ಪೌರಾಯುಕ್ತ ಮನೋಹರ್, ಪಿಎಸ್‌ಐ ಬಿ.ಎನ್ ದುರ್ಗಾಪ್ರಸಾದ್, ಇಸ್ರೊ ವಿಜ್ಞಾನಿ ರವಿಶಂಕರ್ ಸೇರಿದಂತೆ ಒಟ್ಟು ೩೩ ಮಂದಿ
ಭದ್ರಾವತಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗು ವಿವಿಧ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೩೩ ಮಂದಿಯನ್ನು ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಿದೆ.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ರಾಂತ ಪ್ರಾಂಶುಪಾಲ, ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ, ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕಿ ಕೆ. ಜ್ಯೋತಿ, ರಾಜ್ಯಮಟ್ಟದ ಖೋ-ಖೋ ಸ್ಪರ್ಧೆಗಳಲ್ಲಿ ಭಾಗವಹಿಸಿ ತಂಡವನ್ನು ಪ್ರತಿನಿಧಿಸುತ್ತಿರುವ ಇದೆ ಶಾಲೆಯ ದೈಹಿಕ ಶಿಕ್ಷಕ ದಯಾನಂದ, ಡಾ. ಬಿ.ಆರ್ ಅಂಬೇಡ್ಕರ್ ಫಿಲಾಸಫಿ ಅವಾರ್ಡ್ ಪ್ರಶಸ್ತಿ ಪುರಸ್ಕೃತ, ಕಾರೇಹಳ್ಳಿ ಡಾ. ಬಿ.ಆರ್ ಅಂಬೇಡ್ಕರ್ ಪ್ರೌಢಶಾಲೆ ದೈಹಿಕ ಶಿಕ್ಷಕ ಶ್ರೀಕಾಂತ್, ಸುಮಾರು ೧೫ ವರ್ಷಗಳಿಂದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೋಧನ ಮತ್ತು ಚೇತನ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ತಾಲೂಕಿನ ಹನುಮಂತಪುರ ಬಡ್ತಿ ಮುಖ್ಯ ಶಿಕ್ಷಕ ಎಸ್. ಪುಟ್ಟರಾಜ್, ಸರ್‌ಎಂವಿ ಸರ್ಕಾರಿ ಕಾಲೇಜಿನ ಆಂಗ್ಲ ಉಪನ್ಯಾಸಕ ಮೊಹಮ್ಮದ್ ನಜೀಬ್, ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಂದ್ರನಾಯ್ಕ ಹಾಗು ಸ್ಮಾರ್ಟ್ ಕ್ಲಾಸ್ ಹಾಗು ಎನ್‌ಜಿಓ ಸಂಸ್ಥೆಯಿಂದ ಅನುದಾನ ಪಡೆದು ಶಾಲೆಯನ್ನು ಅಭಿವೃದ್ಧಿಪಡಿಸಿರುವ ತಾಲೂಕಿನ ಕಲ್ಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನವೀನ್ ಹಿರೇಮಠ್‌ರವರಿಗೆ ಸನ್ಮಾನ ನಡೆಯಲಿದೆ.
ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಸ್ಕೌಟ್ ವಿಭಾಗದಿಂದ ರಾಜ್ಯಪಾಲರಿಂದ ರಾಜ್ಯ ಪುರಸ್ಕಾರ ಪಡೆದ ನಗರದ ಹೊಸಮನೆ ಸೇಂಟ್ ಮೇರಿಸ್ ಶಾಲೆ ವಿದ್ಯಾರ್ಥಿಗಳಾದ ಕೆ. ಸಂಜಯ್ ಸಿಂಗ್, ಎಂ. ಕಿರಣ್‌ರಾವ್, ಬಿ.ಎಸ್ ಮಂಜುನಾಥ್, ಜಿ. ದಿಗಂತ, ಡಿ.ಎನ್ ಪುಜಿತ, ಪಿ. ಚಂದನ ಕುಮಾರ್ ಮತ್ತು ಸ್ವಾಮಿ ವಿವೇಕಾನಂದ ಆವಾರ್ಡ್ ಪ್ರಶಸ್ತಿ ಪುರಸ್ಕೃತ, ರಾಷ್ಟ್ರಮಟ್ಟದ ಖೋ-ಖೋ ಆಟಗಾರ ಕೆ. ಪವನ್ ಕುಮಾರ್ ಹಾಗು ರಾಷ್ಟ್ರಮಟ್ಟದ ಯೋಗಪಟು ಐ.ಪಿ ಮೋಹನ್, ಖೋ-ಖೋ ಇಂಡಿಯಾ ಗೋಲ್ಡ್ ಮೆಡಲ್ ಪ್ರಶಸ್ತಿ ವಿಜೇತರಾದ ಎನ್. ಅಭಿಷೇಕ್, ಎಂ. ಕೋಟೇಶ್ವರ ಮತ್ತು ಯೂತ್ ನ್ಯಾಷನಲ್ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಜಿ.ಎನ್ ಆಕಾಶ್‌ರವರಿಗೆ ಸನ್ಮಾನ ನಡೆಯಲಿದೆ.
ಸರ್ಕಾರಿ ಸೇವೆ ವಿಭಾಗದಿಂದ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿರುವ ನಗರಸಭೆ ಪೌರಾಯುಕ್ತ ಮನೋಹರ್, ಶಿಕ್ಷಣ ಇಲಾಖೆಯ ಟಿ.ಪಿ.ಯು ಪಂಚಾಲ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಕೆ.ಆರ್ ಪ್ರಶಾಂತ್, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್, ಇದೆ ರೀತಿ ಸಾಹಿತ್ಯ ಹಾಗು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಯಾಗಿರುವ ಬೊಮ್ಮನಕಟ್ಟೆ ಕ್ಲಸ್ಟರ್ ಸಿಆರ್‌ಪಿ ಚನ್ನಪ್ಪ, ಕೋಶಾಧ್ಯಕ್ಷರಾಗಿರುವ ಕೈಗಾರಿಕೋದ್ಯಮಿ ಜಿ.ಎನ್ ಸತ್ಯಮೂರ್ತಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂಲತಃ ನಗರದವರಾದ ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ಗಳಾದ ಬಿ.ಎನ್ ದುರ್ಗಾಪ್ರಸಾದ್ ಮತ್ತು ನಾಗೇಂದ್ರ, ವಿಜ್ಞಾನ ವಿಭಾಗದಿಂದ ಇಸ್ರೊ ವಿಜ್ಞಾನಿ ಕಾಗದನಗರದ ನಿವಾಸಿ ರವಿಶಂಕರ್, ಸಮಾಜ ಸೇವೆ ವಿಭಾಗದಿಂದ ಹಳೇನಗರದ ಅಕ್ಕ ಮಹಾದೇವಿ ಬಳಗದ ಬಸವರಾಜಯ್ಯ, ಜಮೀನ್ದಾಋ ಎಚ್.ಎಸ್ ನಾಗರಾಜಪ್ಪ ಮತ್ತು ಮತ್ತು ಹಳೇನಗರ ರಾಘವೇಂದ್ರ ಮಠದ ಸೀತಾರಾಮಣ್ಣ ಸೇರಿದಂತೆ ಒಟ್ಟು ೩೩ ಮಂದಿಯನ್ನು ಸನ್ಮಾನಿಸಿ ಗೌರವಿಸಲಿದೆ.