ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮಪಂಚಾಯಿತಿ ಕೆಂಪೇಗೌಡ ಗ್ರಾಮದಲ್ಲಿ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಯಾಗಿದ್ದ ೨ ವಾಸ್ತವ್ಯದ ಮನೆಗಳ ಪುನರ್ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಾಯಧನದ ಚೆಕ್ ವಿತರಿಸಲಾಯಿತು.
ಭದ್ರಾವತಿ : ತಾಲೂಕಿನ ಕಾರೇಹಳ್ಳಿ ಗ್ರಾಮಪಂಚಾಯಿತಿ ಕೆಂಪೇಗೌಡ ಗ್ರಾಮದಲ್ಲಿ ಬೆಂಕಿಯಿಂದ ಸಂಪೂರ್ಣವಾಗಿ ಹಾನಿಯಾಗಿದ್ದ ೨ ವಾಸ್ತವ್ಯದ ಮನೆಗಳ ಪುನರ್ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಾಯಧನದ ಚೆಕ್ ವಿತರಿಸಲಾಯಿತು.
ಗ್ರಾಮದ ನಿವಾಸಿಗಳಾದ ನೇತ್ರಾವತಿ, ಹಾಗೂ ಅಂಜುವಮ್ಮ ಎಂಬುವರ ವಾಸ್ತವ್ಯದ ಮನೆಗಳು ಇತ್ತೀಚಿಗೆ ವಿದ್ಯುತ್ ಅವಘಡದಿಂದ ಬೆಂಕಿಗಾಹುತಿಯಾಗಿ ಸಂಪೂರ್ಣ ನಷ್ಟ ಸಂಭವಿಸಿತ್ತು. ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎರಡು ಕುಟುಂಬಗಳಿಗೂ ತಲಾ ೧೫ ಸಾವಿರ ರು. ಒಟ್ಟು ೩೦ ಸಾವಿರ ರು. ಸಹಾಯಧನ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆ ಯವರು ಮಂಜೂರು ಮಾಡಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ, ತಾಲೂಕು ಯೋಜನಾಧಿಕಾರಿ ಪ್ರಕಾಶ್ ನಾಯ್ಕ್, ಪಂಚಾಯತಿ ಸದಸ್ಯ ಯೋಗೀಶ್, ಸೇವಾಪ್ರತಿನಿಧಿ ದುರ್ಗಮ್ಮ ಸೇರಿದಂತೆ ಇನ್ನಿತರರು ಸಹಾಯಧನದ ಚೆಕ್ ಫಲನುಭವಿಗಳಿಗೆ ವಿತರಿಸಿದರು.
No comments:
Post a Comment