ಭದ್ರಾವತಿ : ತಪ್ಪಿಸಿಕೊಂಡಿದ್ದ ಹಸು ಕಳ್ಳತನ ಮಾಡಲಾಗಿದ್ದು, ಕಳುವು ಮಾಡಿರುವವರನ್ನು ತಕ್ಷಣ ಪತ್ತೆಮಾಡಿ ಹಸು ಮರಳಿಸುವಂತೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಬಿ.ಎಚ್ ರಸ್ತೆ ನಿವಾಸಿ, ಸುಮಾರು ೬೨ ವರ್ಷ ವಯಸ್ಸಿನ ಸುಬ್ರಮಣಿ ಎಂಬುವರು ಜು. ೨೯ರಂದು ತಮ್ಮ ೩ ಹಸುಗಳನ್ನು ಮೇಯಿಸಿಕೊಂಡು ವಾಪಸ್ ಮನೆಗೆ ಹೋಗುವಾಗ ಒಂದು ಹಸು ತಪ್ಪಿಸಿಕೊಂಡಿದೆ. ಎಲ್ಲಾ ಕಡೆ ಹುಡುಕಿದರೂ ಹಸು ಸಿಕ್ಕಿರುವುದಿಲ್ಲ. ಜು.೩೦ರಂದು ಚಾಮೇಗೌಡ ಏರಿಯಾದಲ್ಲಿ ಯಾರೋ ಕಳ್ಳರು ಹಸು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸುಬ್ರಮಣಿಯವರಿಗೆ ಮಾಹಿತಿ ಬಂದಿದೆ. ಈ ಹಿನ್ನಲೆಯಲ್ಲಿ ಆ.೧ರಂದು ಪೊಲೀಸರಿಗೆ ದೂರು ನೀಡಿದ್ದು, ಕಳ್ಳತನ ಮಾಡಲಾಗಿರುವ ಸುಮಾರು ೪೦ ಸಾವಿರ ರು. ಮೌಲ್ಯದ ಹಸು ಪತ್ತೆ ಮಾಡಿಕೊಡುವಂತೆ ಕೋರಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ