ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಳೆದ ೩ ದಿನಗಳ ಹಿಂದೆ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ಭದ್ರಾ ಕಾಲುವೆಗೆ ಬಿದ್ದಿದ್ದ ಕಾರನ್ನು ಈಜು ಮುಳುಗು ತಜ್ಞರು ಹಾಗು ಗ್ರಾಮಸ್ಥರು ಕ್ರೇನ್ ನೆರವಿನೊಂದಿಗೆ ಮೇಲೆತ್ತಿರುವ ಘಟನೆ ಶನಿವಾರ ನಡೆದಿದೆ.
ಭದ್ರಾವತಿ : ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಳೆದ ೩ ದಿನಗಳ ಹಿಂದೆ ಭದ್ರಾ ಕಾಲುವೆಗೆ ಬಿದ್ದಿದ್ದ ಕಾರನ್ನು ಈಜು ಮುಳುಗು ತಜ್ಞರು ಹಾಗು ಗ್ರಾಮಸ್ಥರು ಕ್ರೇನ್ ನೆರವಿನೊಂದಿಗೆ ಮೇಲೆತ್ತಿರುವ ಘಟನೆ ಶನಿವಾರ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಸಿದ್ದಾರೂಢನಗರದ ನಿವಾಸಿ ಶಶಾಂಕ್ ಜಾಧವ್ ಎಂಬುವರು ಅಂತರಗಂಗೆ ಗ್ರಾಮದ ಸಂಬಂಧಿಕರ ಮನೆಗೆ ಹೊಗಿ ರಾತ್ರಿ ವೇಳೆಯಲ್ಲಿ ಬರುವಾಗ ರಸ್ತೆಗೆ ಅಡ್ಡಲಾಗಿ ನಾಯಿಯೊಂದು ಬಂದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಭದ್ರಾ ನದಿಯ ಗ್ರಾಮದ ದೊಡ್ಡ ಕಾಲುವೆಯಲ್ಲಿ ಬಿದ್ದಿದೆ. ಶಶಾಂಕ್ ಪಡಾಡಸದೃಶವಾಗಿ ಬದುಕಿ ಮೇಲೆ ಬಂದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.
ನೀರಿನಲ್ಲಿ ಮುಳುಗಿದ ಕಾರು ಮೇಲೆತ್ತಲು ಮಲ್ಪೆಯಿಂದ ಮುಳುಗು ತಜ್ಞ ಮಲ್ಪೆ ಈಶ್ವರ್ ಮತ್ತು ತಂಡದವರು ಆಗಮಿಸಿ ಗ್ರಾಮಸ್ಥರು, ಪೊಲೀಸರು ಹಾಗು ಕ್ರೇನ್ ನೆರವಿನೊಂದಿಗೆ ಕಾರು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ್ ಹಂಚಿನಾಳ ಮತ್ತು ಉಕ್ಕುಂದ ರತ್ನಾಪುರ ಗ್ರಾಮದ ಈಜು ತಜ್ಞ ವರದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ