ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ತಹಸೀಲ್ದಾರ್, ಅಬಕಾರಿ, ರಕ್ಷಣಾ ಇಲಾಖೆಗೆ ಮನವಿ
![](https://blogger.googleusercontent.com/img/b/R29vZ2xl/AVvXsEiBt6bbMKujcqm8ixTPRJ8O23aX_XSMHbVHVZ-JU3kUCm8lPq00GmU-mKENR-R-Wt1FxnTbUo3n0FeQcmbtzgcbNnZwKQeUheH1XJ_rz-_xcO8vFkRVDBfLIdY4fdGZrntTRGFySdukJd0r/w400-h190-rw/D13-BDVT-745378.jpg)
ಭದ್ರಾವತಿ ಡೈರಿ ಸರ್ಕಲ್ ಬಳಿ ತೆರೆಯಲಾಗಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಆ. ೧೩: ನಗರದ ಡೈರಿ ಸರ್ಕಲ್ ಬಳಿ ತೆರೆಯಲಾಗಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಮಾತನಾಡಿ, ಡೈರಿ ಸರ್ಕಲ್ ಅದರಲ್ಲೂ ಬಸ್ ನಿಲ್ದಾಣದ ಬಳಿಯೇ ಅನೇಕ ವರ್ಷಗಳಿಂದ ಎರಡು ಮದ್ಯದಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ.
ಸಮೀಪದಲ್ಲಿ ಆಯುರ್ವೇದಿಕ್ ಕಾಲೇಜು, ಡೈರಿ, ಕೆಎಸ್‌ಆರ್‌ಪಿ ಹಾಗು ಕೈಗಾರಿಕಾ ಪ್ರದೇಶವಿದ್ದು, ಪ್ರತಿದಿನ ಗಾರ್ಮೆಂಟ್ಸ್ ಕೆಲಸಕ್ಕೆ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು, ಪ್ರಯಾಣಿಕರು ಇದೆ ರಸ್ತೆಯಲಿ ಓಡಾಡಬೇಕಾಗಿದೆ. ಈ ಮದ್ಯದಂಗಡಿಗಳಲ್ಲಿ ಮದ್ಯ ಸೇವನೆ ಮಾಡಲು ಬರುವವರಿಂದ ವಿನಾಕಾರಣ ತೊಂದರೆ ಎದುರಾಗಿದೆ. ಆಗಾಗ ಮದ್ಯಸೇವನೆ ಮಾಡುವವರ ನಡುವೆ ಗಲಾಟೆ ನಡೆದು ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಬೇಕು. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಆರ್. ಪ್ರದೀಪ್ ಹಾಗು ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ಮತ್ತು ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ಭಾರತಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಕ್ಷಣಾವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದ, ಉಪಾಧ್ಯಕ್ಷರಾದ ಅನಿತಾ, ಗೌರಮ್ಮ, ತಾಲೂಕು ಅಧ್ಯಕ್ಷೆ ಮಹೇಶ್ವರಿ, ಗೀತಾ, ರೂಪನಾರಾಯಣ, ಪದಾಧಿಕಾರಿಗಳಾದ ನಾಗರತ್ನ, ಶೋಭಾ, ಆಸ್ಮಿತ್‌ತಾಜ್, ಪದ್ಮಮ್ಮ, ಆಯುರ್ವೇದಿಕ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಹಿರೇಮಠ್, ಮುಖಂಡರಾದ ನಾರಾಯಣ ಐಹೊಳೆ, ಪೊಲೀಸ್ ಇಲಾಖೆಯ ಸೋಮಶೇಖರ್, ಪ್ರಶಾಂತ್, ಯಶವಂತ್, ನವೀನ್, ಮಾಯಣ್ಣ, ಬಾಲಕೃಷ್ಣ ಹಾಗು ವಿದ್ಯಾರ್ಥಿಗಳು, ಸ್ಥಳೀಯರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.