ಕಳೆದ ೫ ವರ್ಷಗಳ ಹಿಂದೆ ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ ಹನುಮಂತ ನಗರದಲ್ಲಿ ಹಣಕಾಸು ಹಾಗು ಹಳೇದ್ವೇಷದ ಹಿನ್ನಲೆಯಲ್ಲಿ ನಡೆದಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಜನ ಆರೋಪಿಗಳಿಗೆ ಜೀವಾವಧಿ ಕಾರಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಭದ್ರಾವತಿ: ಕಳೆದ ೫ ವರ್ಷಗಳ ಹಿಂದೆ ನಗರಸಭೆ ವ್ಯಾಪ್ತಿಯ ಹೊಸಮನೆ ಹನುಮಂತ ನಗರದಲ್ಲಿ ಹಣಕಾಸು ಹಾಗು ಹಳೇದ್ವೇಷದ ಹಿನ್ನಲೆಯಲ್ಲಿ ನಡೆದಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ಜನ ಆರೋಪಿಗಳಿಗೆ ಜೀವಾವಧಿ ಕಾರಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಹನುಮಂತನಗರದ ಯುವಕ ಶಾರುಖ್ ಖಾನ್(೨೬) ಮತ್ತು ಇದೇ ಏರಿಯಾದ ರಮೇಶ ಅಲಿಯಾಸ್ ಹಂದಿ ರಮೇಶ ಮತ್ತಿತರರಿಗೂ ಹಣಕಾಸಿನ ವಿಚಾರ ಹಾಗು ಹಳೇದ್ವೇಷದ ಹಿನ್ನಲೆಯಲ್ಲಿ ಸೆ.೩೦, ೨೦೨೦ರ ರಾತ್ರಿ ಗಲಾಟೆಯಾಗಿತ್ತು. ಮೊದಲು ಶಾರುಖ್ ಖಾನ್‌ಗೆ ಅವರ ಮನೆಯ ಬಳಿ ಬಂದು ಜೀವಬೆದರಿಕೆ ಹಾಕಿ ತೆರಳಿದ್ದ ಗುಂಪು ನಂತರ ಶಾರುಖ್ ಖಾನ್‌ನನ್ನು ಕೊಲೆ ಮಾಡಿತ್ತು. ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ದೂರು ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿಯಾಗಿದ ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆಯವರು ತನಿಖೆ ಕೈಗೊಂಡು ಆರೋಪಿತರಾದ ರಮೇಶ ಅಲಿಯಾಸ್ ಹಂದಿ ರಮೇಶ (೪೪), .ವೆಂಕಟರಾಮ(೩೫), ಚಂದ್ರ(೩೭), ಕಾರ್ತಿಕ್(೨೪), ಮಧುಸೂದನ್(೨೮), ರಮೇಶ(೩೭), ನಾಗರಾಜ(೨೫) ಮತ್ತು ಸಿದ್ದಪ್ಪ(೪೮) ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ(ಪೀಠಾಸೀನ ಭದ್ರಾವತಿ) ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಸೆ.೨೯ ರಂದು ಎಲ್ಲಾ ಆರೋಪಿಗಳಿಗೂ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ