ಭದ್ರಾವತಿ ಸಿದ್ದಾರೂಢ ನಗರದ ಶಾಶ್ವತಿ ಮಹಿಳಾ ಸಮಾಜದವತಿಯಿಂದ ಧರ್ಮಶ್ರೀ ಸಭಾಭವನದಲ್ಲಿ ಸ್ನೇಹ ಮಿಲನ ಹೆಸರಿನಲ್ಲಿ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ನಗರದ ವಿವಿಧ ಮಹಿಳಾ ಸಮಾಜದ ಸದಸ್ಯರುಗಳಿಗೆ ಆಯೋಜಿಸಲಾಗಿತ್ತು.
ಭದ್ರಾವತಿ : ಸಿದ್ದಾರೂಢ ನಗರದ ಶಾಶ್ವತಿ ಮಹಿಳಾ ಸಮಾಜದವತಿಯಿಂದ ಧರ್ಮಶ್ರೀ ಸಭಾಭವನದಲ್ಲಿ ಸ್ನೇಹ ಮಿಲನ ಹೆಸರಿನಲ್ಲಿ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ನಗರದ ವಿವಿಧ ಮಹಿಳಾ ಸಮಾಜದ ಸದಸ್ಯರುಗಳಿಗೆ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಒಟ್ಟು ೮ ಸುತ್ತುಗಳಿದ್ದು, ಅದರಲ್ಲಿ ಥಟ್ ಅಂತ ಹೇಳಿ, ಭಾವಯಾನ ಭಾವಗೀತೆಗಳು, ಮಹಾಭಾರತ, ರಾಮಾಯಣ, ಚಲನಚಿತ್ರ ಗೀತೆಗಳ ಪಲ್ಲವಿ, ನಾವು ನಮ್ಮೂರು ಭದ್ರಾವತಿ ಇತಿಹಾಸ, ವಿಶೇಷತೆಗಳ ಬಗ್ಗೆ ಪ್ರಶ್ನೆಗಳು ಒಳಗೊಂಡಿದ್ದವು.
ನಾಗರತ್ನ ಮಲ್ಲಿಕಾರ್ಜುನ್, ಯಶೋಧ ಡಾ.ವೀರಭದ್ರಪ್ಪ, ರೂಪಾರಾವ್, ಶಾರದಾ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಒಟ್ಟು ೧೬ ತಂಡಗಳು ಭಾಗವಹಿಸಿದ್ದವು. ಕದಳಿ ವೇದಿಕೆ ಪ್ರಥಮ, ಲಾಟರಿ ಮೂಲಕ ವೀರಶೈವ ಲಿಂಗಾಯಿತ ಮಹಿಳಾ ಸಮಾಜ ದ್ವೀತಿಯ, ಭದ್ರಾ ಸುಗಮ ಸಂಗೀತ ವೇದಿಕೆ ತೃತೀಯ ಬಹುಮಾನ ಪಡೆದರು,
ಸಮಾಧಾನಕರ ಬಹುಮಾನಕ್ಕೆ ೪ ತಂಡಗಳು ಆಯ್ಕೆಯಾಗಿದ್ದು, ಲಾಟರಿ ಮೂಲಕ ರೋಟರಿ ಆನ್ಸ್ ತಂಡ ಆಯ್ಕೆಯಾಯಿತು. ಕುಸುಮಾ ತೀರ್ಥಯ್ಯ ಪ್ರಾರ್ಥಿಸಿ, ನಾಗರತ್ನ ಮಲ್ಲಿಕಾರ್ಜುನ್ ಸ್ವಾಗತಿಸಿದರು. ಮಮತ ಗೀರೀಶ್ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀ ಶ್ರೀಧರ್ ವಂದಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ