ಭದ್ರಾವತಿಯಲ್ಲಿ ಭಾನುವಾರ ಭೈರವಿ ಒಕ್ಕಲಿಗ ಮಹಿಳಾ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ನೂತನ ಪದಾಧಿಕಾರಿಗಳು ಆಯ್ಕೆಯಾದರು.
ಭದ್ರಾವತಿ, ಜು. ೩ : ಜನಪರ ಕಾಳಜಿಯೊಂದಿಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಆಶಯದೊಂದಿಗೆ ನೂತನವಾಗಿ ಭೈರವಿ ಒಕ್ಕಲಿಗ ಮಹಿಳಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ ಎಂದು ನಗರಸಭಾ ಸದಸ್ಯೆ, ವೇದಿಕೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದರು.
ಅವರು ಭಾನುವಾರ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಒಕ್ಕಲಿಗ ಸಮುದಾಯದ ಮಹಿಳೆಯರು ಒಗ್ಗೂಡಿ ಈ ವೇದಿಕೆಯನ್ನು ರಚಿಸಿದ್ದು, ಸಮಾಜದಲ್ಲಿ ಒಕ್ಕಲಿಗ ಸಮುದಾಯದ ಮಹಿಳೆಯರ ಹಿತ ರಕ್ಷಣೆ ಜೊತೆಗೆ ಬಡ ಮಕ್ಕಳ ಶಿಕ್ಷಣಕ್ಕಾಗಿ, ಅಂಗವಿಕಲರು ಹಾಗು ಅಸಕ್ತರ ನೆರವಿಗಾಗಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಆಶಯ ಹೊಂದಲಾಗಿದೆ. ಯಾವುದೇ ರಾಜಕೀಯ ಹಿತಾಸಕ್ತಿ ಅಥವಾ ದುರುದ್ದೇಶ ವೇದಿಕೆ ಹೊಂದಿಲ್ಲ ಎಂದರು.
ನೂತನ ಪದಾಧಿಕಾರಿಗಳು :
ವೇದಿಕೆ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಲತಾ ಚಂದ್ರಶೇಖರ್, ಗೌರವಾಧ್ಯಕ್ಷರಾಗಿ ಲಕ್ಷ್ಮಿರಾಜು, ನೇತ್ರಾವತಿ, ಉಪಾಧ್ಯಕ್ಷರಾಗಿ ಭಾಗ್ಯ ಈಶ್ವರ್, ಕಾರ್ಯದರ್ಶಿಯಾಗಿ ಶಾಲಿನಿ, ಸಹಕಾರ್ಯದರ್ಶಿಯಾಗಿ ಅಂಬಿಕಾ, ಖಜಾಂಚಿಯಾಗಿ ಯಮುನಾ ಹಾಗು ನಿರ್ದೇಶಕರಾಗಿ ಹೇಮಾವತಿ ಸುರೇಶ್, ಸಾವಿತ್ರಮ್ಮ ವೆಂಕಟೇಶ್, ಶೋಭಾ ಲಕ್ಷ್ಮಣ್, ಪ್ರೇಮ ಪ್ರಕಾಶ್, ಶೃತಿ ನವೀನ್, ಲೀಲಾ ರವಿಕುಮಾರ್, ಪದ್ಮಿನಿ ವಿಠ್ಠಲ್, ಮಂಜುಳ ಆನಂದ್, ಮಾಲಾ ರಾಮಣ್ಣ, ಪ್ರೇಮ ಶ್ರೀನಿವಾಸ್, ಗೀತಾ ಮಹೇಶ್, ವಿಜಯ ಚಂದ್ರಶೇಖರ್, ಜಯಲಕ್ಷ್ಮೀ ಕುಮಾರ್, ಶ್ಯಾಮಲ ರಾಜು, ಗೀತಾ ಗಿರೀಶ್, ರೂಪ ಮತ್ತು ದೇವಿಕಾ ನಾಗರಾಜ್ ಸೇರಿದಂತೆ ಒಟ್ಟು ೨೦ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ತಾಲೂಕು ಸುಗ್ರಾಮ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷ ಗೌರಮ್ಮ ಮಹಾದೇವ ಉಪಸ್ಥಿತರಿದ್ದರು. ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
No comments:
Post a Comment