ಎನ್. ನಂಜಪ್ಪ
ಭದ್ರಾವತಿ: ಈ ಹಿಂದೆ ನಗರದ ಪೊಲೀಸ್ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಎನ್. ನಂಜಪ್ಪ(೫೯)ರವರು ನಿಧನ ಹೊಂದಿದ್ದು, ಇವರ ನಿಧನಕ್ಕೆ ನಗರದ ಗಣ್ಯರು, ಸಹದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.
ಓರ್ವ ಪುತ್ರ, ಓರ್ವ ಪುತ್ರಿ ಇದ್ದು, ಮೂಲತಃ ಶಿವಮೊಗ್ಗ ಕಾಶಿಪುರ ನಿವಾಸಿಯಾದ ನಂಜಪ್ಪರವರು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ನೇಮಕಗೊಂಡು ನಂತರ ಉಪ ಠಾಣಾನಿರೀಕ್ಷಕರ ಪರೀಕ್ಷೆ ಉತ್ತೀರ್ಣಗೊಂಡು ಶಿವಮೊಗ್ಗ, ಭದ್ರಾವತಿ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು.
No comments:
Post a Comment