ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಕ್ರೀಡಾಪಟುಗಳು ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್‌ಹಾಲ್‌ನಲ್ಲಿ ನಡೆದ ಕರ್ನಾಟಕ ಸಬ್-ಜ್ಯೂನಿಯರ್, ಜ್ಯೂನಿಯರ್, ಸೀನಿಯರ್ ಮತ್ತು ಮಾಸ್ಟರ್‍ಸ್ ಇಕ್ವಿಪ್ಡ್ ಮತ್ತು ಕ್ಲಾಸಿಕ್ ಪುರುಷ ಮತ್ತು ಮಹಿಳೆಯರ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭದ್ರಾವತಿ: ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಕ್ರೀಡಾಪಟುಗಳು ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್‌ಹಾಲ್‌ನಲ್ಲಿ ನಡೆದ ಕರ್ನಾಟಕ ಸಬ್-ಜ್ಯೂನಿಯರ್, ಜ್ಯೂನಿಯರ್, ಸೀನಿಯರ್ ಮತ್ತು ಮಾಸ್ಟರ್‍ಸ್ ಇಕ್ವಿಪ್ಡ್ ಮತ್ತು ಕ್ಲಾಸಿಕ್ ಪುರುಷ ಮತ್ತು ಮಹಿಳೆಯರ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕ್ರೀಡಾಪಟುಗಳಾದ ಭದ್ರಾವತಿ ಕಾರಂತ್ ವ್ಯಾಯಾಮ ಶಾಲೆಯ ಪಾಂಡುರಂಗ(ಮಾಸ್ಟರ್-೪) ಮತ್ತು ಪ್ರತೀಕ್ಷ(ಸಬ್-ಜ್ಯೂನಿಯರ್), ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆಯ ಎ.ಜಿ ಅಶ್ವಿನಿ(ಜ್ಯೂನಿಯರ್) ಮತ್ತು ಪಿ. ದೀಪಕ್(ಜ್ಯೂನಿಯರ್), ಮೆರೀನ್ ಫಿಟ್ನೆಸ್ ವ್ಯಾಯಾಮ ಶಾಲೆಯ ವರ್ಷಿತ್ ಎಸ್. ರಾವ್(ಜ್ಯೂನಿಯರ್) ಹಾಗು ಸ್ಟೀಡಿಯಂ ವ್ಯಾಯಾಮ ಶಾಲೆಯ ಎಂ.ವೈ ವೆಂಕಟೇಶ್(ಮಾಸ್ಟರ್-೧) ಬಹುಮಾನಗಳನ್ನು ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ನಡೆಯಲಿರುವ ನ್ಯಾಷನಲ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಕ್ರೀಡಾಪಟುಗಳನ್ನು ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವೈ. ನಟರಾಜ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಂತ್, ಹಿರಿಯ ಕ್ರೀಡಾಪಟುಗಳಾದ ಎ. ಮಸ್ತಾನ್, ಡಾ. ಶಿವರುದ್ರಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.