ಭದ್ರಾವತಿ ತಾಲೂಕಿನ ನಾಗತಿಬೆಳಗಲು ತಾಂಡದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಧಾರ್ಮಿಕ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿದ್ದರು.
ಭದ್ರಾವತಿ : ದೇವಾಲಯಗಳು ಸಂಸ್ಕಾರದ ಸಾಂಸ್ಕೃತಿಕ ಕೇಂದ್ರಗಳು. ದೇವಾಲಯದ ಕಳಸ ನೋಡುವ ಉದ್ದೇಶ ತಲೆ ಎತ್ತಿ ಬದುಕನ್ನು ಕಟ್ಟಿಕೊಳ್ಳುವ ಜ್ಞಾಪನ ಕ್ರಿಯೆಯಾಗಿದೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರೀಗಳು ತಾಲೂಕಿನ ನಾಗತಿಬೆಳಗಲು ತಾಂಡದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಮನೆಗೆ ಮಗನಾಗಿ ಅಥವಾ ಮಗಳಾಗಿ, ದೇಶದ ಪ್ರಜೆಯಾಗಿ ಕಳಸಾಪ್ರಾಯವಾಗಿ ಬದುಕಬೇಕು. ಪ್ರತಿಯೊಬ್ಬರು ಗೌರವಯುತವಾಗಿ ಬಾಳುವಂತಹ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಹೊಣೆ. ಇದಕ್ಕೆ ಸಂಸ್ಕಾರದ ಅವಶ್ಯಕತೆಯಿದೆ. ಗೌರವಯುತ ಬದುಕು ತಲೆ ಎತ್ತಿಬದುಕುವಂತೆ ಮಾಡುತ್ತದೆ ಎಂದರು.
ಬೆಂಕಿಕೆರೆ ಹನುಮಂತಪ್ಪ, ಪ್ರಕಾಶ್, ಜಯಪ್ಪ ಪೂಜಾರ್, ಮಣಿಶೇಖರ್, ಹನುಮಂತಪ್ಪ, ನಂಜುಂಡ ನಾಯ್ಕ, ತಿಮ್ಮಣ್ಣ, ಮಹದೇವಪ್ಪ, ನಾಗ್ಯಾ ನಾಯ್ಕ, ಹಾಲೇಶ್ ನಾಯ್ಕ, ಶಂಕರಪ್ಪ ಗೌಡ, ಡಿ. ನಂಜುಂಡಪ್ಪ, ಎನ್. ಚಂದ್ರಪ್ಪ, ಟಿ. ಮಂಜಪ್ಪ, ರಾಜಪ್ಪ, ಲಕ್ಷ್ಮಣ, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment