![](https://blogger.googleusercontent.com/img/a/AVvXsEhmPW0mfhziM9JDK7yYW79r2aaW-fswsBE3ZNJ2eqHChf_Q5YxjbQc-VTtyeEU7vXxTJ3_SEqa5TYflX-UzII5259Cuyn4cJH7P40COk08pztW_tDAav8cxkTK3nwvxlVwFHY_XLZ6VzTlWkni1t-FWGX5vEIcpnuq2Ee-Skr7mg977-Ygb8KUwm3IzaQ=w400-h217-rw)
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ವತಿಯಿಂದ ಜಿಲ್ಲೆಯಾದ್ಯಂತ ಜ.೧೧ರವರೆಗೆ ಹಮ್ಮಿಕೊಳ್ಳಲಾಗಿರುವ ಜನ ಚೈತನ್ಯ ಯಾತ್ರೆ ಭಾನುವಾರ ಭದ್ರಾವತಿ ನಗರಕ್ಕೆ ಆಗಮಿಸಿತು. ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಭದ್ರಾವತಿ, ಜ. ೮: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ವತಿಯಿಂದ ಜಿಲ್ಲೆಯಾದ್ಯಂತ ಜ.೧೧ರವರೆಗೆ ಹಮ್ಮಿಕೊಳ್ಳಲಾಗಿರುವ ಜನ ಚೈತನ್ಯ ಯಾತ್ರೆ ಭಾನುವಾರ ನಗರಕ್ಕೆ ಆಗಮಿಸಿತು.
ಪಕ್ಷದ ಸ್ಥಳೀಯ ಮುಖಂಡರು ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿ ಜನ ಚೈತನ್ಯ ಯಾತ್ರೆಗೆ ಸ್ವಾಗತ ಕೋರಿದರು. ನಂತರ ಯಾತ್ರೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮತ್ತು ಹೊಸಮನೆ ಶಿವಾಜಿವೃತ್ತದವರೆಗೂ ಸಾಗಿತು.
ಕರ್ನಾಟಕದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದ ಸ್ಥಾಪನೆಗಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ನೀಲಿ ನಕ್ಷೆ ಎಂಬ ಹಲವು ಭರವಸೆಗಳನ್ನೊಳಗೊಂಡ ಕರಪತ್ರ ವಿತರಿಸುವ ಮೂಲಕ ಪಕ್ಷದ ಕಾರ್ಯಕರ್ತರು ಸಾಗಿದರು.
ಪ್ರಮುಖ ವೃತ್ತಗಳಲ್ಲಿ ಪಕ್ಷದ ಪ್ರಮುಖರು ಮಾತನಾಡಿ, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಎಲ್ಲರಿಗೂ ಮುಕ್ತವಾದ ಅವಕಾಶವಿದೆ. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸುವಂತೆ ಮನವಿ ಮಾಡಿದರು.
ಯಾತ್ರೆಯಲ್ಲಿ ಪಕ್ಷದ ಶಿವಮೊಗ್ಗ ಜಿಲ್ಲಾ ಯುವ ಘಟಕ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಪ್ರಭು, ಬಿ.ಆರ್ ಮಧು, ಅರಳಿಹಳ್ಳಿ ತ್ಯಾಗರಾಜು, ತೀರ್ಥಕುಮಾರ್, ಮಲ್ಲಿಕಾರ್ಜುನ್, ಅಯಾಜ್, ಶರತ್‌ಕುಮಾರ್, ವಿನೋದ್, ವಾಣಿ, ಸುಮಿತ್ರ, ಶಬರೀಶ್, ನಾಗರಾಜ್‌ರಾವ್ ಶಿಂಧೆ, ಭದ್ರಾಕಾಲೋನಿ ಚಿಂಪಯ್ಯ, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.