ಭದ್ರಾವತಿ : ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕಗಳೊಂದಿಗೆ ರ್ಯಾಂಕ್ ಪಡೆದ ಜಿಲ್ಲೆಯ ೩ ಸಾಧಕರಿಗೆ ನಗರದ ರೋಟರಿ ಕ್ಲಬ್ ವತಿಯಿಂದ ಮೇ. ೭ರಂದು ಸಂಜೆ ೬.೩೦ಕ್ಕೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರ್ಯಾಂಕ್ ವಿಜೇತರಾದ ಸಾಗರದ ವಿ. ವಿಕಾಸ್, ಶಿವಮೊಗ್ಗದ ಬಿ.ಎಂ ಮೇಘನಾ ಮತ್ತು ಮಾದೇನಹಳ್ಳಿಯ ಡಾ. ದಯಾನಂದ ಸಾಗರ್ ಅವರನ್ನು ರೋಟರಿ ಕ್ಲಬ್ ವತಿಯಿಂದ ಅಭಿನಂದಿಸಲಾಗುತ್ತಿದ್ದು, ಕ್ಲಬ್ ಅಧ್ಯಕ್ಷ ಜಿ. ರಾಘವೇಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರೋಟರಿ ಪ್ರಮುಖರಾದ ಎಸ್.ಆರ್ ನಾಗರಾಜ್, ಆದರ್ಶ್, ಕ್ಲಬ್ ಕಾರ್ಯದರ್ಶಿ ಎಂ. ನಿರಂಜನ್, ಆನ್ಸ್ ಕ್ಲಬ್ ಅಧ್ಯಕ್ಷೆ ಲೀಲಾವತಿ ಸುಧಾಕರ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.