ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ `ಕಲಿಕೆ, ತೊಡಗಿಸಿಕೊಳ್ಳಿವಿಕೆ, ವರ್ತನೆ ಮತ್ತು ಕಾರ್ಯಕ್ಷಮತೆ(ಲೀಪ್) ಮೂಲಕ ವೈಯಕ್ತಿಕ ಪರಿಣಾಮಕಾರಿತ್ವ ಅಭಿವೃದ್ಧಿ' ಎಂಬ ವಿಷಯ ಕುರಿತು ಎರಡು ತರಬೇತಿ ಕಾರ್ಯಕ್ರಮಗಳನ್ನು ಏ.೧೫ ರಿಂದ ೧೬ರವರೆಗೆ ಮತ್ತು ಏ. ೧೭ ರಿಂದ ೧೮ ರವರೆಗೆ ವಿಐಎಸ್‌ಎಲ್‌ನ ಭದ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿತ್ತು.
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ `ಕಲಿಕೆ, ತೊಡಗಿಸಿಕೊಳ್ಳಿವಿಕೆ, ವರ್ತನೆ ಮತ್ತು ಕಾರ್ಯಕ್ಷಮತೆ(ಲೀಪ್) ಮೂಲಕ ವೈಯಕ್ತಿಕ ಪರಿಣಾಮಕಾರಿತ್ವ ಅಭಿವೃದ್ಧಿ' ಎಂಬ ವಿಷಯ ಕುರಿತು ಎರಡು ತರಬೇತಿ ಕಾರ್ಯಕ್ರಮಗಳನ್ನು ಏ.೧೫ ರಿಂದ ೧೬ರವರೆಗೆ ಮತ್ತು ಏ. ೧೭ ರಿಂದ ೧೮ ರವರೆಗೆ ವಿಐಎಸ್‌ಎಲ್‌ನ ಭದ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿತ್ತು.
ಪ್ರತ್ಯೇಕವಾಗಿ ೪೩ ಮತ್ತು ೩೬ ಉದ್ಯೋಗಿಗಳನ್ನು ಒಳಗೊಂಡಂತೆ ಆಯೋಜಿಸಲಾಗಿತ್ತು. ಮೊದಲ ತರಬೇತಿ ಕಾರ್ಯಕ್ರಮ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಮತ್ತು ಎರಡನೇ ತರಬೇತಿ ಕಾರ್ಯಕ್ರಮ ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್ ಉದ್ಟಾಟಿಸಿದರು.
ರಾಂಚಿಯ ಮ್ಯಾನೇಜ್‌ಮೆಂಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಜನರಲ್ ಮ್ಯಾನೇಜರ್ (ಶೈಕ್ಷಣಿಕ ಮತ್ತು ಹಿರಿಯ ಬೋಧಕ ಸದಸ್ಯರು) ಡಾ. ಪ್ರಣವ್ ಕುಮಾರ್, ತರಬೇತಿಯನ್ನು ಪರಿಣಾಮಕಾರಿಯಾಗಿ ನಡೆಸಿಕೊಟ್ಟರು. ತರಬೇತಿ ಗುಂಪು ಚಟುವಟಿಕೆಗಳು, ಮನಶಾಸ್ತ್ರದ ಪರೀಕ್ಷೆಗಳು, ಗುಂಪು ಚರ್ಚೆ ಮತ್ತು ವಿಷಯ ಮಂಡನೆಗಳು ಒಳಗೊಂಡಿತ್ತು.
ತರಬೇತಿ ಕಾರ್ಯಕ್ರಮ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಕೈಗೊಳ್ಳಲಾಗಿತ್ತು. ಕಿರಿಯ ಪ್ರಬಂಧಕ (ಎಚ್.ಆರ್, ಎಚ್.ಆರ್ ಎಲ್ &ಡಿ) ಎಮ್.ಎಲ್. ಯೋಗೀಶ್ ಪ್ರೋಟೋಕಾಲ್ ಅಧಿಕಾರಿಯಾಗಿದ್ದರು.
No comments:
Post a Comment