Sunday, July 9, 2023

ಉಡಾನ್‌ಯೋಜನೆಯಿಂದಾಗಿ ದೇಶದ ಸರ್ವತೋಮುಖ ಅಭಿವೃದ್ಧಿ

ಮೋರ್ಚಾಗಳ ಸಂಯುಕ್ತ ಸಮಾವೇಶದಲ್ಲಿ ಸಂಸದ ಬಿ.ವೈ ರಾಘವೇಂದ್ರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  9ನೇ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ʻಮೋರ್ಚಾಗಳ ಸಂಯುಕ್ತ ಸಮಾವೇಶʼ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿ ಮಾತನಾಡಿದರು.

 ಭದ್ರಾವತಿ, ಜು. ೧೦ : ಕೇಂದ್ರ ಸರ್ಕಾರದ ಉಡಾನ್‌ಯೋಜನೆ ಮಹತ್ವದ ಯೋಜನೆಯಾಗಿದ್ದು, ಇಂದು ಸಾಮಾನ್ಯ ಜನರು ಅತಿ ಕಡಿಮೆ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡುವಂತಾಗಿದೆ  ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

   ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  9ನೇ ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ʻಮೋರ್ಚಾಗಳ ಸಂಯುಕ್ತ ಸಮಾವೇಶʼ ಉದ್ಘಾಟಿಸಿ ಮಾತನಾಡಿದರು.

     ಉಡಾನ್‌ಯೋಜನೆಯಿಂದಾಗಿ ದೇಶ ಇಂದು ಸರ್ವತೋಮುಖ ಅಭಿವೃದ್ಧಿಯಲ್ಲಿ ಸಾಗುವಂತಾಗಿದೆ. ಸಣ್ಣ ಸಣ್ಣ ನಗರಗಳಲ್ಲೂ ಇಂದು ವಿಮಾನಯಾನ ಸಂಪರ್ಕ ಸಾಧಿಸುವಂತಾಗಿದೆ ಎಂದರು.

  ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿದ್ದು, ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾಗಿದೆ. ಅಲ್ಲದೆ ಕೈಗಾರಿಕೋದ್ಯಮ ಬೆಳವಣಿಗೆ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.



   ಜಿಲ್ಲಾ ಅಭಿಯಾನ ಪ್ರಮುಖ ಅಶೋಕ್ ಮೂರ್ತಿ, ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ಮಂಡಲ ಪ್ರದಾನ ಕಾರ್ಯದರ್ಶಿ ಚನ್ನೇಶ್ಹಿರಿಯ ಕಾರ್ಯಕರ್ತರಾದ ವಿಶ್ವನಾಥ ಕೋಠಿ. ಎಸ್.ಎನ್ ಬಾಲಕೃಷ್ಣ. ನಗರಸಭಾ ಸದಸ್ಯರಾದ ವಿ. ಕದಿರೇಶ್, ಶಶಿಕಲಾ ನಾರಾಯಣಪ್ಪ. ಅನುಪಮ ಚನ್ನೇಶ್. ಅನಿತಾ ಮಲ್ಲೇಶ್. ಜಿ. ಆನಂದ್ ಕುಮಾರ್, ಎಂ. ಮಂಜುನಾಥ್. ಎಂ.ಎಸ್‌ಸುರೇಶಪ್ಪ. ರಾಮಲಿಂಗಯ್ಯ. ವಿಶ್ವನಾಥ್ ರಾವ್. ಕರಿ ಗೌಡ, ಮೋರ್ಚಾ ಅಧ್ಯಕ್ಷರುಗಳು, ಮುಖಂಡರು, ಜಿಲ್ಲಾ ಪ್ರಮುಖರಾದ ಎಂ.ಜೆ ಸುಬ್ರಮಣಿ, ನಾಗರಾಜ್ ಅಂಬೋರೆ. ರೇಖಾ ಪದ್ಮಾವತಿ, ಧನುಷ್, ಚಂದ್ರಪ್ಪ, ಕೃಷ್ಣಮೂರ್ತಿ, ಎಂ ಶೇಖರಪ್ಪ, ಇಮ್ರಾನ್,  ಉಮಾವತಿ, ಲೋಲಾಕ್ಷಮ್ಮ. ಮೋರ್ಚಾ ಪದಾಧಿಕಾರಿಗಳು ಮತ್ತು ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಜ್ಯಮಟ್ಟದ ಉಚಿತ ಸಾಮೂಹಿಕ ವಿವಾಹ


    ಭದ್ರಾವತಿ, ಜು. ೯: ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ ರಾಜ್ಯಮಟ್ಟದ ಉಚಿತ ಸಾಮೂಹಿಕ ವಿವಾಹ ನವಂಬರ್‌ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ.
    ಎಲ್ಲಾ ಧರ್ಮ, ಜಾತಿಯ ೧೮ ವರ್ಷ ಮೇಲ್ಪಟ್ಟ ವಧು ಮತ್ತು ೨೧ ಮೇಲ್ಪಟ್ಟ ವರ ಸಾಮೂಹಿಕ ವಿವಾಹದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
    ಆಸಕ್ತರು ಆಧಾರ್‌ ಕಾಡ್‌ ಮತ್ತು ಟಿಸಿ ಅಥವಾ ಜನನ ಪ್ರಮಾಣ ಪತ್ರ ಹಾಗು ಜಾತಿ ಪ್ರಮಾಣ ಪತ್ರ ನಕಲು ದಾಖಲಾತಿಗಳನ್ನು ನೀಡತಕ್ಕದ್ದು, ಎನ್‌ಟಿಬಿ ರಸ್ತೆ, ಜನ್ನಾಪುರ, ಭದ್ರಾವತಿ-೫೭೭೩೦೧ ವಿಳಾಸಕ್ಕೆ ತಲುಪಿಸತಕ್ಕದ್ದು, ಹೆಚ್ಚಿನ ಮಾಹಿತಿಗೆ  ಎಸ್.‌ ಮಂಜುನಾಥ್‌, ಮೊ: ೯೪೦೦೩೭೭೫೮, ಸಿ ಪ್ರಭಾಕರ್‌ ಮೊ: ೮೨೯೭೩೯೪೬೮೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ರಂಗಕಲಾವಿದರು ಒಕ್ಕೂಟ ಉದ್ಘಾಟನೆ

ಭದ್ರಾವತಿ ಕನಕಮಂಟಪದಲ್ಲಿ ಆಯೋಜಿಸಲಾಗಿದ್ದ ರಂಗ ಕಲಾವಿದರು, ಭದ್ರಾವತಿ ಒಕ್ಕೂಟದ ಉದ್ಘಾಟನೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ ನೆರವೇರಿಸಿದರು.
    ಭದ್ರಾವತಿ, ಜು. ೯ :  ರಂಗ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಂಗ ಕಲಾವಿದರು, ಭದ್ರಾವತಿ ಒಕ್ಕೂಟದ ಉದ್ಘಾಟನೆ   ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ ನೆರವೇರಿಸಿದರು.
     ಹಳೇನಗರದ ಕನಕಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್‌ ರಂಗಭೂಮಿ ಕುರಿತು ಉಪನ್ಯಾಸ ನೀಡಿದರು. ಒಕ್ಕೂಟದ ಅಧ್ಯಕ್ಷ ಬಿ. ಕಮಲಾಕರ್‌ ಅಧ್ಯಕ್ಷತೆ ವಹಿಸಿದ್ದರು.  
    ನಗರಸಭೆ ನೂತನ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಒಕ್ಕೂಟದ ಉಪಾಧ್ಯಕ್ಷ ಜಿ. ದಿವಾಕರ್‌, ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್‌, ಕಾರ್ಯದರ್ಶಿ ಬಿ. ಚಿದಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, July 8, 2023

ಆರ್.‌ ಭವ್ಯರಿಗೆ ಪಿಎಚ್‌ಡಿ ಪದವಿ

ಆರ್.‌ ಭವ್ಯ

    ಭದ್ರಾವತಿ, ಜು. : ನಗರದ ಹೊಸಸೇತುವೆ ರಸ್ತೆ, ಕೆಎಸ್ಆರ್ಟಿಸಿ ಬಸ್ಘಟಕದ ಸಮೀಪದಲ್ಲಿರುವ ಡಿ.ಕೆ ಶಿವಕುಮಾರ್ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆರ್.‌ ಭವ್ಯರಿಗೆ  ಪಿಎಚ್ಡಿ ಪದವಿ ಲಭಿಸಿದೆ.

          ಭವ್ಯ ಅವರು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ. ಜಗನ್ನಾಥ ಕೆ. ಡಾಂಗೆ ಅವರ ಮಾರ್ಗದರ್ಶನದಲ್ಲಿ ʻರಿಲೇಷನ್ಶಿಪ್ಆಫ್ಹ್ಯಾಪಿ ಟೀಚಿಂಗ್ಫ್ಯಾಕ್ಟರ್ಸ್ವಿತ್ಸ್ಟುಡೆಂಟ್ಸ್ಪರ್ಸೆಪ್ಕ್ಷನ್ಟುವರ್ಡ್ಸ್ಹ್ಯಾಪಿ ಲರ್ನಿಂಗ್, ಅಟ್ಟಿಟ್ಯುಡ್, ಟುವರ್ಡ್ಸ್ಲರ್ನಿಂಗ್ಅಂಡ್ಅಕಡೆಮಿಕ್ಅಚೀವ್ಮೆಂಟ್ಅಟ್ಸೆಕೆಂಡರಿ ಸ್ಕೂಲ್ಲೆವೆಲ್(Relationship Of Happy Teaching  Factors With Students' Perception Towards Happy Learning, Attitude Towards Learning And Academic Achievement At Secondary School Level) ಎಂಬ ವಿಷಯ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಕುವೆಂಪು ವಿಶ್ವ ವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ. ಆರ್. ಭವ್ಯರವರು ಬೊಮ್ಮನಕಟ್ಟೆ ಸರ್ಕಾರಿ ಶಾಲೆಯ ಶಿಕ್ಷಕ . ತಿಪ್ಪೇಸ್ವಾಮಿಯವರ ಪತ್ನಿಯಾಗಿದ್ದು, ಇವರನ್ನು ನಗರದ ಅನೇಕ ಗಣ್ಯರು ಅಭಿನಂದಿದ್ದಾರೆ.  

ನ್ಯೂಟೌನ್‌ ಪೊಲೀಸರ ಕಾರ್ಯಾಚರಣೆ : ಓರ್ವನ ಸೆರೆ

೪ ಪ್ರಕರಣ ದಾಖಲು : ೪ ದ್ವಿಚಕ್ರ ವಶ

ಭದ್ರಾವತಿ ನ್ಯೂಟೌನ್‌ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಭದ್ರಾವತಿ, ಜು. ೮: ನ್ಯೂಟೌನ್‌ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ತಾಲೂಕಿನ ದಾನವಾಡಿ ಗ್ರಾಮದ ನಿವಾಸಿ ಉಮೇಶ್‌(೪೧) ಬಂಧಿತ ವ್ಯಕ್ತಿಯಾಗಿದ್ದು, ಈತನಿಂದ ಒಟ್ಟು ೧.೨೫ ಲಕ್ಷ ರು. ಮೌಲ್ಯದ ನಾಲ್ಕು ವಿವಿಧ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.  ನ್ಯೂಟೌನ್‌ ಠಾಣೆಯಲ್ಲಿ ಒಟ್ಟು ೩ ಪ್ರಕರಣ ಹಾಗು ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿತ್ತು.
   ಜಿಲ್ಲಾ ರಕ್ಷಣಾಧಿಕಾರಿ  ಜಿ.ಕೆ  ಮಿಥುನ್ ಕುಮಾರ್, ಹೆಚ್ಚುವರಿ  ರಕ್ಷಣಾಧಿಕಾರಿ  ಅನಿಲ್‌ಕುಮಾರ್‌ ಭೂಮಾರೆಡ್ಡಿ,   ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮರವರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿಗಳಾದ ಟಿ. ರಮೇಶ್  ಮತ್ತು  ಭಾರತಿ  ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿ ವೆಂಕಟೇಶ್ ಹಾಗು ಸಿಬ್ಬಂದಿಗಳಾದ ರಂಗನಾಥ್, ತೀರ್ಥಲಿಂಗಪ್ಪ ಮತ್ತು ಪ್ರವೀಣ್ ಕುಮಾರ್  ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿದೆ.

Friday, July 7, 2023

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯತೀರ್ಥರ ಆರಾಧನೆ

ಭದ್ರಾವತಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಜಯತೀರ್ಥರ ಆರಾಧನೆ ನಡೆಯಿತು.
ಭದ್ರಾವತಿ, ಜು. ೭ : ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಜಯತೀರ್ಥರ ಆರಾಧನೆ ನಡೆಯಿತು.
    ಬೆಳಿಗ್ಗೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ ಮತ್ತು ಪ್ರಾಕಾರದ ಒಳಗಡೆ ರಥೋತ್ಸವ ಹಾಗೂ ಶಿವಮೊಗ್ಗ ಶ್ರೀನಿಧಿ ಗುಡಿ ಅವರಿಂದ ಜಯತೀರ್ಥರ ಕುರಿತು ಉಪನ್ಯಾಸ  ನಡೆಯಿತು. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ನೆರೆವೇರಿತು.
    ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ ತಂತ್ರಿ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್,  ನಿರಂಜನಾಚಾರ್ಯ, ಮಧುರ,  ಜಯತೀರ್ಥ, ಗೋಪಾಲಕೃಷ್ಣ ಆಚಾರ್,  ಶ್ರೀನಿವಾಸ ಆಚಾರ್, ಶುಭ ಗುರುರಾಜ್, ಸುಪ್ರೀತಾ ತಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಬಿ.ಎಸ್‌ ಶಶಿಕಾಂತ್‌ ನಿಧನ


ಬಿ.ಎಸ್‌ ಶಶಿಕಾಂತ್‌
    ಭದ್ರಾವತಿ, ಜು. ೭ : ತಾಲೂಕಿನ ರಾಮನಗರ ನಿವಾಸಿ, ಯುವ ಮುಖಂಡ ಬಿ.ಎಸ್‌ ಶಶಿಕಾಂತ್‌(೩೫) ಶುಕ್ರವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಕೆಲವು ದಿನಗಳ ಹಿಂದೆ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಇವರ ತಂದೆ ಮಾವಿನಕೆರೆ ಗ್ರಾಮ ಪಂಚಾಯಿತಿ ನಿವೃತ್ತ ಕಾರ್ಯದರ್ಶಿ ಸಿದ್ದಲಿಂಗೇಗೌಡ್ರು ನಿಧನ ಹೊಂದಿದ್ದರು.
    ಶಶಿಕಾಂತ್‌ ನಿಧನಕ್ಕೆ ರಾಮನಗರ ಗ್ರಾಮಸ್ಥರು, ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.