Wednesday, August 3, 2022

ಜಾನಪದ ಕಲಾವಿದ ಉಮೇಶ್‌ನಾಯ್ಕರಿಗೆ ಸನ್ಮಾನ : ಆಕಾಡೆಮಿಗೆ ಆಯ್ಕೆ

ಜಾನಪದ ಕಲೆಯಲ್ಲಿ ಸುಮಾರು ೨೫ ವರ್ಷಗಳಿಂದ ತೊಡಗಿಸಿಕೊಂಡು ರಾಜ್ಯಾದ್ಯಂತ ಸಂಚರಿಸಿ ಜಾನಪದ ಕಲೆ ಕುರಿತು ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುತ್ತಿರುವ ಕಲಾವಿದ ಉಮೇಶ್ ನಾಯ್ಕ ಅವರನ್ನು ಶಿವಮೊಗ್ಗ "ಆಸರೆ" ಮಹಿಳಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಆ. ೩: ಜಾನಪದ ಕಲೆಯಲ್ಲಿ ಸುಮಾರು ೨೫ ವರ್ಷಗಳಿಂದ ತೊಡಗಿಸಿಕೊಂಡು ರಾಜ್ಯಾದ್ಯಂತ ಸಂಚರಿಸಿ ಜಾನಪದ ಕಲೆ ಕುರಿತು ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುತ್ತಿರುವ ಕಲಾವಿದ ಉಮೇಶ್ ನಾಯ್ಕ ಅವರನ್ನು ಶಿವಮೊಗ್ಗ "ಆಸರೆ" ಮಹಿಳಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ನಮ್ಮ ಹಿರಿಯರು ಗ್ರಾಮೀಣ ಸೊಗಡಿನ ಆಡು ಭಾಷೆಯಲ್ಲಿ ಜಾನಪದ ಪದಗಳನ್ನು ಕಟ್ಟುತ್ತಾ ಮನಸ್ಸನ್ನು ಹಗುರವಾಗಿಸಿಕೊಳ್ಳುತ್ತಿದ್ದರು. ಇಂತಹ ಜಾನಪದ ಕಲೆ ಪ್ರಸ್ತುತ ದಿನಮಾನಗಳಲ್ಲಿ ಕಣ್ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೂಲತಃ ದಾವಣಗೆರೆ ತಾಲೂಕು ಚಿನ್ನಸಮುದ್ರದ ನಿವಾಸಿ ಉಮೇಶ್‌ನಾಯ್ಕ ಅವರು ಜಾನಪದ ಕಲೆಯನ್ನು ಉಳಿಸಿಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.  
    ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರತಿ ಹಳ್ಳಿಹಳ್ಳಿಗೂ ಕಾಲ್ನಾಡಿಗೆಯಲ್ಲಿ ಸಂಚರಿಸಿ ಜಾನಪದ ಕಲೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕಲೆಯನ್ನು ಮೈಗೂಡಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಇವರ ಕಲಾ ಸೇವೆಯನ್ನು ಗುರುತಿಸಿ "ಆಸರೆ" ಮಹಿಳಾ ಸಂಘ ಸನ್ಮಾನಿಸಿ ಗೌರವಿಸಿದೆ. ಸಂಘದ ಪದಾಧಿಕಾರಿಗಳು, ಮಹಿಳಾ ಪ್ರಮುಖರು ಉಪಸ್ಥಿತರಿದ್ದರು.  


ಜಾನಪದ ಕಲಾವಿದ ಉಮೇಶ್ ನಾಯ್ಕ
    ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಆಕಾಡೆಮಿಗೆ ನೇಮಕ :
    ಇವರ ಕಲಾ ಸೇವೆಯನ್ನು ಗುರುತಿಸಿ ಸರ್ಕಾರ ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಆಕಾಡೆಮಿ ಸದಸ್ಯರನ್ನಾಗಿ ನೇಮಕಗೊಳಿಸಿದೆ.
    ಇತ್ತೀಚೆಗೆ ನಡೆದ ಆಕಾಡೆಮಿಯ ಮೊದಲ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯದ ೩ ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದ್ದು, ಈ ೩ ಜನರ ಪೈಕಿ ಉಮೇಶ್ ನಾಯ್ಕ ಸಹ ಒಬ್ಬರಾಗಿದ್ದಾರೆ. ಇವರಿಗೆ ಜನಪ್ರತಿನಿಧಿಗಳು, ಗಣ್ಯರು, ಜಾನಪದ ಕಲಾವಿದರು ಅಭಿನಂದಿಸಿದ್ದಾರೆ.

No comments:

Post a Comment