ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಹಿರಿಯ ಪುತ್ರ ಬಿ.ಎಸ್ ಗಣೇಶ್ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಇವರನ್ನು ಕೂಡ್ಲಿಗೆರೆ ಗ್ರಾಮದ ಆರ್.ಎನ್ ರುದ್ರೇಶ್ ಮತ್ತು ಕುಮಾರ್ ಮಾಸ್ಟರ್ ಸೇರಿದಂತೆ ಇನ್ನಿತರರು ಸನ್ಮಾನಿಸಿ ಅಭಿನಂದಿಸಿದರು.
ಭದ್ರಾವತಿ: ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಹಿರಿಯ ಪುತ್ರ ಬಿ.ಎಸ್ ಗಣೇಶ್‌ರವರನ್ನು ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.
ಪ್ರಸ್ತುತ ಅಧ್ಯಕ್ಷರಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್‌ರವರ ಸ್ಥಾನಕ್ಕೆ ಗಣೇಶ್‌ರವರನ್ನು ಸರ್ಕಾರ ನೇಮಕಗೊಳಿಸಿದೆ. ಇದುವರೆಗೂ ಗಣೇಶ್‌ರವರು ರಾಜಕೀಯವಾಗಿ ಎಲ್ಲೂ ಸಹ ಗುರುತಿಸಿಕೊಂಡಿಲ್ಲ.
ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರರು ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದು, ಸಂಗಮೇಶ್ವರ್ ಸಹೋದರ ಅಣ್ಣ ಬಿ.ಕೆ ಮೋಹನ್ ಹಾಗು ಇವರ ಪುತ್ರ ಬಿ.ಎಂ ಮಂಜುನಾಥ್ ಪ್ರಸ್ತುತ ನಗರಸಭೆ ಸದಸ್ಯರಾಗಿದ್ದಾರೆ. ಇನ್ನೊಬ್ಬ ಸಹೋದರ ಬಿ.ಕೆ ಶಿವಕುಮಾರ್ ಕೆಲವು ತಿಂಗಳ ಹಿಂದೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದು, ಉಳಿದಂತೆ ಹಿರಿಯ ಸಹೋದರ ಬಿ.ಕೆ ಜಗನ್ನಾಥ್‌ರವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಇದೀಗ ಸಂಗಮೇಶ್ವರ್‌ರವರ ಪುತ್ರ ಗಣೇಶ್‌ರವರು ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.
No comments:
Post a Comment