ಭದ್ರಾವತಿ: ತಾಲೂಕಿನ ಐತಿಹಾಸಿಕ ಧಾರ್ಮಿಕ ಹಾಗು ಪ್ರಾಕೃತಿಕ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗೊಂದಿ ಶ್ರೀ ಕ್ಷೇತ್ರ ಹೊನ್ನೆಗುಡ್ಡದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀರಾಮನವಮಿಯಂದು ಭಾನುವಾರ ಶ್ರೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಶ್ರೀ ಹೊನ್ನೆಗುಡ್ಡ ಲಕ್ಷ್ಮೀರಂಗನಾಥಸ್ವಾಮಿ ಹಾಗು ಶ್ರೀ ಕೂಗು ಮಲ್ಲೇಶ್ವರಸ್ವಾಮಿ ದೇವಾಲಯದ ಅಧಿದೇವತೆಯಾಗಿರುವ ಶ್ರೀ ರಂಗನಾಥಸ್ವಾಮಿಯ ಮಹಾರಥೋತ್ಸವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗು ಶ್ರೀ ಕ್ಷೇತ್ರ ಹೊನ್ನೆಗುಡ್ಡದ ಶ್ರೀ ವಿಠ್ಠಲಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಿತು.
ದೇವಾಲಯದ ಮೂಲ ವಿಗ್ರಹಗಳಿಗೆ ಅಭಿಷೇಕ, ವಿಶೇಷ ಅಲಂಕಾರ, ಹೋಮ-ಹವನ, ದೇವರುಗಳ ಪಲ್ಲಕ್ಕಿ ಉತ್ಸವ, ನಂತರ ಮಹಾರಥೋತ್ಸವ ಹಾಗೂ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಧಾರ್ಮಿಕರ ಆಚರಣೆ ಜರುಗಿದವು.
ಭಕ್ತರಿಗೆ ಶ್ರೀರಾಮನವಮಿ ಅಂಗವಾಗಿ ಕೋಸಂಬರಿ, ಪಾನಕ ವಿತರಣೆ ಹಾಗು ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗೊಂದಿ, ಚಿಕ್ಕಗೊಪ್ಪೇನಹಳ್ಳಿ, ತಾರೀಕಟ್ಟೆ, ಅರಳಿಕೊಪ್ಪ, ಸುಲ್ತಾನ್‌ಮಟ್ಟಿ, ಹೊನ್ನಟ್ಟಿ ಹೊಸೂರು, ಹುಣಸೇಕಟ್ಟೆ, ಶಂಕರಘಟ್ಟ, ಗೋಣಿಬೀಡು, ಸಿಂಗನಮನೆ, ಹಿರಿಯೂರು ಬೊಮ್ಮನಕಟ್ಟೆ, ತಿಮ್ಲಾಪುರ, ಬಾಳೆಮಾರನಹಳ್ಳಿ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಸಹಸ್ರರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
No comments:
Post a Comment