ಉದ್ಯಮಿ ಪ್ರಮಿತ್ ಧಾರ್ಮಿಕ ಸೇವೆಗೆ ಸಿಆರ್‌ಟಿಸಿ ಅಭಿನಂದನೆ
![](https://blogger.googleusercontent.com/img/a/AVvXsEgWx3DnLQB2IZMGWlfCUnxkq9uzxEtqMOM2o1nA0vp6jWccCSY22BvZ1yyIdNJljlu-IFghnM-yXPsh2JIJYr5qN5g4XrNy0mjZtpyOqmgeM2wbqLkXbffan7sVQvjTsh3ahELAGx962gD6TDiipPvMGgXWHcmHAka_sUDN2WrNRTLh70BJLB0n22aWDA=w400-h300-rw)
ಭದ್ರಾವತಿ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಕಮಲ್ ರೋಡ್ ಲೈನ್ಸ್ ಮತ್ತು ಶ್ರೀ ಪ್ರಮಿತ್ ರೋಡ್ ಲೈನ್ಸ್ ಉದ್ಯಮಿ, ಸಮಾಜ ಸೇವಕ ಪ್ರಮಿತ್ ಅವರು ಜೈನ ಗುರುಗಳ ಸುಮಾರು ೮ ತಿಂಗಳ ಪಾದಯಾತ್ರೆಯ ಸೇವಾ ಕಾರ್ಯಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡು ಗುರು ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಅವರನ್ನು ರೈಫಲ್ಸ್ ಅಸೋಸಿಯೇಷನ್ಸ್ (ಸಿಆರ್‌ಟಿಸಿ) ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
ಭದ್ರಾವತಿ, ಆ. ೨: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಕಮಲ್ ರೋಡ್ ಲೈನ್ಸ್ ಮತ್ತು ಶ್ರೀ ಪ್ರಮಿತ್ ರೋಡ್ ಲೈನ್ಸ್ ಉದ್ಯಮಿ, ಸಮಾಜ ಸೇವಕ ಪ್ರಮಿತ್ ಅವರು ಜೈನ ಗುರುಗಳ ಸುಮಾರು ೮ ತಿಂಗಳ ಪಾದಯಾತ್ರೆಯ ಸೇವಾ ಕಾರ್ಯಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡು ಗುರು ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಅವರನ್ನು ರೈಫಲ್ಸ್ ಅಸೋಸಿಯೇಷನ್ಸ್ (ಸಿಆರ್‌ಟಿಸಿ) ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
ಜೈನ ಸಮಾಜದ ಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ್ ಮುನಿ ಮಹಾರಾಜ್ ಸೇರಿದಂತೆ ೩೦ ಗುರುಗಳು ಹಾಗು ೧೦೦ ಅನುಯಾಯಿಗಳನ್ನೊಳಗೊಂಡ ತಂಡ ಕಳೆದ ವರ್ಷ ನ.೧೫ರಿಂದ ಬೆಳಗಾವಿಯಿಂದ ರಾಜಸ್ಥಾನದ ಭಗವಾನ್ ಶ್ರೀ ಮಹಾವೀರ್ ಕ್ಷೇತ್ರದ ವರೆಗೂ ಸುಮಾರು ೮ ತಿಂಗಳ ಪಾದಯಾತ್ರೆ ನಡೆಸಿದ್ದು, ಪ್ರತಿದಿನ ಸುಮಾರು ೧೫ ರಿಂದ ೨೦ ಕಿ.ಮೀ ಒಟ್ಟು ೧೮೦೦ ಕಿ.ಮೀ ಯಾತ್ರೆ ಇದಾಗಿದೆ. ಈ ಸಂದರ್ಭದಲ್ಲಿ ಪ್ರಮಿತ್ ಅವರು ಪ್ರತಿ ದಿನ ದಾರಿಯುದ್ದಕ್ಕೂ ಗುರುಗಳ ತಂಡ ಉಳಿದುಕೊಳ್ಳಲು ಶಾಲೆ/ಛತ್ರದ ವ್ಯವಸ್ಥೆ, ಆಹಾರ ತಯಾರಿಕೆಗೆ ಇದ್ದಿಲು ಪೂರೈಕೆ, ಕುಡಿಯಲು ಬಾವಿ ನೀರಿನ ವ್ಯವಸ್ಥೆ ಇತ್ಯಾದಿ ಸೇವೆಗಳನ್ನು ಯಾವುದೇ ಫಲಾಫೇಕ್ಷೆ ಇಲ್ಲದೆ ಕೈಗೊಂಡಿದ್ದಾರೆ. ಅಲ್ಲದೆ ಸುಮಾರು ೫ ವರ್ಷಗಳ ಕಾಲ ಜೈನ ಧರ್ಮದ ಪುಣ್ಯ ಕ್ಷೇತ್ರಗಳಾದ ಶ್ರವಣಬೆಳಗೊಳ, ಧರ್ಮಸ್ಥಳ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದಾರೆ. ಇವರ ಧಾರ್ಮಿಕ ಸೇವಾ ಮನೋಭಾವ ಇತರರಿಗೂ ಸ್ಪೂರ್ತಿದಾಯಕವಾಗಲಿ ಎಂಬ ಉದ್ದೇಶದೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಪ್ರಮಿತ್ ಅವರು ಕೇವಲ ಧಾರ್ಮಿಕ ಸೇವಾ ಕಾರ್ಯ ಮಾತ್ರವಲ್ಲದೆ ರೈಫಲ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಹಳಷ್ಟು ಸೇವಾ ಕಾರ್ಯಗಳಲ್ಲೂ ಪಾಲ್ಗೊಂಡು ಸೇವೆ ಸಲ್ಲಿಸಿದ್ದಾರೆ.
ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಮೂರ್ತಿ, ಕಾರ್ಯದರ್ಶಿ ಎಂ.ಎಸ್ ರವಿ, ಖಜಾಂಚಿ ಅಮಿತ್ ಕುಮಾರ್ ಜೈನ್, ಪ್ರಮುಖರಾದ ಡಿ.ಎನ್ ಅಶೋಕ್, ಸಿ.ಎನ್ ಗಿರೀಶ್, ಜಿ.ಎನ್ ಸತ್ಯಮೂರ್ತಿ, ಕೆ.ಜಿ ರಾಜ್‌ಕುಮಾರ್, ಪಿ.ಸಿ ಜೈನ್, ಮಿಥುನ್, ವೈ. ನಟರಾಜ್, ಮಂಜುನಾಥ್, ಬಾಲಾಜಿ, ರಾಜು, ಅನ್ನಪೂರ್ಣ ಸತೀಶ್, ಲತಾ ಮೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.