ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಪ್ರಧಾನ ಶಾಖಾ ಕಛೇರಿಯ ನವೀಕೃತಗೊಂಡ ಕಟ್ಟಡ ಉದ್ಘಾಟನೆ ಗುರುವಾರ ನಡೆಯಿತು.
ಭದ್ರಾವತಿ, ಅ. ೮: ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಪ್ರಧಾನ ಶಾಖಾ ಕಛೇರಿಯ ನವೀಕೃತಗೊಂಡ ಕಟ್ಟಡ ಉದ್ಘಾಟನೆ ಗುರುವಾರ ನಡೆಯಿತು.
ನಗರದ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಶಾಖಾ ಕಛೇರಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಸ್ಟೇಟ್ ಬ್ಯಾಂಕ್ ಮೈಸೂರು ಕೆಲವು ವರ್ಷಗಳ ಹಿಂದೆ ಸ್ಟೇಟ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನಗೊಂಡ ಹಿನ್ನಲೆಯಲ್ಲಿ ಶಿಥಿಲಗೊಂಡ ಕಟ್ಟಡವನ್ನು ನವೀಕರಣಗೊಳಿಸುವ ಕಾರ್ಯ ಕೈಗೊಳ್ಳಲಾಗಿತ್ತು.
ನವೀಕೃತಗೊಂಡ ಕಟ್ಟಡವನ್ನು ಆರ್.ಬಿ.ಓ-೪, ಎ.ಓ-೬, ಶಿವಮೊಗ್ಗ ವಲಯ ವ್ಯವಸ್ಥಾಪಕ ಟಿ. ರಾಮರಾವ್ ಉದ್ಘಾಟಿಸಿದರು. ನವೀಕೃತಗೊಂಡ ಕಚೇರಿಯಲ್ಲಿ ಗ್ರಾಹಕರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಬ್ಯಾಂಕಿನ ಸಿಬ್ಬಂದಿಗಳು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಗ್ರಾಹಕರು ಸೇರಿದಂತೆ ಎಲ್ಲರೂ ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಬೇಕೆಂದು ರಾಮರಾವ್ ಮನವಿ ಮಾಡಿದರು.
ವಿಐಎಸ್‌ಎಲ್ ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್, ಬ್ಯಾಂಕಿನ ಉಪ ವ್ಯವಸ್ಥಾಪಕ ನಾಗರಾಜ್, ಸಿಬ್ಬಂದಿಗಳಾದ ಹೇಮಂತ್, ಸೂರಜ್, ಸರಸ, ಗೀತಾಂಜಲಿ, ರಾಘವೇಂದ್ರ ಗಡ್ಕರ್, ರಮೇಶ್, ಉಮೇಶ್‌ನಾಯ್ಕ್, ಸುಶ್ಮಿತಾ ಭಟ್, ಸುರೇಶ್‌ಕುಮಾರ್, ಭದ್ರತಾ ಸಿಬ್ಬಂದಿಗಳಾದ ಸಂಪತ್, ಗುರುರಾಜ್, ವಿನೋದ್, ಗ್ರಾಹಕರಾದ ದಾಮೋದರ ಬಾಳಿಗ, ಕೆ.ಸಿ ವೀರಭದ್ರಪ್ಪ, ತೀರ್ಥಪ್ಪ ಸೇರಿದಂತೆ ಉಪಸ್ಥಿತರಿದ್ದರು.