ಡಿ.ಎಸ್ ಪರಮೇಶ್ವರ ಆಚಾರ್
ಭದ್ರಾವತಿ, ಆ. ೮: ಆಮ್ ಆದ್ಮಿ ಪಾರ್ಟಿ(ಎಎಪಿ) ತಾಲೂಕು ಅಧ್ಯಕ್ಷರಾಗಿ ಪಕ್ಷದ ಹಿರಿಯ ಕಾರ್ಯಕರ್ತರಾದ ಡಿ.ಎಸ್ ಪರಮೇಶ್ವರ ಆಚಾರ್ ಅವರನ್ನು ನೇಮಕಗೊಳಿಸಲಾಗಿದೆ.
ಪಕ್ಷದ ಜಿಲ್ಲಾ ಸಂಘಟನಾ ಸಂಯೋಜಕ ನವಿಲೇಶ್ ಅವರು ಪಕ್ಷದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿದ್ದಾರೆ.
ಸುಮಾರು ೮ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಿ.ಎಸ್ ಪರಮೇಶ್ವರ ಆಚಾರ್ ಅವರನ್ನು ಅಧ್ಯಕ್ಷರನ್ನಾಗಿ, ಚಂದರಪ್ಪ ಅವರನ್ನು ಗೌರವ ಅಧ್ಯಕ್ಷರನ್ನಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಎ. ಮಸ್ತಾನ್, ಮಾಧ್ಯಮ ಸಲಹೆಗಾರರಾಗಿ ಅಬ್ದುಲ್ ಖದೀರ್, ಅಂತರಜಾಲತಾಣಗಳ ವಕ್ತಾರರಾಗಿ ಟಿ.ವಿ ಜೋಸೆಫ್ ಹಾಗು ಮಹಿಳಾ ಘಟಕದ ಅಧ್ಯಕ್ಷರಾಗಿ ರೇಷ್ಮಾಬಾನು ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಮುಂಬರುವ ೨೦೨೪ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಯುವ ಮುಖಂಡ, ಉದ್ಯಮಿ ಮಾರುತಿ ಮೆಡಿಕಲ್ ಆನಂದ್ ನೇತೃತ್ವದಲ್ಲಿ ಗ್ರಾಮಾಂತರ ಭಾಗದಲ್ಲಿ ಪ್ರಚಾರ ಕಾರ್ಯ ಆರಂಭಗೊಂಡಿದೆ. ಪ್ರತಿ ಮನೆ ಮನೆಗೆ ತೆರಳಿ ಪಕ್ಷದ ಸಾಧನೆಗಳು ಹಾಗು ಭವಿಷ್ಯದಲ್ಲಿ ಪಕ್ಷ ಹೊಂದಿರುವ ಆಶಯಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.