ಭದ್ರಾವತಿ ತಾಲೂಕಿನ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ವೀರಾಪುರ ಗ್ರಾಮದ ರೈತರ ಜಮೀನು(ತೋಟ)ಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ ಬುಧವಾರ ಭೇಟಿ ನೀಡಿ ಕಾಲುವೆಗಳ ಪರಿಶೀಲನೆ ನಡೆಸಿದರು.
ಭದ್ರಾವತಿ, ಆ. ೩: ತಾಲೂಕಿನ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ವೀರಾಪುರ ಗ್ರಾಮದ ರೈತರ ಜಮೀನು(ತೋಟ)ಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ ಭೇಟಿ ನೀಡಿ ಕಾಲುವೆಗಳ ಪರಿಶೀಲನೆ ನಡೆಸಿದರು.
ವೀರಾಪುರ ರೈತರು ಈ ಹಿಂದೆ ಅಧ್ಯಕ್ಷರನ್ನು ಖುದ್ದಾಗಿ ಭೇಟಿಯಾಗಿ ಕಾಲುವೆಗಳ ಸಮಸ್ಯೆ ವಿವರಿಸುವ ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿರುವ ಅಧ್ಯಕ್ಷರು ಬುಧವಾರ ಖುದ್ದಾಗಿ ಸ್ಥಳ ವೀಕ್ಷಣೆ ಮಾಡಿ, ಸಂಬಂಧ ಪಟ್ಟ ಅಭಿಯಂತರರ ಜೊತೆ ಚರ್ಚಿಸಿ, ಕಾಲುವೆ ಕಾಮಗಾರಿಗೆ ಅಂದಾಜು ಮೊತ್ತದ ಪಟ್ಟಿ ಸಿದ್ದಪಡಿಸಿ ಕೊಡುವಂತೆ ಸೂಚಿಸಿದರು. ನೀರಾವರಿ ಇಲಾಖೆ ಅಭಿಯಂತರರು, ಗ್ರಾಮದ ಪ್ರಮುಖರು, ರೈತರು ಉಪಸ್ಥಿತರಿದ್ದರು.
No comments:
Post a Comment