ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ
![](https://blogger.googleusercontent.com/img/a/AVvXsEjGwSsFgRo5LOFRfIX6CaJmojAL4S6g32RwXjJLqEvpkpogzwFPemB-L1YkTg3m1zwgXtfZGCgXXAVh-5AqogDnIQ5uoDRNUazV8gaz1oPIDOFCgH95cdUCvCuym2S5q2eO0uKdeQ09ZEEEhhAwJkkOKZgx3HFC60vD2Cmjl5KXqus_4MR6bgUBTxyBhHYc=w400-h300-rw)
ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಆಶಾಂತಿ ವಾತಾವರಣ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ವತಿಯಿಂದ ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಜು. ೧೨: ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಆಶಾಂತಿ ವಾತಾವರಣ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ವತಿಯಿಂದ ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮಣಿಪುರ ರಾಜ್ಯದಲ್ಲಿ ಅಮಾಯಕ ಜನರ ಮೇಲೆ ನಿರಂತರ ದಾಳಿ, ದೌರ್ಜನ್ಯ, ಮನೆಗಳಿಗೆ ಬೆಂಕಿ ಹಚ್ಚುವಿಕೆ, ಚರ್ಚ್‌ಗಳ ನಾಶ ಹಾಗೂ ಸಾವಿರಾರು ಜನರು ಮನೆ, ಮಠ, ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿ ವಲಸೆ ಹೋಗುವಂತಹ ಘಟನೆ ಸುಮಾರು ಎರಡು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವುದು ದೇಶದಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಇಡೀ ಮಣಿಪುರ ರಾಜ್ಯ ಅಶಾಂತಿಯ ಬೀಡಾಗಿದೆ ಎಂದು ಪ್ರತಿಭಟನಾ ನಿರಂತರು ಆತಂಕ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳು ನಿರಂತರ ಉಲ್ಲಂಘನೆಯಾಗುತ್ತಿದ್ದು, ಇದನ್ನು ಗಮನಿಸಿ ತಕ್ಷಣ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವುದರ ಮೂಲಕ ನಿಯಂತ್ರಿಸಬೇಕು. ಮನೆ, ಮಠ, ಆಸ್ತಿ ಕಳೆದುಕೊಂಡು ನಷ್ಟಕ್ಕೆ ಒಳಗಾದ ಅಮಾಯಕರಿಗೆ ಅಗತ್ಯವಾದ ಆರ್ಥಿಕ ಹಾಗೂ ಇತರೆ ಪರಿಹಾರ ನೀಡಿ ಅವರ ಬದುಕನ್ನು ರೂಪಿಸಿಕೊಡಲು ಮುಂದಾಗಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರಮುಖರಾದ ಪಾದರ್ ಲಾನ್ಸಿ ಡಿಸೋಜ, ಅಂತೋಣಿ ವಿಲ್ಸನ್, ಟಿ.ಎಸ್ ಪ್ರಭುದಾಸ್, ಸ್ಟೀವನ್ ಡೇಸಾ, ಡಾ. ದೇವನೇಸನ್ ಸ್ಯಾಮ್ಯುಯೆಲ್, ಜೋಸ್ ಜಾರ್ಜ್, ಸೆಲ್ವರಾಜ್, ಜಾರ್ಜ್, ವೆಸ್ಲಿ ವಿಲ್‌ಹೆಲ್ಮ್ ಕರ್ಕಡ, ನಂದಕುಮಾರ್, ಎನ್.ಪಿ ಡೇವಿಸ್, ಎಂ.ಎಸ್ ಸಾಮುವೇಲ್ , ಪ್ರಾನ್ಸಿಸ್ ಸೇರಿದಂತೆ ಕ್ರೈಸ್ತ ಸಮುದಾಯ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.