ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ೬ ಜನರನ್ನು ಸೆರೆ ಹಿಡಿಯುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಭದ್ರಾವತಿ, ಜು. ೧೬: ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ೬ ಜನರನ್ನು ಸೆರೆ ಹಿಡಿಯುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸಮನೆ ಎನ್‌ಎಂಸಿ ನಿವಾಸಿ ದಕ್ಷಿಣಾಮೂರ್ತಿ(೩೭), ಅಶ್ವಥ್‌ನಗರದ ನಿವಾಸಿ ಸುದೀಪ್ ಕುಮಾರ್ ಅಲಿಯಾಸ್ ಗ್ಯಾರೇಜ್ ಸುದೀಪ್ (೩೦), ತಮ್ಮಣ್ಣ ಕಾಲೋನಿ ನಿವಾಸಿ ಡ್ಯಾನಿಯಲ್ ಅಲಿಯಾಸ್ ಸ್ನೇಕ್ ಡ್ಯಾನಿಯಲ್(೨೫), ಬೋವಿ ಕಾಲೋನಿ ನಿವಾಸಿ, ಕಿರಣ್ ಅಲಿಯಾಸ್ ಕಿರಣ್‌ಕುಮಾರ್ ಅಲಿಯಾಸ್ ಪಾಂಡು(೨೩), ಜನ್ನಾಪುರ ಹಾಲಪ್ಪ ಶೆಡ್ ನಿವಾಸಿ ಪವನ್ ಕುಮಾರ್(೨೫) ಮತ್ತು ಹೊಸ ಕೋಡಿಹಳ್ಳಿ ರಸ್ತೆ ನಿವಾಸಿ ನವೀನ್ ಕುಮಾರ್(೨೬) ಬಂಧಿತರಾಗಿದ್ದು, ೧ ಕೆ.ಜಿ ೩೭೫ ಗ್ರಾಂ. ತೂಕದ ಗಾಂಜಾ, ೮೦೦ ರು. ನಗದು ಹಾಗು ೨ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ನಗರಸಭೆ ವ್ಯಾಪ್ತಿಯ ಹಳೇಸೀಗೆಬಾಗಿ ಹಾಗು ಹೊಳೆಹೊನ್ನೂರು ರಸ್ತೆಗೆ ಸೇರುವ ಬಡಾವಣೆಯೊಂದರ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಸೆರೆ ಹಿಡಿಯಲಾದ ೬ ಜನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಉಪಾಧೀಕ್ಷಕ, ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ ಹಾಗು ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಠಾಣಾಧಿಕಾರಿ ಮಹೇಶ್ವರನಾಯ್ಕ, ಸಿಬ್ಬಂದಿಗಳಾದ ಹಾಲಪ್ಪ, ಹಾಲೇಶ್, ಪಿರೋಜ್, ಸುನಿಲ್ ಎಸ್. ಬಾಸೂರ, ವಿಜಯ್‌ಕುಮಾರ್ ಹಾಗು ಮಧುಸೂಧನ್ ಮತ್ತು ಇನ್ನಿತರರು ಪಾಲ್ಗೊಂಡಿದ್ದರು.
೬ ಜನರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.