ಳಾರಿ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿ ದಾಮೋದರ್‌ಸಿಂಗ್ ಅವರನ್ನು ನಗರದ ಸೀಗೆಬಾಗಿ ರಜಪೂತ್ ಸಂಘ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ದಾಮೋದರ್‌ಸಿಂಗ್ ಬಳ್ಳಾರಿ ಬಿಐಟಿಎಂ ಕಾಲೇಜಿನಲ್ಲಿ ೮ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು "ಬ್ರೀತ್ ಬಲ್ ಹೆಲ್ಮೆಟ್" ಅನ್ವೇಷಣೆ ಮಾಡಿದ್ದು, ಇದು ಕೇಂದ್ರ ರಸ್ತೆ ಸಾರಿಗೆ ಮತ್ತು ಸುರಕ್ಷತೆ ಇಲಾಖೆ ಗುರುತಿಸಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗು ರೇಖಾ ಗುಪ್ತರವರು ದಾಮೋದರ್‌ಸಿಂಗ್‌ಗೆ ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ.
ಈ ಹಿನ್ನಲೆಯಲ್ಲಿ ನಗರದ ರಜಪೂತ್ ಸಮುದಾಯದವರು, ಬಂಧು-ಬಳಗದವರು, ಹಿತೈಷಿಗಳು ಹಾಗು ಗ್ರಾಮಸ್ಥರು ದಾಮೋದರ್‌ಸಿಂಗ್ ಅವರನ್ನು ಸನ್ಮಾಸಿ ಅಭಿನಂದಿಸುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾರೆ. ದಾಮೋದರ್‌ಸಿಂಗ್ ತಾಲೂಕಿನ ಸೀಗೆಬಾಗಿ ನಿವಾಸಿ, ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಾರ್ವತಿದೇವಿ ಕರಣ್‌ಸಿಂಗ್‌ರವರ ಸಹೋದರರಾಗಿದ್ದಾರೆ. .
ನಿವೃತ್ತ ಪೊಲೀಸ್ ಅಧಿಕಾರಿ ಪುಟ್‌ಸಿಂಗ್, ಪಾರ್ವತಿ ಕರಣ್‌ಸಿಂಗ್, ರಾಷ್ಟ್ರ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗೇಗೌಡ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಶಿವರಾಜ್, ದೇವರಾಜ್, ಉಪಾಧ್ಯಕ್ಷ ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ಸತೀಶ್ ಐಯರ್, ಸೋಮಣ್ಣ, ನಾಗರಾಜ್ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.
No comments:
Post a Comment