ಆರ್. ಗೌರಮ್ಮ
ಭದ್ರಾವತಿ: ನಗರದ ಡಾ. ರಾಜ್‌ಕುಮಾರ್ ರಸ್ತೆ, ಹಾಲಪ್ಪ ವೃತ್ತ ಸಮೀಪದ ನಿವಾಸಿ ಆರ್. ಗೌರಮ್ಮ(೮೨) ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಮಾ.೧೨ರಂದು ತಾಲೂಕಿನ ಗೌರಪುರ ಗ್ರಾಮದ ತೋಟದಲ್ಲಿ ನೆರವೇರಿತು.
ಗೌರಮ್ಮ ವಯೋಸಹಜವಾಗಿ ನಿಧನ ಹೊಂದಿದ್ದು, ಇವರಿಗೆ ಪತಿ, ಉದ್ಯಮಿ ಟಿ.ಎಂ ನಾಗರಾಜ್, ಮೂವರು ಪುತ್ರರರು, ಓರ್ವ ಪುತ್ರಿ ಇದ್ದಾರೆ. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಪುಣ್ಯಸ್ಮರಣೆ ಮಾ.೧೯ರಂದು ಹಾಲಪ್ಪ ವೃತ್ತ ಸಮೀಪದ ಭದ್ರಾ ಪ್ರೌಢಶಾಲೆ ಮುಂಭಾಗದಲ್ಲಿರುವ ಇವರ ನಿವಾಸದಲ್ಲಿ ನೆರವೇರಲಿದೆ.
No comments:
Post a Comment