ಅಕ್ರಮವಾಗಿ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ೩ ಯುವಕರನ್ನು ಬಂಧಿಸುವಲ್ಲಿ ಭದ್ರಾವತಿನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ಗುರುವಾರನಡೆದಿದೆ.
ಭದ್ರಾವತಿ, ಆ. ೨೬: ಅಕ್ರಮವಾಗಿ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ೩ ಯುವಕರನ್ನು ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ಗುರುವಾರನಡೆದಿದೆ.
ಕೂಲಿಬ್ಲಾಕ್ ಶೆಡ್ ನಿವಾಸಿಗಳಾದ ಡ್ಯಾನಿಯಲ್ ಅಲಿಯಾಸ್ ಡ್ಯಾನಿ(೨೨), ಆದಿಲ್ ಬಾಷಾ(೨೬) ಮತ್ತು ನ್ಯೂಕಾಲೋನಿ ನಿವಾಸಿ ಚರಣ ಅಲಿಯಾಸ್ ಕುರಚರಣರಾಜ್ ಯಾದವ್ ಅವರನ್ನು ಬಂಧಿಸಲಾಗಿದೆ.
ಬಂಧಿತ ಯುವಕರಿಂದ ಒಟ್ಟು ೧.೩೦ ಲಕ್ಷ ರು. ಮೌಲ್ಯ ೧೧ ಕೆ.ಜಿ ೪೪೦ ಗ್ರಾಂ ತೂಕದ ಗಾಂಜಾ ಹಾಗು ಕೃತ್ಯಕ್ಕೆ ಬಳಸಿದ ಸುಮಾರು ೧.೫೦ ಲಕ್ಷ ರು. ಮೌಲ್ಯದ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಗದನಗರದಿಂದ ನ್ಯೂಟೌನ್ ವ್ಯಾಪ್ತಿಯ ಕಡೆಗೆ ೪ ಜನ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸ್ ಉಪಾಧೀಕ್ಷಕ ಸಾಹಿಲ್ ಬಾಗ್ಲಾ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಸಿಬ್ಬಂದಿಗಳಾದ ವೆಂಕಟೇಶ್, ಮಂಜುನಾಥ್, ಅಶೋಕ್, ಸುನಿಲ್‌ಕುಮಾರ್, ಎಚ್. ಪಾಲಕ್ಷನಾಯ್ಕ, ಮಲ್ಲಿಕಾರ್ಜುನ ಮತ್ತು ಕುಮಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳು ಕಾರ್ಯಾಚರಣೆ ನಡೆಸಿರುವ ತಂಡವನ್ನು ಅಭಿನಂದಿಸಿದ್ದಾರೆ.