ಕನ್ನಡ ಭಾಷೆಯ ಧೀಮಂತಿಕೆಯ ಪ್ರತೀಕ, ಭಾವಲೋಕದ ರಾಯಬಾರಿ ಕವಿ ಜಯಂತ್ ಕಾಯ್ಕಿಣಿ ಅವರನ್ನು ಭದ್ರಾವತಿ ತಾಲೂಕಿನ ಶಂಕರಘಟ್ಟ ಕನ್ನಡಾಭಿಮಾನಿಗಳು ಹಾಗು ಜಯಕರ್ನಾಟಕ ಸಂಘಟನೆ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಭದ್ರಾವತಿ : ಕನ್ನಡ ಭಾಷೆಯ ಧೀಮಂತಿಕೆಯ ಪ್ರತೀಕ, ಭಾವಲೋಕದ ರಾಯಬಾರಿ ಕವಿ ಜಯಂತ್ ಕಾಯ್ಕಿಣಿ ಅವರನ್ನು ತಾಲೂಕಿನ ಶಂಕರಘಟ್ಟ ಕನ್ನಡಾಭಿಮಾನಿಗಳು ಹಾಗು ಜಯಕರ್ನಾಟಕ ಸಂಘಟನೆ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಜಯಂತ್ ಕಾಯ್ಕಿಣಿಯವರು ತಮ್ಮ ಶುದ್ಧ ಕವಿತೆಗಳ ಮೂಲಕ ಕನ್ನಡ ಜನತೆಯ ಹೃದಯ ಗೆದ್ದವರು. ೧೯ನೇ ವಯಸ್ಸಿನಲ್ಲಿಯೇ ಇವರು ಬರೆದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಇವರು ನಾಟಕ ಮತ್ತು ಗೀತಾ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಇವರ ಸಾಹಿತ್ಯದಲ್ಲಿ ಸೂಕ್ಷ್ಮ ಭಾವಲೋಕ ಬದುಕಿನ ವಾಸ್ತವಿಕ ದೃಷ್ಟಿಕೋನ ಹೇರಳವಾಗಿದೆ. ಇವರ ಕಾವ್ಯ ಯಾವುದೇ ಪ್ರಚಲಿತ ವಿಚಾರಧಾರೆಗಳ ಆಚೆ ನೈಜ ಬದುಕಿನ ಹಂದರವನ್ನು ಸೃಷ್ಟಿಸುತ್ತದೆ. ದಿನನಿತ್ಯದ ಹಾಡು ಭಾಷೆಯಲ್ಲಿಯೇ ಹಾಸ್ಯ ಮತ್ತು ಮೃದುರ ಶೈಲಿಯಲ್ಲಿರುವ ಇವರ ಕಾವ್ಯಗಳು ಹೃದಯಕ್ಕೆ ಹತ್ತಿರವಾಗುತ್ತದೆ ಎಂದು ಬಣ್ಣಿಸಿ ನಾಡಿಗೆ ಇವರ ಕೊಡುಗೆ ಇನ್ನೂ ಹೆಚ್ಚಿನದ್ದಾಗಿರಲಿ ಎಂದು ಆಶಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಾಭಿಮಾನಿ ನಾಗೇಶ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಡಿ.ಟಿ ಶಶಿಕುಮಾರ್, ಶಂಕರಘಟ್ಟ ಜಯ ಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷ ಶ್ರೀಕಾಂತ್ ಉಪಸ್ಥಿತರಿದ್ದರು.
No comments:
Post a Comment