Friday, April 18, 2025

ಕ್ರೈಸ್ತರಿಂದ ಶುಭ ಶುಕ್ರವಾರ ಆಚರಣೆ

ವಿವಿಧ ಚರ್ಚ್ ಗಳಲ್ಲಿ ಮುಂಜಾನೆಯಿಂದಲೇ ಪ್ರಾರ್ಥನೆ ಸಲ್ಲಿಕೆ 

ಭದ್ರಾವತಿ  ತಾಲೂಕಿನ ವಿವಿಧ ಚರ್ಚ್ ಗಳಲ್ಲಿ ಶುಕ್ರವಾರ ಗುಡ್ ಫ್ರೈಡೆ ಆಚರಿಸಲಾಯಿತು. ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದಲ್ಲಿ ಮುಂಜಾನೆಯಿಂದಲೇ ಭಕ್ತರು ಪ್ರಾರ್ಥನೆ ಸಲ್ಲಿಸಿದರು.
    ಭದ್ರಾವತಿ : ತಾಲೂಕಿನ ವಿವಿಧ ಚರ್ಚ್ ಗಳಲ್ಲಿ ಶುಕ್ರವಾರ ಗುಡ್ ಫ್ರೈಡೆ ಆಚರಿಸಲಾಯಿತು. ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದಲ್ಲಿ ಮುಂಜಾನೆಯಿಂದಲೇ ಭಕ್ತರು ಪ್ರಾರ್ಥನೆ ಸಲ್ಲಿಸಿದರು. 
    ಉಪವಾಸ ಆಚರಿಸಿ, ಪ್ರಾರ್ಥನೆ, ದಾನ ಧರ್ಮಗಳಲ್ಲಿ ನಿರತರಾಗಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಯೇಸುಕ್ರಿಸ್ತರ ಪಾಡು-ಮರಣದ ಘಟನೆಯನ್ನು ಶಿಲುಬೆ ಹಾದಿಯ ಮೂಲಕ ಸ್ಮರಿಸಿದರು. ಭಕ್ತರನ್ನು ೧೪ ಗುಂಪುಗಳಾಗಿ ವಿಂಗಡಿಸಿ ಒಂದೊಂದು ಸ್ಥಳದಲ್ಲಿ ಒಂದೊಂದು ಗುಂಪು ಶಿಲುಬೆಯನ್ನು ಹೊತ್ತು ನಡೆಯುವ ಮೂಲಕ ಸ್ಮರಿಸಲಾಯಿತು. 
    ಒಂದೊಂದು ಸ್ಥಳದಲ್ಲಿಯೂ ಒಂದೊಂದು ಉದ್ದೇಶದಂತೆ ಪ್ರಪಂಚದಲ್ಲಿ ಶಾಂತಿ ನೆಲೆಸಲು, ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುವಂತೆ, ರಾಜಕಾರಣಿಗಳು ಉತ್ತಮ ಆಡಳಿತ ನಡೆಸುವಂತೆ, ಸರ್ಕಾರಿ ನೌಕರರು ಸಾರ್ವಜನಿಕರ ಸಂಕಷ್ಟಕ್ಕೆ ಸಹಕರಿಸುವಂತೆ ಮತ್ತು ಇತರ ವಿಷಯಗಳ ಕುರಿತು ಪ್ರಾರ್ಥಿಸಲಾಯಿತು. 
    ಶಿವಮೊಗ್ಗ ಧರ್ಮಕ್ಷೇತ್ರದ ವಿವಿಧ ಆಯೋಗಗಳ ಆಯೋಜಕರಾದ ಫಾದರ್ ಸೈಮನ್ ಪಿಂಟೋ, ಧರ್ಮ ಕೇಂದ್ರದ ಗುರುಗಳಾದ ಫಾದರ್  ಸ್ಟೀವನ್ ಡೇಸಾ, ಫಾದರ್ ಎಡ್ಗರ್, ಧರ್ಮಭಗೀನಿಯರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

No comments:

Post a Comment