ಭದ್ರಾವತಿಯಲ್ಲಿ ಕೇರಳ ಸಮಾಜಂ ಮಹಿಳಾ ವಿಭಾಗ ಹಾಗೂ ಕೇರಳ ಸಮಾಜಂ ಯೂತ್ ವಿಂಗ್ ಸಹಯೋಗದಲ್ಲಿ ಅ.೧೯ರ ಭಾನುವಾರ ಆಯೋಜಿಸಲಾಗಿರುವ ಕೇರಳ ಸಮಾಜದ ೧೩ನೇ ವರ್ಷದ ಓಣಂ ಹಬ್ಬದ ಅಂಗವಾಗಿ ಕುಟುಂಬ ಸದಸ್ಯರುಗಳಿಗೆ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕೇರಳದ ಪ್ರಸಿದ್ಧ ಹೂವಿನ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಭದ್ರಾವತಿ: ಕೇರಳ ಸಮಾಜಂ ಮಹಿಳಾ ವಿಭಾಗ ಹಾಗೂ ಕೇರಳ ಸಮಾಜಂ ಯೂತ್ ವಿಂಗ್ ಸಹಯೋಗದಲ್ಲಿ ಅ.೧೯ರ ಭಾನುವಾರ ಆಯೋಜಿಸಲಾಗಿರುವ ಕೇರಳ ಸಮಾಜದ ೧೩ನೇ ವರ್ಷದ ಓಣಂ ಹಬ್ಬದ ಅಂಗವಾಗಿ ಕುಟುಂಬ ಸದಸ್ಯರುಗಳಿಗೆ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕೇರಳದ ಪ್ರಸಿದ್ಧ ಹೂವಿನ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಸಮಾಜದ ಅಧ್ಯಕ್ಷ ಗಂಗಾಧರ್‌ರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಕ್ರೀಡೆಗಳನ್ನುದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾಜದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್, ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಯೂತ್ ವಿಂಗ್ ಅಧ್ಯಕ್ಷ ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅ.೧೦ರ ಭಾನುವಾರ ಆಯೋಜಿಸಲಾಗಿರುವ ಕೇರಳ ಸಮಾಜದ ೧೩ನೇ ವರ್ಷದ ಓಣಂ ಹಬ್ಬದ ಸಮಾರಂಭದಲ್ಲಿ ವಿತರಿಸಲಾಗುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ