ಭದ್ರಾವತಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ವತಿಯಿಂದ ನಗರಸಭೆ ವಾರ್ಡ್ ನಂ. 2ರ ಕವಲಗುಂದಿ ಹಿಂದೂ ರುದ್ರಭೂಮಿಯಲ್ಲಿ ಭಾನುವಾರ ವನಮಹೋತ್ಸವ ಆಚರಿಸಲಾಯಿತು.
ಬಿಳಿಕಿ ಹಿರೇಮಠ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಯುವ ಘಟಕದ ಅಧ್ಯಕ್ಷ ಕಾರ್ಯಕ್ರಮದ ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಉಪಾಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ, ಖಜಾಂಚಿ ಜಿ.ಎಂ ಮುರ್ತಿ, ಯವ ಘಟಕದ ಉಪಾಧ್ಯಕ್ಷ ಮಹಾದೇವ, ಕಾರ್ಯದರ್ಶಿ ಬಿ.ಎಂ ಚೇತನ್, ಖಜಾಂಚಿ ಬಿ.ಎಂ ರಮೇಶ್, ನಿರ್ದೇಶಕರಾದ ಬಿ.ಓ ಬಸವರಾಜ, ಎಂ. ಮಂಜುನಾಥ್, ವಿನಯ್ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ನಾಗರಾಜ್, ಕಾರ್ಯದರ್ಶಿ ಕವಿತಾ ಸುರೇಶ್, ಸಹ ಕಾರ್ಯದರ್ಶಿ ಉಷಾ, ಮುಖಂಡರಾದ ಮಂಗೋಟೆ ರುದ್ರೇಶ್, ಕೃಷ್ಣರಾಜ್, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿ ಕುಮಾರ್ ಗೌಡ, ರಾಜಣ್ಣ, ಸುರೇಶ್ ಹಾಗೂ ನಗರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
No comments:
Post a Comment