ತಪ್ಪು ಸರಿಪಡಿಸಿಕೊಂಡು ಮರುಮುದ್ರಿಸಲು ನಗರಸಭೆ ಆಡಳಿತಕ್ಕೆ ಮನವಿ
ಭದ್ರಾವತಿ ನಗರಸಭೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಡಹಬ್ಬ ದಸರಾ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗು ಇದರ ಪ್ರತಿನಿಧಿಯ ಹೆಸರನ್ನು ನಮೂದಿಸದೆ ಅವಮಾನಗೊಳಿಸಲಾಗಿದೆ. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಲಾಗಿದ್ದು, ತಕ್ಷಣ ಸರಿಪಡಿಸಿಕೊಂಡು ಆಹ್ವಾನ ಪತ್ರಿಕೆ ಮರುಮುದ್ರಣಗೊಳಿಸುವಂತೆ ನಗರಸಭೆ ಪೌರಾಯುಕ್ತ ಎನ್.ಕೆ ಹೇಮಂತ್‌ರವರಿಗೆ ಮನವಿ ಸಲ್ಲಿಸಲಾಗಿದೆ.
ಭದ್ರಾವತಿ : ನಗರಸಭೆಯಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಡಹಬ್ಬ ದಸರಾ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗು ಇದರ ಪ್ರತಿನಿಧಿಯ ಹೆಸರನ್ನು ನಮೂದಿಸದೆ ಅವಮಾನಗೊಳಿಸಲಾಗಿದೆ. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಲಾಗಿದ್ದು, ತಕ್ಷಣ ಸರಿಪಡಿಸಿಕೊಂಡು ಆಹ್ವಾನ ಪತ್ರಿಕೆ ಮರುಮುದ್ರಣಗೊಳಿಸುವಂತೆ ನಗರಸಭೆ ಪೌರಾಯುಕ್ತ ಎನ್.ಕೆ ಹೇಮಂತ್‌ರವರಿಗೆ ಮನವಿ ಸಲ್ಲಿಸಲಾಗಿದೆ.
ನಗರಸಭೆಯಿಂದ ಪ್ರಸ್ತುತ ನಾಡಹಬ್ಬ ದಸರಾ ಆಚರಣೆ ಸಂಪ್ರದಾಯ ಬದ್ಧವಾಗಿ, ವೈಭವಯುತವಾಗಿ ಆಚರಿಸಲು ವಿಶ್ವ ಹಿಂದೂ ಪರಿಷತ್ ಹಾಗು ಇದರ ಪ್ರತಿನಿಧಿಯಾದ ಹಾ. ರಾಮಪ್ಪರವರ ನಿಸ್ವಾರ್ಥ ಸೇವೆ ಹೆಚ್ಚಿನದ್ದಾಗಿದೆ. ಹಬ್ಬ ಆರಂಭದಿಂದ ಹಿಡಿದು ಮುಕ್ತಾಯದವರೆಗೂ ಪ್ರತಿ ಹಂತದಲ್ಲೂ ಸಲಹೆ-ಸಹಕಾರ, ಮಾರ್ಗದರ್ಶನ ನೀಡುವ ಮೂಲಕ ಹಬ್ಬದ ಮಹತ್ವ ಹಾಗು ಪರಂಪರೆ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಪರಿಷತ್ ಇದನ್ನು ಸೇವೆಯ ಒಂದು ಭಾಗವಾಗಿ ಪರಿಗಣಿಸಿದೆ. ಪರಿಷತ್ ಸೇವೆ ಹಾಗು ಪ್ರತಿನಿಧಿಯ ಶ್ರಮ ಕಡೆಗಣಿಸಿರುವುದು ವಿಷಾದನೀಯ.
ಈ ಹಿಂದೆ ಸಹ ಇದೆ ರೀತಿಯ ತಪ್ಪು ನಡೆದಿದ್ದು, ಅದನ್ನು ನಾಡಹಬ್ಬ ದಸರಾ ಆಚರಣೆ ಸಮಿತಿಯವರು ಸರಿಪಡಿಸಿಕೊಂಡಿದ್ದರು. ಇದೀಗ ಪುನಃ ಉದ್ದೇಶಪೂರ್ವಕವಾಗಿ ಪರಿಷತ್ ಹಾಗು ಅದರ ಪ್ರತಿನಿಧಿ ಹೆಸರನ್ನು ನಮೂದಿಸದೆ ಸೇವೆ ಹಾಗು ಶ್ರಮ ಕಡೆಗಣಿಸಲಾಗಿದೆ. ತಕ್ಷಣ ತಪ್ಪು ಸರಿಪಡಿಸಿಕೊಂಡು ಆಹ್ವಾನ ಪತ್ರಿಕೆಯಲ್ಲಿ ಮರುಮುದ್ರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ಪ್ರತಿನಿಧಿ ಹಾ. ರಾಮಪ್ಪ, ಬಜರಂಗದಳ ಜಿಲ್ಲಾ ಸಂಚಾಲಕ ರಾಘವನ್ ವಡಿವೇಲು, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.