ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್.ಕೆ ಸೆಲ್ವಮಣಿ ಸೇರಿದಂತೆ ಅನೇಕ ಗಣ್ಯರು ಭಾನುವಾರ ಭದ್ರಾವತಿಯಲ್ಲಿ ಉದ್ಯಮಿ ಎ. ಮಾಧು ಅವರ ನಿವಾಸಕ್ಕೆ ಭೇಟಿ ನೀಡಿದರು.
ಭದ್ರಾವತಿ, ಜು. ೩: ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್.ಕೆ ಸೆಲ್ವಮಣಿ ಸೇರಿದಂತೆ ಅನೇಕ ಗಣ್ಯರು ಭಾನುವಾರ ನಗರದ ಉದ್ಯಮಿ ಎ. ಮಾಧು ಅವರ ನಿವಾಸಕ್ಕೆ ಭೇಟಿ ನೀಡಿದರು.
ಶಿವಮೊಗ್ಗದಲ್ಲಿ ರುದ್ರಾಕ್ಷ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚೆನ್ನೈನಿಂದ ಆಗಮಿಸಿದ ಸಂಗೀತ ನಿರ್ದೇಶಕ ಗಂಗೈ ಅಮರನ್, ಚಲನಚಿತ್ರ ನಿರ್ದೇಶಕ ಹಾಗು ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್. ಸೆಲ್ವಮಣಿ ಮತ್ತು ಚಲನಚಿತ್ರ ಹಾಗು ಟಿ.ವಿ ಕಲಾವಿದ ರಾಜ ಚೆಲ್ಲಪ್ಪ ಅವರನ್ನು ನಗರದ ಉಂಬ್ಳೆಬೈಲು ರಸ್ತೆ ಮೆಸ್ಕಾಂ ಕಛೇರಿ ಮುಂಭಾಗದಲ್ಲಿರುವ ಸಂಜಯ್ ಕಾಲೋನಿಯಲ್ಲಿ ಉದ್ಯಮಿಗಳಾದ ಎ. ಮಾಧು, ಸುರೇಶ್‌ಕುಮಾರ್, ಮೀನುಗಾರರ ಸಂಘದ ಅಧ್ಯಕ್ಷ ಮುರುಗನ್, ಎಂ. ಭೂಪಾಲ್, ಸುಂದರ್ ಬಾಬು ಸೇರಿದಂತೆ ಇನ್ನಿತರ ಪ್ರಮುಖರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು.