Friday, June 6, 2025

ಪೌರಾಯುಕ್ತರ ವರ್ಗಾವಣೆ ವದಂತಿಗೆ ತೆರೆ

ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ 
    ಭದ್ರಾವತಿ : ನಗರಸಭೆ ಪೌರಾಯುಕ್ತರು ವರ್ಗಾವಣೆಗೊಳ್ಳುತ್ತಾರೆಂಬ ವದಂತಿಗೆ ಇದೀಗ ತೆರೆಬಿದ್ದಿದ್ದು, ಸುಮಾರು ೧ ವಾರ ಕಾಲ ರಜೆ ಮೇಲೆ ತೆರಳಿದ್ದ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಶುಕ್ರವಾರ ಕಛೇರಿಗೆ ಹಾಜರಾಗಿದ್ದಾರೆ. 
    ಪ್ರಭಾರ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದ ವ್ಯವಸ್ಥಾಪಕಿ ಸುನಿತಾ ಕುಮಾರಿಯವರು ಮುಂಬಡ್ತಿ ಪಡೆದು ಪೌರಾಯುಕ್ತರ ಹುದ್ದೆಗೆ ತೆರಳಲಿದ್ದಾರೆಂಬ ಮಾಹಿತಿಗಳು ಹರಿದಾಡುತ್ತಿದ್ದವು. ಈ ನಡುವೆ ರಜೆ ಮೇಲೆ ತೆರಳಿದ್ದ ಪೌರಾಯುಕ್ತರು ಸಹ ಮುಂಬಡ್ತಿ ಪಡೆದು ಬೇರೆಡೆ ವರ್ಗಾವಣೆಗೊಳ್ಳುತ್ತಾರೆಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ಪೌರಾಯುಕ್ತರು ಮರಳಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. 
    ಸುಮಾರು ೧೮ ತಿಂಗಳಿನಿಂದ ಇಲ್ಲಿನ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಶುಕ್ರವಾರ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯಯಲ್ಲಿ ಪೌರಾಯುಕ್ತರು ಪಾಲ್ಗೊಂಡಿದ್ದರು. 

No comments:

Post a Comment