ಸಿರಿಲ್ ಡಿ'ಕಾಸ್ಟ
ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ಅಂತರಾಷ್ಟ್ರೀಯ ಮಟ್ಟದ ದೇಹದಾರ್ಢ್ಯಪಟು ಸಿರಿಲ್ ಡಿ'ಕಾಸ್ಟ(೭೭) ಸೋಮವಾರ ನಿಧನ ಹೊಂದಿದರು.
ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಒಟ್ಟು ೬ ಜನ ಮಕ್ಕಳು ಹಾಗು ಮೊಮ್ಮಕ್ಕಳು ಇದ್ದಾರೆ. ಸಿರಿಲ್ ಡಿ'ಕಾಸ್ಟ ಅವರು ಪವರ್ ಲಿಫ್ಟಿಂಗ್ ಮತ್ತು ವೆಯಿಟ್ ಲಿಫ್ಟಿಂಗ್ ಎರಡರಲ್ಲೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ರಾಯಲ್ ಹೆಲ್ತ್ ಕ್ಲಬ್ ವ್ಯಾಯಾಮ ಶಾಲೆ ಆರಂಭಿಸುವ ಹಲವಾರು ಕ್ರೀಡಾಪಟುಗಳನ್ನು ಪ್ರೋತ್ಸಾಯಿಸಿ ಗುರುತಿಸಿಕೊಳ್ಳುವಲ್ಲಿ ಕಾರಣಕರ್ತರಾಗಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ