ಭಾನುವಾರ, ಮೇ 2, 2021

ಕೊರೋನಾ ಸೋಂಕಿಗೆ ಕರವೇ ಅಧ್ಯಕ್ಷ ಬಿ.ವಿ ಗಿರೀಶ್ ಬಲಿ

ಬಿ.ವಿ ಗಿರೀಶ್
ಭದ್ರಾವತಿ, ಮೇ. ೨: ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ, ಹೋರಾಟಗಾರ ಬಿ.ವಿ ಗಿರೀಶ್(೩೬) ಭಾನುವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿಯನ್ನು ಹೊಂದಿದ್ದರು. ಹಲವು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಅನೇಕ ಕನ್ನಡಪರ ಹಾಗು ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಮಾನವ ಹಕ್ಕುಗಳ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
    ಇವರ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಮಾನವ ಹಕ್ಕುಗಳ ಹೋರಾಟ ಸಮಿತಿ ಸೇರಿದಂತೆ ನಗರದ ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶನಿವಾರ, ಮೇ 1, 2021

ಕೊರೋನಾ, ಪರಿಸರ ಜಾಗೃತಿ ಅಭಿಯಾನಕ್ಕೆ ಚಾಲನೆ

ಭದ್ರಾವತಿಯಲ್ಲಿ ಗೋಡೆ ಬರಹದ ಮೂಲಕ ಕೊರೋನಾ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಶನಿವಾರ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
    ಭದ್ರಾವತಿ, ಮೇ. ೧: ಕಾಗದನಗರದ ಗುರು ಬ್ರದರ್‍ಸ್ ಆರ್ಟ್ಸ್ ವತಿಯಿಂದ ನಗರಸಭೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಕಟ್ಟಡ ಕಾರ್ಮಿಕರ ಸಂಘ ಹಾಗು ತಾಲೂಕು ಕುಂಚ ಕಲಾವಿದರ ಸಂಘ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿರುವ ಕೊರೋನಾ ಮತ್ತು ಪರಿಸರ ಜಾಗೃತಿ ಅಭಿಯಾನಕ್ಕೆ ನಗರಸಭೆ ಪೌರಾಯುಕ್ತ ಮನೋಹರ್ ಶನಿವಾರ ಚಾಲನೆ ನೀಡಿದರು.
    ಕಳೆದ ವರ್ಷ ಕೊರೋನಾ ಸೋಂಕು ಕಾಣಿಸಿಕೊಂಡ ಆರಂಭದಿಂದಲೂ ಸ್ವಯಂ ಪ್ರೇರಣೆಯಿಂದ ಸ್ವಂತ ಖರ್ಚಿನಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಲಿಮ್ಕಾ ದಾಖಲೆ ಕುಂಚ ಕಲಾವಿದ ಬಿ. ಗುರುರವರು ನಗರದ ಪ್ರಮುಖ ಸ್ಥಳಗಳ ವೃತ್ತಗಳಲ್ಲಿ, ಬಸ್ ತಂಗುದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರವಣಿಗೆ ಮೂಲಕ ಹಾಗು ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಆಕರ್ಷಕ ಚಿತ್ತಾರಗಳ ಮೂಲಕ ಕೊರೋನಾ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಸಹ ಜಾಗೃತಿ ಕಾರ್ಯದಲ್ಲಿ ತೊಡಗಿದ್ದು, ಕಾಗದನಗರದ ಬಯಲು ರಂಗಮಂಟಪದಲ್ಲಿ ಚಾಲನೆ ನೀಡಲಾಯಿತು.
      ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್, ವಲಯ ಅರಣ್ಯಾಧಿಕಾರಿ ಕೆ.ಎಚ್. ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಕಾಗದನಗರ ಪೊಲೀಸ್ ಠಾಣಾಧಿಕಾರಿ ಶಿಲ್ಪಾ ನಾಯನಗೇಲಿ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಸುಂದರ್‌ಬಾಬು, ಕರಿಗೌಡ, ಕುಮಾರ್, ಪೀಟರ್, ಪ್ರಸನ್ನ, ಕೆ.ಜಿ ರವಿಕುಮಾರ್, ತಿಮ್ಮಪ್ಪ, ಕಮಲಕರ್, ನಾಗಣ್ಣ, ಸುಬ್ಬಣ್ಣ ಪೈಂಟರ್, ಲಕ್ಷ್ಮಣ್, ಸಿ.ಬಿ ನಂಜಪ್ಪ, ಜಿ. ರವಿಕುಮಾರ್, ಗಿರೀಶ್, ಸುರೇಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾ ಸೋಂಕಿನ ೨ನೇ ಅಲೆ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕರಿಸಿ : ಕೆ.ಎಸ್ ಈಶ್ವರಪ್ಪ

ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ

ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಕೊರೋನಾ ನಿಯಂತ್ರಣ ನಿರ್ವಹಣಾ ಸಭೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೧: ಕಳೆದ ಬಾರಿಗಿಂತ ಈ ಬಾರಿ ಕೊರೋನಾ ಸೋಂಕಿನ ೨ನೇ ಅಲೆ ತೀವ್ರತೆ ಹೆಚ್ಚಾಗಿದ್ದು, ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದರು.
    ಅವರು ಶನಿವಾರ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಕೊರೋನಾ ನಿಯಂತ್ರಣ ನಿರ್ವಹಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜನತೆ ಕಟ್ಟುನಿಟ್ಟಾಗಿ ಪಾಲಿಸಬೇಕು
     ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ತೆಗೆದುಕೊಂಡಿದ್ದು, ಸೋಂಕಿನ ನಿಯಂತ್ರಣಕ್ಕೆ ಲಸಿಕೆ ಹಾಕಲಾಗುತ್ತಿದೆ. ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಯಾವುದೇ ಆತಂಕವಿಲ್ಲದೆ ಹಾಕಿಸಿಕೊಳ್ಳಬೇಕು.  ಕೊರೋನಾ ಸೋಂಕಿನ ೨ನೇ ಅಲೆ ಪರಿಣಾಮಕಾರಿಯಾಗಿದ್ದು, ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನಲೆಯಲ್ಲಿ ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರಸ್ತುತ ಪ್ರತಿಯೊಬ್ಬರ ಪ್ರಾಣ ರಕ್ಷಣೆ ಮುಖ್ಯವಾಗಿದ್ದು, ತಮ್ಮನ್ನು ತಾವು ಕೊರೋನಾದಿಂದ ರಕ್ಷಿಸಿಕೊಳ್ಳುವುದರ ಜೊತೆಗೆ ಸಮಾಜದ ಸ್ವಾಥ್ಯ ಕಾಪಾಡಬೇಕೆಂದರು.
ಎಂದರು.
     ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್‌ನಾಯ್ಕ್,  ಶಾಸಕ ಬಿ.ಕೆ. ಸಂಗಮೇಶ್ವರ್,  ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಭದ್ರಾವತಿ ನಗರಸಭೆ ಚುನಾವಣೆ ಫಲಿತಾಂಶ : ಕಾಂಗ್ರೆಸ್-ಜೆಡಿಎಸ್ ಮತ ಪ್ರಮಾಣದಲ್ಲಿ ಪೈಪೋಟಿ

ಭದ್ರಾವತಿ ನಗರಸಭೆಗೆ ಆಯ್ಕೆಯಾದ ನೂತನ ಸದಸ್ಯರು.
    
     ಭದ್ರಾವತಿ, ಮೇ. ೧: ಸುಮಾರು ೨ ವರ್ಷಗಳ ನಂತರ ನಡೆದ ನಗರಸಭೆ ೩೪ ವಾರ್ಡ್‌ಗಳ ವಾರ್ಡ್‌ಗಳ ಚುನಾವಣೆ ಫಲಿತಾಂಶ ಹಲವು ಕುತೂಹಲಗಳಿಗೆ ಕಾರಣವಾಗಿದ್ದು, ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಈ ಬಾರಿ ಪೈಪೋಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಈ ಬಾರಿ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ, ಎಸ್‌ಡಿಪಿಐ, ವೆಲ್‌ಫೇರ್ ಪಾರ್ಟಿ ಇಂಡಿಯಾ, ಎಐಎಂಐಎಂ ಪಕ್ಷಗಳು ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಈ ಹಿನ್ನಲೆಯಲ್ಲಿ ಪ್ರತಿಯೊಂದು ವಾರ್ಡ್‌ವಾರು ಫಲಿತಾಂಶ ಕುತೂಹಲಕಾರಿಯಾಗಿವೆ.
      ವಾರ್ಡ್ ನಂ.೧ :
     ಉಮಾವತಿ-೧೪೭(ಬಿಜೆಪಿ), ಜೆ. ಮೀನಾಕ್ಷಿ-೯೬೬(ಕಾಂಗ್ರೆಸ್), ಟಿ. ರೇಖಾ-೧೫೨೩(ಜೆಡಿಎಸ್) ಮತ್ತು ಕೆ. ಅನ್ನಪೂರ್ಣ-೪೨(ಪಕ್ಷೇತರ) ಹಾಗು ೧೬ ನೋಟಾ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೨ :
 ಜೆ.ಸಿ ಗೀತಾರಾಜ್‌ಕುಮಾರ್-೯೨೯(ಕಾಂಗ್ರೆಸ್), ಕೆ. ಲತಾ-೩೨೨(ಬಿಜೆಪಿ), ಶಾಂತಿ ಎಸ್.ಪಿ ಮೋಹನ್‌ರಾವ್-೭೫೧(ಜೆಡಿಎಸ್), ಗಂಗಮ್ಮ-೩೯(ಪಕ್ಷೇತರ), ಸಿ.ಆರ್ ರಾಜೇಶ್ವರಿ-೧೪೩(ಪಕ್ಷೇತರ) ಮತ್ತು ಎಸ್. ವೇದಾ-೪೧(ಪಕ್ಷೇತರ) ಹಾಗು ೧೮ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾರ್ಡ್ ನಂ.೩:
 ಬಿ.ಆರ್ ಉಮೇಶ್-೪೪೪(ಜೆಡಿಎಸ್), ಜಾರ್ಜ್-೧೧೧೭(ಕಾಂಗ್ರೆಸ್), ನಕುಲ್ ಜೆ ರೇವಣಕರ್-೪೮೭(ಬಿಜೆಪಿ), ಕುಮಾರಿ-೧೦(ಪಕ್ಷೇತರ), ಪಿ. ನವೀನ್‌ಕುಮಾರ್-೨೩೪(ಪಕ್ಷೇತರ), ಜಿ.ಎಸ್ ಯೋಗೀಶ್-೫(ಪಕ್ಷೇತರ), ಬಿ. ರಮೇಶ್-೩೩೧(ಪಕ್ಷೇತರ), ರಾಜು-೧೮(ಪಕ್ಷೇತರ), ಬಿ.ಎಸ್ ಸಂತೋಷ್ ‌ಕುಮಾರ್-೮(ಪಕ್ಷೇತರ) ಹಾಗು ೮ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾಡ್ ನಂ.೪:
 ಅನುಪಮಾ ಚನ್ನೇಶ್-೧೧೭೮(ಬಿಜೆಪಿ), ಆರ್. ಉಷಾ-೮೨(ಜೆಡಿಎಸ್), ಎಚ್. ವಿದ್ಯಾ-೧೦೦೧(ಕಾಂಗ್ರೆಸ್), ಗೀತಾ ಎಂ. ಬಸವಕುಮಾರ್-೧೧(ಎಎಪಿ), ವಿ. ನಂದಿನಿ-೨೩(ಪಕ್ಷೇತರ), ಪಿ. ಪುಷ್ಪ-೧೮(ಪಕ್ಷೇತರ) ಹಾಗು ನೋಟಾ ೧೧ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೫:
   ತಬಸುಮ್ ಸುಲ್ತಾನ್(ಖಾನ್ ಸಾಬ್)-೭೭೩(ಜೆಡಿಎಸ್), ರೇಣುಕಾ ರೇವಣ್ಣ-೭೪೩(ಕಾಂಗ್ರೆಸ್), ಬಿ. ಶಶಿಕಲಾ-೮೧೨(ಬಿಜೆಪಿ), ನಸೀಮಾ ಖಾನಂ-೧೧೩(ಎಸ್‌ಡಿಪಿಐ), ರೇಷ್ಮಬಾನು-೨೭(ಎಎಪಿ), ಸುಲ್ತಾನ ಬಾನು-೨೧(ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ) ಹಾಗು ನೋಟಾ ೫ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೬:
    ಚನ್ನಪ್ಪ-೮೪೧(ಜೆಡಿಎಸ್), ಶ್ರೇಯಸ್ ಆರ್(ಚಿಟ್ಟೆ)-೯೧೪(ಕಾಂಗ್ರೆಸ್), ಕೆ.ಆರ್ ಸತೀಶ್-೨೪೩(ಬಿಜೆಪಿ), ಸುಕನ್ಯ-೧೩೩(ಪಕ್ಷೇತರ) ಹಾಗು ೧೨ ನೋಟಾ ಮತಗಳು ಚಲಾವಣೆಗೊಂಡಿವೆ.  ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾರ್ಡ್ ನಂ.೭:
  ಬಿ.ಎಂ ಮಂಜುನಾಥ(ಟೀಕು)-೧೧೭೨(ಕಾಂಗ್ರೆಸ್), ಜೆ. ಮೂರ್ತಿ-೫೯(ಬಿಜೆಪಿ), ರೇಣುಕಾ ಶಿವರಾಜ್-೧೯೦(ಜೆಡಿಎಸ್), ದೇವೇಂದ್ರ ಪಾಟೀಲ್-೪೧೩(ಎಸ್‌ಡಿಪಿಐ) ಹಾಗು ನೋಟಾ ೧೬ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
          ವಾರ್ಡ್ ನಂ.೮:
 ಅಮೀರ್‌ಪಾಷ-೫೩(ಬಿಜೆಪಿ), ಬಷೀರ್ ಅಹಮದ್-೧೨೪೦(ಕಾಂಗ್ರೆಸ್), ಸೈಯದ್ ಅಜ್ಮಲ್-೧೦೯೦(ಜೆಡಿಎಸ್), ಅಬ್ದುಲ್ ಖದೀರ್-೫೯(ಎಎಪಿ), ಅಬುಲ್ ಖೈರ್-೨೭೮(ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ), ಅರ್ಶದುಲ್ಲಾ-೧೮೪(ಎಸ್‌ಡಿಪಿಐ), ಮಹಮ್ಮದ್ ಅಜ್ಲರ್-೩೫(ಆಲ್ ಇಂಡಿಯಾ ಮಜ್ಲಿಸೇ ಇತೇಹಾದುಲ್ ಮುಸ್ಲಿಮಿನ್), ಅಬ್ದುಲ್ ಸುಬಾನ್-೨೦(ಪಕ್ಷೇತರ), ಮಲ್ಲೇಶಿ-೩೫೭(ಪಕ್ಷೇತರ), ಮಹಮದ್ ಇನಾಯತ್-೫೩೪(ಪಕ್ಷೇತರ), ವಿ. ವಿನಯ-೩೬(ಪಕ್ಷೇತರ) ಹಾಗು ನೋಟಾ ೧೬ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
        ವಾರ್ಡ್ ನಂ.೯:
    ಟಿ. ಗಿರೀಶ್-೧೦೦(ಬಿಜೆಪಿ), ಚನ್ನಪ್ಪ-೧೩೪೭(ಕಾಂಗ್ರೆಸ್), ಪಿ. ಸುಂದರಮೂರ್ತಿ-೭೭೮(ಜೆಡಿಎಸ್) ಹಾಗು ೧೭ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೧೦:
ಅನಿತ ಮಲ್ಲೇಶ್-೧೧೫೧(ಬಿಜೆಪಿ), ಎಂ.ಜಯಂತಿ-೫೦(ಜೆಡಿಎಸ್), ಆರ್. ಶಶಿಕಲಾ-೮೬೧(ಕಾಂಗ್ರೆಸ್) ಮತ್ತು ೨೧ ನೋಟಾ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೧೧:
   ಜಿ. ಧರ್ಮಪ್ರಸಾದ್-೭೭೭(ಬಿಜೆಪಿ), ಎ. ಪಚೈಯ್ಯಪ್ಪನ್-೫೫(ಜೆಡಿಎಸ್), ಎಂ. ಮಣಿ-೯೧೩(ಕಾಂಗ್ರೆಸ್), ಎಂ. ಮದನ್‌ಕುಮಾರ್-೧೯(ಪಕ್ಷೇತರ) ಮತ್ತು ಮಹಮ್ಮದ್ ರಫೀಕ್-೭೪(ಪಕ್ಷೇತರ) ಹಾಗು ನೋಟಾ ೧೩ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೧೨:
 ಕೆ. ಸುದೀಪ್ ಕುಮಾರ್-೧೩೦೫(ಕಾಂಗ್ರೆಸ್), ಎಂ. ಪ್ರಭಾಕರ್-೮೯೪(ಬಿಜೆಪಿ) ಮತ್ತು ಎ. ಪಶುಪತಿ-೧೧೭(ಜೆಡಿಎಸ್) ಹಾಗು ನೋಟಾ ೨೦ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೧೩:
  ಅನುಸುಧಾ ಮೋಹನ್ ಪಳನಿ-೧೩೨೯(ಕಾಂಗ್ರೆಸ್), ಸುನಿತಾ ಮೋಹನ್-೪೬೫(ಬಿಜೆಪಿ), ಕೆ. ಸುಜಾತ-೪೧೪(ಜೆಡಿಎಸ್) ಹಾಗು ನೋಟಾ ೩೫ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೧೪:
 ಬಿ.ಟಿ ನಾಗರಾಜ್-೧೧೫೦(ಕಾಂಗ್ರೆಸ್), ಜಿ. ಆನಂದಕುಮಾರ್-೬೫೨(ಬಿಜೆಪಿ), ಎಚ್. ಮಂಜುನಾಥ್-೩೫೩(ಜೆಡಿಎಸ್), ಪಿ. ಈಶ್ವರ್‌ರಾವ್-೧೩(ಜೆಡಿಎಸ್), ಶೋಭಾ ರವಿಕುಮಾರ್-೧೨(ಪಕ್ಷೇತರ) ಹಾಗು ನೋಟಾ ೧೦ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೧೫:
   ಮಂಜುಳ ಸುಬ್ಬಣ್ಣ-೧೧೮೯(ಜೆಡಿಎಸ್), ಸುಮಾ ವಿ. ಹನುಮಂತಪ್ಪ-೯೭೨(ಕಾಂಗ್ರೆಸ್), ಕಲಾವತಿ ನಾರಾಯಣಪ್ಪ-೪೯೯(ಬಿಜೆಪಿ), ಕಾಂತಮ್ಮ-೫೧(ಪಕ್ಷೇತರ) ಹಾಗು ನೋಟಾ ೨೭ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೧೬:
   ವಿ. ಕದಿರೇಶ್-೯೭೭(ಬಿಜೆಪಿ), ವಿಶಾಲಾಕ್ಷಿ-೮೦೮(ಜೆಡಿಎಸ್), ಪುಟ್ಟೇಗೌಡ-೭೦೩(ಕಾಂಗ್ರೆಸ್), ಬಿ.ಕೆ ಪ್ರತೀಕ್-೪೩(ಪಕ್ಷೇತರ) ಹಾಗು ನೋಟಾ ೧೪ ಮತಗಳು ಚಲಾವಣೆಗೊಂಡಿವೆ. ಬಿಜೆಪಿ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
          ವಾರ್ಡ್ ನಂ.೧೭:
 ಟಿಪ್ಪು ಸುಲ್ತಾನ್-೧೦೫೨(ಕಾಂಗ್ರೆಸ್), ಎಂ. ಯೋಗೀಶ್-೯೬೧(ಜೆಡಿಎಸ್), ಮುಕ್ರಂಖಾನ್-೧೬೫(ಪಕ್ಷೇತರ), ವಜೀರ್-೧೦೭(ಪಕ್ಷೇತರ) ಹಾಗು ನೋಟಾ ೬ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾರ್ಡ್ ನಂ.೧೮:
 ಮಹಮದ್ ಯೂಸಫ್-೯೧೯(ಕಾಂಗ್ರೆಸ್), ಆರ್. ಕರುಣಾಮೂರ್ತಿ-೭೫೨(ಜೆಡಿಎಸ್), ಸುನಿಲ್‌ಕುಮಾರ್-೧೯೯(ಬಿಜೆಪಿ), ಮಹಮದ್ ಫರ್ವೀಜ್-೨೦೨(ಎಎಪಿ), ಮಹಮದ್ ಆದಿಲ್-೪೮(ಎಐಎಂಐಎಂ) ಹಾಗು ನೋಟಾ ೧೫ ಮತಗಳು ಚಲಾವಣೆಗೊಂಡಿವೆ.
       ವಾರ್ಡ್ ನಂ.೧೯:
   ಎಸ್.ಎನ್ ನಾಗಮಣಿ-೧೭೪(ಬಿಜೆಪಿ), ಬಸವರಾಜ ಬಿ-೩೭೧, ಆರ್. ಸುಮಿತ್ರ-೨೮೩(ಕಾಂಗ್ರೆಸ್), ಟಿ.ಎನ್ ಹಾಲೇಶ್-೬೭(ಪಕ್ಷೇತರ) ಹಾಗು ನೋಟಾ ೬ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೨೦:
   ಎಸ್. ಜಯಶೀಲ-೯೮೨(ಜೆಡಿಎಸ್), ಎಸ್. ರೀಟಾ-೧೧೧(ಬಿಜೆಪಿ), ಎಸ್. ಲಕ್ಷ್ಮೀದೇವಿ-೯೨೯(ಕಾಂಗ್ರೆಸ್), ಎಚ್.ಕೆ ಮೈತ್ರಿ-೭೮(ಎಎಪಿ), ಆರ್. ವರಲಕ್ಷ್ಮೀ-೪೦(ಪಕ್ಷೇತರ) ಹಾಗು ೧೯ ನೋಟಾ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೨೧:
   ಅನುಷ-೧೭೬(ಬಿಜೆಪಿ), ಜೆ. ರಮ್ಯ-೩೮೬(ಕಾಂಗ್ರೆಸ್), ವಿಜಯ-೧೨೮೦(ಜೆಡಿಎಸ್) ಮತ್ತು ನೋಟಾ ೩೦ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
            ವಾರ್ಡ್ ನಂ.೨೨:
 ಬೋರೇಗೌಡ-೬೯೫(ಜೆಡಿಎಸ್), ಬಿ.ಸಿ ಭರತ್‌ರಾವ್-೧೫೭(ಬಿಜೆಪಿ), ಬಿ.ಕೆ ಮೋಹನ್-೧೩೨೮(ಕಾಂಗ್ರೆಸ್), ಆನಂದರಾವ್-೪೬(ಪಕ್ಷೇತರ) ಹಾಗು ೨೫ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
       ವಾರ್ಡ್ ನಂ.೨೩:
    ಕೆ.ಪಿ ಪ್ರೇಮ-೧೧೯೨(ಜೆಡಿಎಸ್), ಯಶೋದಾಬಾಯಿ-೧೧೪೯(ಕಾಂಗ್ರೆಸ್), ಸುಮ-೩೯(ಬಿಜೆಪಿ), ಬಿ.ಜೆ ನೇತ್ರಾವತಿ-೨೬(ಪಕ್ಷೇತರ), ಎಂ.ಬಿ ಶಾಲಿನಿ-೨೧ ಹಾಗು ನೋಟಾ ೪ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಕೆ.ಪಿ ಪ್ರೇಮ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೨೪:
  ಎಸ್.ಎಂ ಅಬ್ದುಲ್ ಮಜೀದ್-೫೮೪(ಕಾಂಗ್ರೆಸ್), ಕೋಟೇಶ್ವರ ರಾವ್-೧೧೨೩(ಜೆಡಿಎಸ್), ಪಿ. ಗಣೇಶ್‌ರಾವ್-೧೫೪(ಬಿಜೆಪಿ), ಎ. ಮಸ್ತಾನ್-೯೫(ಎಎಪಿ), ಖಲೀಮ ಉಲ್ಲಾ ಖಾನ್-೧೩(ಪಕ್ಷೇತರ), ಖಾಜಾ ಮೈನುದ್ದೀನ್-೬೭(ಪಕ್ಷೇತರ), ಬಿ.ಪಿ ಚಂದ್ರಶೇಖರ್-೧೧(ಪಕ್ಷೇತರ), ಎಂ. ವೀಣಾ-೪೬(ಪಕ್ಷೇತರ), ಶೇಖ್ ಹುಸೇನ್ ಸಾಬ್-೩೦೫(ಪಕ್ಷೇತರ) ಹಾಗು  ನೋಟಾ ೧೮ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
     ವಾರ್ಡ್ ನಂ.೨೫:
  ಆಂಜನಪ್ಪ-೬೬೧(ಕಾಂಗ್ರೆಸ್), ಕೆ. ಉದಯ್‌ಕುಮಾರ್-೧೧೩೯(ಜೆಡಿಎಸ್), ಕೆ. ಚಂದ್ರು-೨೦೫, ಆರ್. ವೆಂಕಟೇಶ್-೨೯(ಪಕ್ಷೇತರ), ಪೇಪರ್ ಸುರೇಶ್-೪೮೩(ಪಕ್ಷೇತರ) ಹಾಗು ನೋಟಾ ೨೦ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೨೬:
   ಜಿ. ನಾಗಲಕ್ಷ್ಮೀ-೨೫೦, ಪರಮೇಶ್ವರಿ-೫೨೩(ಜೆಡಿಎಸ್), ಸರ್ವಮಂಗಳ ಭೈರಪ್ಪ-೬೩೭(ಕಾಂಗ್ರೆಸ್), ಎನ್. ಶಿಲ್ಪಾ-೩೧(ಎಎಪಿ), ಜೀವಾ-೭(ಪಕ್ಷೇತರ), ರೇಷ್ಮಾ ಸುಧೀಂದ್ರ-೮೭(ಪಕ್ಷೇತರ), ಎಸ್. ಸರಸ್ವತಮ್ಮ-೧೦೮(ಪಕ್ಷೇತರ) ಹಾಗು ನೋಟಾ ೧೭ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೨೭:
   ರೂಪಾವತಿ-೯೯೯(ಜೆಡಿಎಸ್), ಲಕ್ಷ್ಮೀ ವೇಲು-೯೨೯(ಕಾಂಗ್ರೆಸ್), ಎನ್ ಶೈಲ ರವಿಕುಮಾರ್-೬೧(ಬಿಜೆಪಿ), ಮಹಾಲಕ್ಷ್ಮೀ-೬೭(ಪಕ್ಷೇತರ) ಮತ್ತು ಶೋಭ ಪ್ರಭಾಕರ್-೨೧೭(ಪಕ್ಷೇತರ) ಹಾಗು ೧೮ ನೋಟಾ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
           ವಾರ್ಡ್ ನಂ.೨೮:
 ಕಾಂತರಾಜ್-೮೮೫(ಕಾಂಗ್ರೆಸ್), ಎ.ಈ ಶಿವಕುಮಾರ್-೬೯(ಬಿಜೆಪಿ), ಎಚ್. ಸಂತೋಷ್-೨೮೬(ಜೆಡಿಎಸ್), ಜಿ. ಶ್ರೀಧರ ಮೂರ್ತಿ-೩(ಪಕ್ಷೇತರ) ಹಾಗು ೧೦ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
      ವಾರ್ಡ್ ನಂ.೩೦:
 ಎಂ.ಎಲ್  ರಾಮಕೃಷ್ಣ-೨೦೨(ಬಿಜೆಪಿ), ಸೈಯದ್ ರಿಯಾಜ್-೧೩೨೯(ಕಾಂಗ್ರೆಸ್), ಜೆ. ಸೋಮಶೇಖರ್-೧೨೬೫(ಜೆಡಿಎಸ್), ಎಸ್.ಎಸ್ ನೀಲಕಂಠಪ್ಪ-೧೯(ಪಕ್ಷೇತರ), ರಂಜಿತ್-೫೫ ಹಾಗು ೮ ನೋಟಾ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
          ವಾರ್ಡ್ ನಂ.೩೧:
 ಪಲ್ಲವಿ(ದಿಲೀಪ)-೧೩೩೫(ಜೆಡಿಎಸ್), ಬಿ.ಎಂ ಮಂಜುಳ-೬೯(ಬಿಜೆಪಿ), ವೀಣಾ ಲಕ್ಷ್ಮಣ-೧೦೧೭(ಕಾಂಗ್ರೆಸ್), ಜಯಮ್ಮ ಲಕ್ಷ್ಮಣ-೨೩ ಹಾಗು ನೋಟಾ ೨೬ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
               ವಾರ್ಡ್ ನಂ.೩೨:
  ಎಸ್.ಆರ್ ಲತಾ-೯೫೫(ಕಾಂಗ್ರೆಸ್), ಸರಸ್ವಮ್ಮ ಕೆ-೨೪೭(ಬಿಜೆಪಿ), ಸವಿತಾ ಉಮೇಶ್-೧೧೧೪(ಜೆಡಿಎಸ್), ದಿವ್ಯಶ್ರೀ ಶಶಿಕುಮಾರ್ ಗೌಡ-೪೪(ಪಕ್ಷೇತರ), ಬಿ. ಲತಾ-೪೭(ಪಕ್ಷೇತರ) ಹಾಗು ನೋಟಾ ೩೪ ಮತಗಳು ಚಲಾವಣೆಗೊಂಡಿವೆ. ಜೆಡಿಎಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
         ವಾರ್ಡ್ ನಂ.೩೩:
  ಬಿ.ವಿ ಕೃಷ್ಣರಾಜ್-೪೦೫(ಕಾಂಗ್ರೆಸ್), ಎಚ್.ಬಿ ರವಿಕುಮಾರ್-೪೨೯(ಜೆಡಿಎಸ್), ಶ್ರೀಧರ ಗೌಡ-೧೭೧(ಬಿಜೆಪಿ), ಆರ್. ಮೋಹನ್‌ಕುಮಾರ್-೫೩೩(ಪಕ್ಷೇತರ), ಎನ್. ಸಂತೋಷ್‌ಕುಮಾರ್-೧೦(ಪಕ್ಷೇತರ), ಎಂ.ಎಸ್ ಸುಧಾಮಣಿ-೯೧(ಪಕ್ಷೇತರ) ಹಾಗು ನೋಟಾ ೧೩ ಮತಗಳು ಚಲಾವಣೆಗೊಂಡಿವೆ. ಪಕ್ಷೇತರ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.  
        ವಾರ್ಡ್ ನಂ.೩೪:
   ಭಾಗ್ಯಮ್ಮ ಮಂಜುನಾಥ್-೮೮೫(ಜೆಡಿಎಸ್), ಲತಾ ಚಂದ್ರಶೇಖರ್-೧೦೩೫(ಕಾಂಗ್ರೆಸ್), ಶ್ಯಾಮಲ ಸತ್ಯಣ್ಣ-೩೩೦(ಬಿಜೆಪಿ) ಮತ್ತು ಪುಟ್ಟ ಲಿಂಗಮ್ಮ-೭೧(ಪಕ್ಷೇತರ) ಹಾಗು ನೋಟಾ ೨೮ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
        ವಾರ್ಡ್ ನಂ.೩೫:
 ನಿಂಗಮ್ಮ-೯೪೫(ಜೆಡಿಎಸ್), ಲಕ್ಷ್ಮಮ್ಮ ನರಸೇಗೌಡ-೧೨೧(ಬಿಜೆಪಿ), ಶೃತಿ ಸಿ. ವಸಂತಕುಮಾರ್-೧೦೨೨(ಕಾಂಗ್ರೆಸ್), ಕೆ. ಅನ್ನಪೂರ್ಣ ವೆಂಕಟಾಚಲ-೧೦೫(ಪಕ್ಷೇತರ) ಮತ್ತು ಸುಧಾ ಶಿವಪ್ಪ-೨೩(ಪಕ್ಷೇತರ) ಹಾಗು ನೋಟಾ ೧೭ ಮತಗಳು ಚಲಾವಣೆಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಅತಿಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.

ಅಪ್ಪಾಜಿ ನಿಧನದ ನಂತರ ಜೆಡಿಎಸ್ ನಿರ್ನಾಮ ಎಂದವರಿಗೆ ನಗರಸಭೆ ಚುನಾವಣೆ ಮೂಲಕ ತಕ್ಕ ಉತ್ತರ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಭದ್ರಾವತಿ: ನಮ್ಮ ನಾಯಕರಾದ ಅಪ್ಪಾಜಿಯವರು ನಿಧನ ಹೊಂದಿದ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ನಿರ್ನಾಮವಾಗಿದೆ ಎಂದು ಕೊಂಡವರಿಗೆ ಮತದಾರರು ನಗರಸಭೆ ಚುನಾವಣೆ ಮೂಲಕ ತಕ್ಕ ಉತ್ತರ ನೀಡಿದ್ದಾರೆಂದು ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ತಿಳಿಸಿದರು.
    ಅವರು ಶನಿವಾರ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಪ್ಪಾಜಿ ನಿಧನ ಹೊಂದಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ಕೆಲವು ಗೊಂದಲಗಳಿಂದಾಗಿ ಈ  ಬಾರಿ ಜೆಡಿಎಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದೆ. ಆದರೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿದೆ. ಈ ಹಿನ್ನಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಿರುವ ಮುಖಂಡರು, ಕಾರ್ಯಕರ್ತರು ಹಾಗು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಕೋವಿಡ್-೧೯ ಹಿನ್ನಲೆಯಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲಿ. ಕೆಲವು ವಾರ್ಡ್‌ಗಳಲ್ಲಿ ಮಾತ್ರ ಪ್ರಚಾರ ಮಾಡಲು ಸಾಧ್ಯವಾಯಿತು. ಪ್ರಚಾರ ನಡೆಸಿದ ವಾರ್ಡ್‌ಗಳಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಸ್ತುತ ನಗರಸಭೆಗೆ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
    ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಈ ಬಾರಿ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಪಡೆಯಲು ವಿಫಲವಾಗಿರಬಹುದು. ಆದರೆ ಮತ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಿಸಮಾನವಾಗಿ ಪೈಪೋಟಿ ನೀಡಿದೆ. ಸ್ಪರ್ಧೆಗೆ ಅವಕಾಶ ನೀಡುವ ಸಂದರ್ಭದಲ್ಲಿ ಕೆಲವೊಂದು ಗೊಂದಲಗಳಿಂದಾಗಿ ಸ್ಪರ್ಧೆಗೆ ಅವಕಾಶ ಸಿಗದವರು ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಈ ಬೆಳೆವಣಿಗೆಗಳು ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸಲಾಗುವುದು ಎಂದರು.
    ಈ ಹಿಂದೆ ಪಕ್ಷದ ಸ್ಥಳೀಯ ಮುಖಂಡರಲ್ಲಿ ಕೆಲವೊಂದು ಗೊಂದಲಗಳಿದ್ದವು. ಇದೀಗ ಎಲ್ಲಾ ಗೊಂದಲಗಳು ದೂರವಾಗಿವೆ. ಎಲ್ಲರೂ ಒಗ್ಗಟ್ಟಿನಿಂದ ಅವರದೇ ಆದ ರೀತಿಯಲ್ಲಿ ಚುನಾವಣೆಯಲ್ಲಿ ಶ್ರಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ೧೧ ಸ್ಥಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಮಾಜಿ ಸದಸ್ಯ ಎಸ್. ಕುಮಾರ್, ಮುಖಂಡರಾದ ಮೈಲಾರಪ್ಪ, ಲೋಕೇಶ್ವರ್‌ರಾವ್, ಲಕ್ಷ್ಮೀ ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶುಕ್ರವಾರ, ಏಪ್ರಿಲ್ 30, 2021

ಭದ್ರಾವತಿ ನಗರಸಭೆ ಕಾಂಗ್ರೆಸ್ ಪಾಲು : ಪ್ರತಿಷ್ಠೆ ಮೆರೆದ ಶಾಸಕ ಬಿ.ಕೆ ಸಂಗಮೇಶ್ವರ್

ಕಾಂಗ್ರೆಸ್-೧೮, ಜೆಡಿಎಸ್-೧೧, ಬಿಜೆಪಿ-೪ ಹಾಗು ಪಕ್ಷೇತರ-೧ ಅಭ್ಯರ್ಥಿಗಳ ಗೆಲುವು

     ಭದ್ರಾವತಿ, ಏ. ೩೦: ಬಹುತೇಕ ನಿರೀಕ್ಷೆಯಂತೆ ಈ ಬಾರಿ ಕಾಂಗ್ರೆಸ್ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ೩೪ ವಾರ್ಡ್‌ಗಳ ಚುನಾವಣೆಯಲ್ಲಿ ಕಾಂಗ್ರೆಸ್ ೧೮ ಸ್ಥಾನಗಳೊಂದಿಗೆ ಬಹುಮತ ಪಡೆದುಕೊಂಡಿದೆ.
     ನಗರಸಭೆ ೩೫ ವಾರ್ಡ್‌ಗಳ ಪೈಕಿ ವಾರ್ಡ್ ನಂ.೨೯ರ ಕಾಂಗ್ರೆಸ್ ಅಭ್ಯರ್ಥಿ ನಿಧನ ಹೊಂದಿದ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಉಳಿದ ೩೪ ವಾರ್ಡ್‌ಗಳ ಪೈಕಿ ೧೮-ಕಾಂಗ್ರೆಸ್, ೧೧-ಜೆಡಿಎಸ್, ೪-ಬಿಜೆಪಿ ಹಾಗು ೧-ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ವಾರ್ಡ್ ನಂ.೧ರಲ್ಲಿ ಪಡಿತರ ವಿತರಕ ಪ್ರಕಾಶ್ ತಮ್ಮ ಪತ್ನಿ ರೇಖಾ. ಟಿ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೨ನೇ ವಾರ್ಡ್‌ನಲ್ಲಿ ಮಾಜಿ ನಗರಸಭಾ ಸದಸ್ಯ ಎಸ್.ಪಿ ಮೋಹನ್‌ರಾವ್‌ರವರು ತಮ್ಮ ಪತ್ನಿ ಶಾಂತ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಸೋಲು ಅನುಭವಿಸಿದ್ದಾರೆ. ಲಿಂಗಾಯಿತ ಸಮುದಾಯದ ಗೀತಾ ರಾಜ್‌ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ. ೩ನೇ ವಾರ್ಡ್‌ನಲ್ಲಿ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದ ಜಾರ್ಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ೪ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ವಿರುದ್ಧ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್ ತಮ್ಮ ಪತ್ನಿ ಅನುಪಮಾ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೫ನೇ ವಾರ್ಡ್‌ನಲ್ಲಿ ಅಚ್ಚರಿ ಬೆಳವಣಿಗೆ ಎಂಬಂತೆ ಎಲ್ಲರ ನಿರೀಕ್ಷೆ ಮೀರಿ ಬಿಜೆಪಿ ಅಭ್ಯರ್ಥಿ ಬಿ. ಶಶಿಕಲಾ ಬಿ.ಎಸ್ ನಾರಾಯಣಪ್ಪ ಗೆಲುವು ಸಾಧಿಸಿದ್ದಾರೆ. ೬ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಮೊದಲ ಬಾರಿಗೆ ಆಯ್ಕೆಯಾಗಿದ್ದು, ೭ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್‌ರವರ ಪುತ್ರ ಬಿ.ಎಂ ಮಂಜುನಾಥ್ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ೮ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಷೀರ್ ಅಹಮದ್ ಗೆಲುವು ಸಾಧಿಸಿದ್ದಾರೆ. ೯ನೇ ವಾರ್ಡ್‌ನಲ್ಲಿ ೨ನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ಆಯ್ಕೆಯಾಗಿದ್ದಾರೆ.
      ೧೦ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ ಮಲ್ಲೇಶ್ ಗೆಲುವು ಸಾಧಿಸಿದ್ದು, ೧೧ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಮಣಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ವಿರುದ್ದ ಗೆಲುವು ಸಾಧಿಸಿ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೨ನೇ ವಾರ್ಡ್‌ನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆ. ಸುದೀಪ್‌ಕುಮಾರ್ ಆಯ್ಕೆಯಾಗಿದ್ದು, ಕಳೆದ ಬಾರಿ ಇವರ ಪತ್ನಿ ರೇಣುಕಾ ಸುದೀಪ್ ಆಯ್ಕೆಯಾಗಿದ್ದರು. ವಾರ್ಡ್ ನಂ.೧೩ರಲ್ಲಿ ಕಾಂಗ್ರೆಸ್ ಪಕ್ಷದಿಂದ ಅನುಸುಧಾ ಮೋಹನ್ ಪಳನಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೧೪ರಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್ ಕಾಂಗ್ರೆಸ್ ಸ್ಪರ್ಧಿಸಿ ೩ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೫ನೇ ವಾರ್ಡ್‌ನಲ್ಲಿ ಮಂಜುಳ ಸುಬ್ಬಣ್ಣ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೬ನೇ ವಾರ್ಡ್‌ನಲ್ಲಿ ಹಿರಿಯ ಬಿಜೆಪಿ ಮುಖಂಡ, ಸೂಡಾ ಸದಸ್ಯ ವಿ. ಕದಿರೇಶ್ ೫ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ೧೮ನೇ ವಾರ್ಡ್‌ನಲ್ಲಿ ಮಹಮದ್ ಯೂಸೂಫ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೧೯ರಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ಜಿ. ಆನೇಕೊಪ್ಪ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
     ವಾರ್ಡ್ ನಂ.೨೦ರಲ್ಲಿ ಜೆಡಿಎಸ್ ಮುಖಂಡ, ಕೇಬಲ್ ಸುರೇಶ್ ತಮ್ಮ ಪತ್ನಿ ಎಸ್. ಜಯಶೀಲ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ೨೧ನೇ ವಾರ್ಡ್‌ನಲ್ಲಿ ಸಮಾಜ ಸೇವಕ ಅಶೋಕ್‌ಕುಮಾರ್ ತಮ್ಮ ತಾಯಿ ವಿಜಯ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇವರ  ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ಸೋಲು ಅನುಭವಿಸಿದ್ದಾರೆ. ವಾರ್ಡ್‌ನಲ್ಲಿ ೨೨ರಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ೨ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೩ರಲ್ಲಿ ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ತಮ್ಮ ಪತ್ನಿ ಕೆ.ಪಿ ಪ್ರೇಮಾರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾರ್ಡ್ ನಂ.೨೪ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೋಟೇಶ್ವರ ರಾವ್ ಗೆಲುವು ಸಾಧಿಸಿದ್ದಾರೆ. ಇದೆ ರೀತಿ ವಾರ್ಡ್ ನಂ.೨೫ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಉದಯಕುಮಾರ್ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಎಸ್.ಎಸ್ ಭೈರಪ್ಪ ತಮ್ಮ ಪತ್ನಿ ಬಿ.ಪಿ ಸರ್ವಮಂಗಳ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೭ರಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಗುಣಶೇಖರ್ ಈ ಬಾರಿ ತಮ್ಮ ಪತ್ನಿ ರೂಪಾವತಿ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೮ರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಕಾಂತರಾಜ್ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
     ವಾರ್ಡ್ ೩೦ರಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಮುಸ್ಲಿಂ ಅಭ್ಯರ್ಥಿ ಸೈಯದ್ ರಿಯಾಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೧ರಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ದಿಲೀಪ್ ತಮ್ಮ ಪತ್ನಿ ಬಿ.ಇ ಪದವಿಧರೆ ಪಲ್ಲವಿ ಅವರನ್ನು ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೨ರಲ್ಲಿ ಅಪ್ಪಾಜಿ ಬೆಂಬಲಿಗ ಉಮೇಶ್ ತಮ್ಮ ಪತ್ನಿ ಸವಿತಾ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಾರ್ಡ್ ನಂ.೩೩ರಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿ ಪ್ರಬಲ ಅಭ್ಯರ್ಥಿಗಳ ನಡುವೆ ಪಕ್ಷೇತರ ಅಭ್ಯರ್ಥಿ ಆರ್. ಮೋಹನ್ ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಉಳಿದಂತೆ ವಾರ್ಡ್ ನಂ.೩೪ರಲ್ಲಿ ಮೊದಲ ಬಾರಿಗೆ ಒಕ್ಕಲಿಗ ಸಮಾಜದ  ಲತಾ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೩೫ರಲ್ಲಿ ಮಾಜಿ ನಗರಸಭಾ ಸದಸ್ಯ ಗಂಗಾಧರ್ ತಮ್ಮ ಸೊಸೆ ಶೃತಿ ವಸಂತಕುಮಾರ್ ಅರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
      ಅಪ್ಪ-ಮಕ್ಕಳ ಗೆಲುವು:
    ಈ ಬಾರಿ ನಗರಸಭೆ ಚುನಾವಣೆ ಫಲಿತಾಂಶದ ವಿಶೇಷತೆ ಎಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್ ೨೨ನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಇವರ ಪುತ್ರ ಬಿ.ಎಂ ಮಂಜುನಾಥ್ ೭ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಹಿರಿಯ ಬಿಜೆಪಿ ಮುಖಂಡ ವಿ. ಕದಿರೇಶ್ ವಾರ್ಡ್ ನಂ.೧೬ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರ ಪುತ್ರ ಕೆ. ಸುದೀಪ್‌ಕುಮಾರ್ ವಾರ್ಡ್ ನಂ.೧೨ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
       ಸೊಸೆ ವಿರುದ್ದ ಗೆಲುವು ಸಾಧಿಸಿದ ಅತ್ತೆ:
    ವಾರ್ಡ್ ನಂ.೨೧ರಲ್ಲಿ ಜೆಡಿಎಸ್ ಅಭ್ಯರ್ಥಿ ವಿಜಯಾರವರು ತಮ್ಮ ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಹಿಂದೆ ವಿಜಯಾರವರು ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
೨ ಸ್ಥಾನ ಹೆಚ್ಚಿಸಿಕೊಂಡ ಬಿಜೆಪಿ:
      ಕಳೆದ ಬಾರಿ ಬಿಜೆಪಿ ಪಕ್ಷದಿಂದ ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದರು. ಅಲ್ಲದೆ ಅಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಥಾಪಿಸಿದ್ದ ಕೆಜೆಪಿ ಪಕ್ಷದಿಂದ ಇಬ್ಬರು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅಧಿಕೃತವಾಗಿ ಬಿಜೆಪಿ ಪಕ್ಷದಿಂದ ೪ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿ ನಾಯಕರು ಸಂಘಟಿತವಾಗಿ ನಡೆಸಿದ ಪ್ರಯತ್ನದ ಫಲವಾಗಿ ೨ ಸ್ಥಾನ ಹೆಚ್ಚಳವಾಗಿದೆ ಎಂದರೆ ತಪ್ಪಾಗಲಾರದು.
       ಛಲವಾದಿ ಸಮಾಜದ ೪ ಮಂದಿ ಆಯ್ಕೆ :
     ಈ ಬಾರಿ ಚುನಾವಣೆಯಲ್ಲಿ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ವಾರ್ಡ್ ನಂ.೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೫ರಲ್ಲಿ ಛಲವಾದಿ ಸಮಾಜದ ಮುಖಂಡ ಕೆ. ಉದಯಕುಮಾರ್ ಮೊದಲ ಬಾರಿಗೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ ಎಸ್.ಎಸ್ ಭೈರಪ್ಪನವರ ಪತ್ನಿ ಬಿ.ಪಿ ಸರ್ವಮಂಗಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ಅವರ ಪತ್ನಿ ಪ್ರೇಮಾ ವಾರ್ಡ್ ನಂ.೨೩ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
       ಸೋಲು ಅನುಭವಿಸಿದ ಮಾಜಿ ಅಧ್ಯಕ್ಷರು:
   ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ, ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ವಾರ್ಡ್ ನಂ.೧೮ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕುರುಬ ಸಮಾಜದ ಮುಖಂಡರು, ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೫ರಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ವಾರ್ಡ್ ನಂ.೧೬ರಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಇದೆ ರೀತಿ ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವಾರ್ಡ್ ನಂ.೩೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.
     ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳು:
    ಗೀತಾ ರಾಜ್‌ಕುಮಾರ್(ವಾರ್ಡ್ ನಂ.೨), ಜಾರ್ಜ್(ವಾರ್ಡ್ ನಂ.೩), ಶ್ರೇಯಸ್ ಆರ್(ವಾರ್ಡ್ ನಂ.೬), ಬಿ.ಎಂ ಮಂಜುನಾಥ(ವಾರ್ಡ್ ನಂ.೭), ಬಷೀರ್ ಅಹಮದ್(ವಾರ್ಡ್ ನಂ. ೮), ಚನ್ನಪ್ಪ(ವಾರ್ಡ್ ನಂ.೯), ಎಂ. ಮಣಿ(ವಾರ್ಡ್ ನಂ.೧೧), ಕೆ. ಸುದೀಪ್ ಕುಮಾರ್(ವಾರ್ಡ್ ನಂ.೧೨), ಅನುಸುಧಾ ಮೋಹನ್ ಪಳನಿ(ವಾರ್ಡ್ ನಂ.೧೩), ಬಿ.ಟಿ ನಾಗರಾಜ್(ವಾರ್ಡ್ ನಂ.೧೪), ಟಿಪ್ಪು ಸುಲ್ತಾನ್(ವಾರ್ಡ್ ನಂ.೧೭), ಮಹಮದ್ ಯೂಸಫ್(ವಾರ್ಡ್ ನಂ.೧೮), ಬಿ.ಕೆ ಮೋಹನ್(ವಾರ್ಡ್ ನಂ.೨೨), ಸರ್ವಮಂಗಳ(ವಾರ್ಡ್ ನಂ.೨೬), ಕಾಂತರಾಜ್(ವಾರ್ಡ್ ನಂ.೨೮), ಸಯ್ಯದ್ ರಿಯಾಜ್(ವಾರ್ಡ್ ನಂ.೩೦), ಲತಾ ಚಂದ್ರಶೇಖರ್(ವಾರ್ಡ್ ನಂ.೩೪) ಮತ್ತು ಶೃತಿ ವಸಂತಕುಮಾರ್(ವಾರ್ಡ್ ನಂ.೩೫)
      ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿಗಳು:
   ರೇಖಾ ಟಿ. ಪ್ರಕಾಶ್(ವಾರ್ಡ್ ನಂ.೦೧), ಮಂಜುಳ ಸುಬ್ಬಣ್ಣ(ವಾರ್ಡ್ ನಂ.೧೫), ಬಸವರಾಜ ಬಿ(ವಾರ್ಡ್ ೧೯), ಜಯಶೀಲ(ವಾರ್ಡ್ ೨೦), ವಿಜಯ(ವಾರ್ಡ್ ನಂ.೨೧), ಪ್ರೇಮಾ(ವಾರ್ಡ್ ನಂ.೨೩), ಕೋಟೇಶ್ವರ ರಾವ್(ವಾರ್ಡ್ ನಂ.೨೪), ಕೆ. ಉದಯ್‌ಕುಮಾರ್(ವಾರ್ಡ್ ನಂ.೨೫), ರೂಪಾವತಿ(ವಾರ್ಡ್ ನಂ.೨೭), ಪಲ್ಲವಿ ದಿಲೀಪ್(ವಾರ್ಡ್ ನಂ.೩೧) ಮತ್ತು ಸವಿತಾ ಉಮೇಶ್(ವಾರ್ಡ್ ನಂ.೩೨)
       ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳು:
ಅನುಪಮಾ ಚನ್ನೇಶ್(ವಾರ್ಡ್ ನಂ.೪), ಶಶಿಕಲಾ ಬಿ(ವಾರ್ಡ್ ನಂ.೫), ಅನಿತಾ ಮಲ್ಲೇಶ್(ವಾರ್ಡ್ ನಂ.೧೦) ಮತ್ತು  ವಿ. ಕದಿರೇಶ್(ವಾರ್ಡ್ ನಂ.೧೬)
       ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ: ಆರ್. ಮೋಹನ್‌ಕುಮಾರ್(ವಾರ್ಡ್ ನಂ.೩೩)

ಭದ್ರಾವತಿ ನಗರಸಭೆ ಕಾಂಗ್ರೆಸ್ ಪಾಲು : ಪ್ರತಿಷ್ಠೆ ಮೆರೆದ ಶಾಸಕ ಬಿ.ಕೆ ಸಂಗಮೇಶ್ವರ್

ಕಾಂಗ್ರೆಸ್-೧೮, ಜೆಡಿಎಸ್-೧೧, ಬಿಜೆಪಿ-೪ ಹಾಗು ಪಕ್ಷೇತರ-೧ ಅಭ್ಯರ್ಥಿಗಳ ಗೆಲುವು

ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ಕಾಂಗ್ರೆಸ್ ಅಭ್ಯರ್ಥಿ ಜಾರ್ಜ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಏ. ೩೦: ಬಹುತೇಕ ನಿರೀಕ್ಷೆಯಂತೆ ಈ ಬಾರಿ ಕಾಂಗ್ರೆಸ್ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ೩೪ ವಾರ್ಡ್‌ಗಳ ಚುನಾವಣೆಯಲ್ಲಿ ಕಾಂಗ್ರೆಸ್ ೧೮ ಸ್ಥಾನಗಳೊಂದಿಗೆ ಬಹುಮತ ಪಡೆದುಕೊಂಡಿದೆ.
    ನಗರಸಭೆ ೩೫ ವಾರ್ಡ್‌ಗಳ ಪೈಕಿ ವಾರ್ಡ್ ನಂ.೨೯ರ ಕಾಂಗ್ರೆಸ್ ಅಭ್ಯರ್ಥಿ ನಿಧನ ಹೊಂದಿದ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಉಳಿದ ೩೪ ವಾರ್ಡ್‌ಗಳ ಪೈಕಿ ೧೮-ಕಾಂಗ್ರೆಸ್, ೧೧-ಜೆಡಿಎಸ್, ೪-ಬಿಜೆಪಿ ಹಾಗು ೧-ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
    ವಾರ್ಡ್ ನಂ.೧ರಲ್ಲಿ ಪಡಿತರ ವಿತರಕ ಪ್ರಕಾಶ್ ತಮ್ಮ ಪತ್ನಿ ರೇಖಾ. ಟಿ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೨ನೇ ವಾರ್ಡ್‌ನಲ್ಲಿ ಮಾಜಿ ನಗರಸಭಾ ಸದಸ್ಯ ಎಸ್.ಪಿ ಮೋಹನ್‌ರಾವ್‌ರವರು ತಮ್ಮ ಪತ್ನಿ ಶಾಂತ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಸೋಲು ಅನುಭವಿಸಿದ್ದಾರೆ. ಲಿಂಗಾಯಿತ ಸಮುದಾಯದ ಗೀತಾ ರಾಜ್‌ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ. ೩ನೇ ವಾರ್ಡ್‌ನಲ್ಲಿ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದ ಜಾರ್ಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ೪ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ವಿರುದ್ಧ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್ ತಮ್ಮ ಪತ್ನಿ ಅನುಪಮಾ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೫ನೇ ವಾರ್ಡ್‌ನಲ್ಲಿ ಅಚ್ಚರಿ ಬೆಳವಣಿಗೆ ಎಂಬಂತೆ ಎಲ್ಲರ ನಿರೀಕ್ಷೆ ಮೀರಿ ಬಿಜೆಪಿ ಅಭ್ಯರ್ಥಿ ಬಿ. ಶಶಿಕಲಾ ಬಿ.ಎಸ್ ನಾರಾಯಣಪ್ಪ ಗೆಲುವು ಸಾಧಿಸಿದ್ದಾರೆ. ೬ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಮೊದಲ ಬಾರಿಗೆ ಆಯ್ಕೆಯಾಗಿದ್ದು, ೭ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್‌ರವರ ಪುತ್ರ ಬಿ.ಎಂ ಮಂಜುನಾಥ್ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ೮ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಷೀರ್ ಅಹಮದ್ ಗೆಲುವು ಸಾಧಿಸಿದ್ದಾರೆ. ೯ನೇ ವಾರ್ಡ್‌ನಲ್ಲಿ ೨ನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ಆಯ್ಕೆಯಾಗಿದ್ದಾರೆ.
      ೧೦ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ ಮಲ್ಲೇಶ್ ಗೆಲುವು ಸಾಧಿಸಿದ್ದು, ೧೧ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಮಣಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ವಿರುದ್ದ ಗೆಲುವು ಸಾಧಿಸಿ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೨ನೇ ವಾರ್ಡ್‌ನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆ. ಸುದೀಪ್‌ಕುಮಾರ್ ಆಯ್ಕೆಯಾಗಿದ್ದು, ಕಳೆದ ಬಾರಿ ಇವರ ಪತ್ನಿ ರೇಣುಕಾ ಸುದೀಪ್ ಆಯ್ಕೆಯಾಗಿದ್ದರು. ವಾರ್ಡ್ ನಂ.೧೪ರಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್ ಕಾಂಗ್ರೆಸ್ ಸ್ಪರ್ಧಿಸಿ ೩ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೫ನೇ ವಾರ್ಡ್‌ನಲ್ಲಿ ಮಂಜುಳ ಸುಬ್ಬಣ್ಣ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೬ನೇ ವಾರ್ಡ್‌ನಲ್ಲಿ ಹಿರಿಯ ಬಿಜೆಪಿ ಮುಖಂಡ, ಸೂಡಾ ಸದಸ್ಯ ವಿ. ಕದಿರೇಶ್ ೫ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ೧೮ನೇ ವಾರ್ಡ್‌ನಲ್ಲಿ ಮಹಮದ್ ಯೂಸೂಫ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೧೯ರಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ಜಿ. ಆನೇಕೊಪ್ಪ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
    ವಾರ್ಡ್ ನಂ.೨೦ರಲ್ಲಿ ಜೆಡಿಎಸ್ ಮುಖಂಡ, ಕೇಬಲ್ ಸುರೇಶ್ ತಮ್ಮ ಪತ್ನಿ ಎಸ್. ಜಯಶೀಲ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ೨೧ನೇ ವಾರ್ಡ್‌ನಲ್ಲಿ ಸಮಾಜ ಸೇವಕ ಅಶೋಕ್‌ಕುಮಾರ್ ತಮ್ಮ ತಾಯಿ ವಿಜಯ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇವರ  ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ಸೋಲು ಅನುಭವಿಸಿದ್ದಾರೆ. ವಾರ್ಡ್‌ನಲ್ಲಿ ೨೨ರಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ೨ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೩ರಲ್ಲಿ ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ತಮ್ಮ ಪತ್ನಿ ಕೆ.ಪಿ ಪ್ರೇಮಾರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾರ್ಡ್ ನಂ.೨೪ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೋಟೇಶ್ವರ ರಾವ್ ಗೆಲುವು ಸಾಧಿಸಿದ್ದಾರೆ. ಇದೆ ರೀತಿ ವಾರ್ಡ್ ನಂ.೨೫ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಉದಯಕುಮಾರ್ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
    ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಎಸ್.ಎಸ್ ಭೈರಪ್ಪ ತಮ್ಮ ಪತ್ನಿ ಬಿ.ಪಿ ಸರ್ವಮಂಗಳ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೭ರಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಗುಣಶೇಖರ್ ಈ ಬಾರಿ ತಮ್ಮ ಪತ್ನಿ ರೂಪಾವತಿ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೮ರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಕಾಂತರಾಜ್ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
    ವಾರ್ಡ್ ೩೦ರಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಮುಸ್ಲಿಂ ಅಭ್ಯರ್ಥಿ ಸೈಯದ್ ರಿಯಾಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೧ರಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ದಿಲೀಪ್ ತಮ್ಮ ಪತ್ನಿ ಬಿ.ಇ ಪದವಿಧರೆ ಪಲ್ಲವಿ ಅವರನ್ನು ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೨ರಲ್ಲಿ ಅಪ್ಪಾಜಿ ಬೆಂಬಲಿಗ ಉಮೇಶ್ ತಮ್ಮ ಪತ್ನಿ ಸವಿತಾ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
     ವಾರ್ಡ್ ನಂ.೩೩ರಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿ ಪ್ರಬಲ ಅಭ್ಯರ್ಥಿಗಳ ನಡುವೆ ಪಕ್ಷೇತರ ಅಭ್ಯರ್ಥಿ ಆರ್. ಮೋಹನ್ ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಉಳಿದಂತೆ ವಾರ್ಡ್ ನಂ.೩೪ರಲ್ಲಿ ಮೊದಲ ಬಾರಿಗೆ ಒಕ್ಕಲಿಗ ಸಮಾಜದ  ಲತಾ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೩೫ರಲ್ಲಿ ಮಾಜಿ ನಗರಸಭಾ ಸದಸ್ಯ ಗಂಗಾಧರ್ ತಮ್ಮ ಸೊಸೆ ಶೃತಿ ವಸಂತಕುಮಾರ್ ಅರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
        ಅಪ್ಪ-ಮಕ್ಕಳ ಗೆಲುವು:
      ಈ ಬಾರಿ ನಗರಸಭೆ ಚುನಾವಣೆ ಫಲಿತಾಂಶದ ವಿಶೇಷತೆ ಎಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್ ೨೨ನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಇವರ ಪುತ್ರ ಬಿ.ಎಂ ಮಂಜುನಾಥ್ ೭ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಹಿರಿಯ ಬಿಜೆಪಿ ಮುಖಂಡ ವಿ. ಕದಿರೇಶ್ ವಾರ್ಡ್ ನಂ.೧೬ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರ ಪುತ್ರ ಕೆ. ಸುದೀಪ್‌ಕುಮಾರ್ ವಾರ್ಡ್ ನಂ.೧೨ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
      ಸೊಸೆ ವಿರುದ್ದ ಗೆಲುವು ಸಾಧಿಸಿದ ಅತ್ತೆ:
    ವಾರ್ಡ್ ನಂ.೨೧ರಲ್ಲಿ ಜೆಡಿಎಸ್ ಅಭ್ಯರ್ಥಿ ವಿಜಯಾರವರು ತಮ್ಮ ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಹಿಂದೆ ವಿಜಯಾರವರು ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ೨ ಸ್ಥಾನ ಹೆಚ್ಚಿಸಿಕೊಂಡ ಬಿಜೆಪಿ:
    ಕಳೆದ ಬಾರಿ ಬಿಜೆಪಿ ಪಕ್ಷದಿಂದ ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದರು. ಅಲ್ಲದೆ ಅಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಥಾಪಿಸಿದ್ದ ಕೆಜೆಪಿ ಪಕ್ಷದಿಂದ ಇಬ್ಬರು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅಧಿಕೃತವಾಗಿ ಬಿಜೆಪಿ ಪಕ್ಷದಿಂದ ೪ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿ ನಾಯಕರು ಸಂಘಟಿತವಾಗಿ ನಡೆಸಿದ ಪ್ರಯತ್ನದ ಫಲವಾಗಿ ೨ ಸ್ಥಾನ ಹೆಚ್ಚಳವಾಗಿದೆ ಎಂದರೆ ತಪ್ಪಾಗಲಾರದು.
    ಛಲವಾದಿ ಸಮಾಜದ ೪ ಮಂದಿ ಆಯ್ಕೆ : 
ಈ ಬಾರಿ ಚುನಾವಣೆಯಲ್ಲಿ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ವಾರ್ಡ್ ನಂ.೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೫ರಲ್ಲಿ ಛಲವಾದಿ ಸಮಾಜದ ಮುಖಂಡ ಉದಯಕುಮಾರ್ ಮೊದಲ ಬಾರಿಗೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ ಎಸ್.ಎಸ್ ಭೈರಪ್ಪನವರ ಪತ್ನಿ ಬಿ.ಪಿ ಸರ್ವಮಂಗಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ಅವರ ಪತ್ನಿ ಪ್ರೇಮಾ ವಾರ್ಡ್ ನಂ.೨೩ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 

     ಸೋಲು ಅನುಭವಿಸಿದ ಮಾಜಿ ಅಧ್ಯಕ್ಷರು:
   ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ, ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ವಾರ್ಡ್ ನಂ.೧೮ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕುರುಬ ಸಮಾಜದ ಮುಖಂಡರು, ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೫ರಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಇದೆ ರೀತಿ ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವಾರ್ಡ್ ನಂ.೩೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.