ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಜರಂಗಳ ಕಾರ್ಯಕರ್ತರು ಭದ್ರಾವತಿಯಲ್ಲಿ ಬುಧವಾರದಿಂದ ದತ್ತ ಮಾಲೆ ಅಭಿಯಾನ ಆರಂಭಿಸಿದ್ದಾರೆ.
ಭದ್ರಾವತಿ, ಡಿ. ೮: ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಜರಂಗಳ ಕಾರ್ಯಕರ್ತರು ಬುಧವಾರದಿಂದ ದತ್ತ ಮಾಲೆ ಅಭಿಯಾನ ಆರಂಭಿಸಿದ್ದಾರೆ.
ರಾಜ್ಯಾದ್ಯಂತ ದತ್ತ ಮಾಲೆ ಅಭಿಯಾನ ಅಭಿಯಾನ ಆರಂಭಗೊಂಡಿದ್ದು, ಹಳೇನಗರದ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮಂದಿ ದತ್ತ ಮಾಲೆ ಧಾರಣೆ ಕೈಗೊಂಡರು. ಪ್ರಮುಖರಾದ ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು, ಶ್ರೀಕಾಂತ್, ಧನುಷ್ ಬೋಸ್ಲೆ, ನಗರ ಸಂಚಾಲಕ ಕೃಷ್ಣ, ಸುನಿಲ್‌ಕುಮಾರ್, ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಭಿಯಾನದ ಅಂಗವಾಗಿ ಡಿ.೧೭ರಂದು ಸಂಕೀರ್ತನೆ ಶೋಭಾ ಯಾತ್ರೆ ನಡೆಯಲಿದ್ದು, ದತ್ತ ಮಾಲೆ ಧಾರಣೆ ಕೈಗೊಂಡಿರುವ ಕಾರ್ಯಕರ್ತರು ಡಿ. ೧೯ರಂದು ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳಲಿದ್ದಾರೆ.
ಬಜರಂಗದಳ ಕಾರ್ಯಕರ್ತರು ಕೊರೋನಾ ಸೋಂಕು ತೀವ್ರಗೊಂಡ ಸಂದರ್ಭದಲ್ಲಿ ಕೋವಿಡ್-೧೯ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಗಮನ ಸೆಳೆದಿದ್ದರು.