Wednesday, October 7, 2020

ಅಪಘಾತ : ಇಬ್ಬರು ಸವಾರರು ಮೃತ

ಭದ್ರಾವತಿ, ಅ. ೭: ನಗರದ ರಾಷ್ಟ್ರೀಯ ಹೆದ್ದಾರಿ ೨೦೬ ಗೌರಪುರ ಗ್ರಾಮದ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ನಡೆದಿದೆ.
ಶಿವಮೊಗ್ಗ ಹೊಳೆಬೆನವಳ್ಳಿ ನಿವಾಸಿ ಶಿವನಾಯ್ಕ(೫೦) ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಬಳ್ಳಾರಿ ಜಿಲ್ಲೆಯ ದುರ್ಗಪ್ಪ(೩೫) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಯಬಾಯಿ ಎಂಬುವರು ಗಾಯಗೊಂಡಿದ್ದು, ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


No comments:

Post a Comment