ಜೆ. ಚಂದ್ರಶೇಖರಪ್ಪ
ಭದ್ರಾವತಿ : ನಗರದ ಸೈಲ್-ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ಇಂಜಿನಿಯರ್ ಜೆ. ಚಂದ್ರಶೇಖರಪ್ಪ(೮೨) ವಯೋಸಹಜವಾಗಿ ನಿಧನ ಹೊಂದಿದರು.
ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಕಾರ್ಖಾನೆಯ ಮೆಟಲರ್ಜಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ನಿವೃತ್ತಿ ಹೊಂದಿದ ನಂತರ ನಗರದ ಚನ್ನಗಿರಿ ರಸ್ತೆಯ ರಂಗಪ್ಪ ವೃತ್ತದಲ್ಲಿ ಕಿರಣ್ ಏಜೆನ್ಸಿಸ್ ಹೆಸರಿನಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದರು. .ಉಂಬ್ಳೆಬೈಲ್ ಬೈಲ್ ಸಮೀಪದ ಕಣಗಲಸರ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ