ಬಿ.ಎಸ್ ಶಶಿಕಾಂತ್
ಭದ್ರಾವತಿ, ಜು. ೭ : ತಾಲೂಕಿನ ರಾಮನಗರ ನಿವಾಸಿ, ಯುವ ಮುಖಂಡ ಬಿ.ಎಸ್ ಶಶಿಕಾಂತ್(೩೫) ಶುಕ್ರವಾರ ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಕೆಲವು ದಿನಗಳ ಹಿಂದೆ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಇವರ ತಂದೆ ಮಾವಿನಕೆರೆ ಗ್ರಾಮ ಪಂಚಾಯಿತಿ ನಿವೃತ್ತ ಕಾರ್ಯದರ್ಶಿ ಸಿದ್ದಲಿಂಗೇಗೌಡ್ರು ನಿಧನ ಹೊಂದಿದ್ದರು.
ಶಶಿಕಾಂತ್ ನಿಧನಕ್ಕೆ ರಾಮನಗರ ಗ್ರಾಮಸ್ಥರು, ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
No comments:
Post a Comment